Toxic Teaser: ರಾವಣನ ಲುಕ್‌ನಲ್ಲಿ ಯಶ್‌ ಆರ್ಭಟ; 8 ವರ್ಷಗಳ ಬಳಿಕ ಆ ಸರ್ಪ್ರೈಸ್‌ ನೋಡಿ ವೀಕ್ಷಕರು ಕಂಗಾಲು

Published : Feb 20, 2026, 10:09 AM IST

Yash Toxic Movie: ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ. ಮಾರ್ಚ್‌ 19ಕ್ಕೆ ಈ ಸಿನಿಮಾ ರಿಲೀಸ್‌ ಆಗಲಿದ್ದು, ದೊಡ್ಡ ಮಟ್ಟದ ಕುತೂಹಲ ಸೃಷ್ಟಿಸಿದೆ. ಹಾಗಾದರೆ ಟೀಸರ್‌ನಲ್ಲಿ ಏನಿದೆ? 

PREV
17
ಮಾರ್ಚ್ 19 ಕ್ಕೆ ರಿಲೀಸ್‌

ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಮಾರ್ಚ್ 19 ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ.

ರಾಕಿಂಗ್‌ ಸ್ಟಾರ್‌ ಯಶ್ ನಟನೆಯ ಪ್ಯಾನ್ ವರ್ಲ್ಡ್ ಸಿನಿಮಾಕ್ಕೆ ಗೀತು ಮೋಹನ್ ದಾಸ್ ಅವರು ನಿರ್ದೇಶನ ಮಾಡಿದ್ದಾರೆ.

27
ಎಲ್ರೂನೂ ಎದುರ್ ಹಾಕೊಂಡ್ ಬದುಕೋಕ್ ಆಗಲ್ಲ

ಈ ಹಿಂದೆ ಬಂದ ಯಶ್‌ ಅವರ ಕ್ಯಾರೆಕ್ಟರ್ ಟೀಸರ್ ದೊಡ್ಡ ಹಿಟ್ ಆಗಿತ್ತು. ಐದು ಭಾಷೆಯಲ್ಲೂ ಟೀಸರ್ ಬಿಡುಗಡೆಯಾಗಿದೆ. “ಎಲ್ರೂನೂ ಎದುರ್ ಹಾಕೊಂಡ್ ಬದುಕೋಕ್ ಆಗಲ್ಲ” ಅಂತ ಡೈಲಾಗ್ ಮೂಲಕ ಕುತೂಹಲ ಹುಟ್ಟಿಸಿರೋ ಟೀಸರ್ ಕುತೂಹಲ ಸೃಷ್ಟಿಸಿದೆ.

37
ಈ ಸಲ ಯುದ್ಧವೇ ಬೇರೆ

ಈ ಸಲ ಯುದ್ಧವೇ ಬೇರೆ ಅನ್ನೋ ಡೈಲಾಗ್ ಟೀಸರ್‌ನಲ್ಲಿದೆ. ವಯಲೆಂಟ್ ರಾಯನಾಗಿ ಯಶ್ ಘರ್ಜನೆ ಮಾಡಿದ್ದಾರೆ. 1 ನಿಮಿಷ 55 ಸೆಕೆಂಡ್ ಇರುವ ಟಾಕ್ಸಿಕ್ ಟೀಸರ್‌ ಇದಾಗಿದೆ. ಯಶ್ ಮಾಸ್ ಆಕ್ಷನ್‌ ಸಿನಿಮಾವಿದು. ರಕ್ತಸಾಗರ ಹರಿಸೋ ರಾಯ ಡುಯಲ್ ಶೇಡ್‌ನಲ್ಲಿ ಯಶ್.. ಕುತೂಹಲ ಮೂಡಿಸಿದ ಟೀಸರ್ ಇದಾಗಿದೆ.

47
ಬರೀ ಆಕ್ಷನ್‌, ರಕ್ತದ ಓಕುಳಿ

ಅಂದಹಾಗೆ ಈ ಟೀಸರ್‌ನಲ್ಲಿ ರಕ್ಷ, ಆಕ್ಷನ್‌, ಫೈಟ್‌ ದೃಶ್ಯಗಳೇ ತುಂಬಿವೆ. ಇದು ಕೂಡ ಸಾಕಷ್ಟು ಜನರಿಗೆ ಭಯ ಹುಟ್ಟಿಸಿದೆ. ಟೀಸರ್‌ನಲ್ಲಿರುವ ಆಕ್ಷನ್‌ ದೃಶ್ಯಗಳನ್ನು ಕೆಲವನ್ನು ನೋಡಲು ಮೈ ಝುಮ್‌ ಎನಿಸುವುದು.

57
ಗಡ್ಡ ಇಲ್ಲ

ಇನ್ನು ಯಶ್‌ ಅವರು ಗಡ್ಡವಿಲ್ಲದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್‌ ಸಿನಿಮಾ ತೆರೆ ಕಂಡು ಎಂಟು ವರ್ಷಗಳಾಗುತ್ತ ಬಂತು, ಅಲ್ಲಿಂದ ಇಲ್ಲಿಯವರೆಗೆ ಯಶ್‌ ಅವರು ಗಡ್ಡ ಬಿಟ್ಟುಕೊಂಡೇ ಇದ್ದಾರೆ. ಯಶ್‌ ಅವರನ್ನು ಗಡ್ಡವಿಲ್ಲದೆ ನೋಡಿ ವೀಕ್ಷಕರು ಕೂಡ ಆಶ್ಚರ್ಯಪಟ್ಟಿದ್ದಾರೆ.

67
ರಾವಣನ ಲುಕ್

ಈ ಸಿನಿಮಾದಲ್ಲಿ ಯಶ್‌ ಅವರು ರಾವಣನ ಥರ ಲುಕ್‌ ನೀಡಿದ್ದಾರೆ. ಇದನ್ನು ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಟೀಸರ್‌ ರಿಲೀಸ್‌ ಆದ ಅರ್ಧ ಗಂಟೆಗೆ ಮೂರು ಸಾವಿರಕ್ಕೂ ಅಧಿಕ ಕಾಮೆಂಟ್ಸ್‌ ಬಂದಿವೆ.

77
ಅಸಭ್ಯ ಭಾಷೆ

ಯಶ್‌ ಅವರು ಅಸಭ್ಯ ಭಾಷೆ ಬಳಸಿದ್ದಾರೆ. ಈ ಹಿಂದಿನ ಟೀಸರ್‌ನಲ್ಲಿ ಸಂಚಲನ ಮೂಡಿಸುವ ಕಾರ್‌ ದೃಶ್ಯವಿತ್ತು. ಈ ಬಾರಿ ಈ ಭಾಷೆ ಕೂಡ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories