ಹೆಮ್ಮೆ ಅನ್ಕೊಳ್ಳಿ, ಜಂಬ ಅನ್ಕೊಳ್ಳಿ, ನನ್ನ ಈ ಸಾಧನೆಗೆ ಅವ್ರೇ ಕಾರಣ: YouTuber Bhumika Deshpande

Published : Feb 20, 2026, 09:46 AM IST

Actress Bhumika Deshpande: ಯುಟ್ಯೂಬರ್‌, ನಟಿ, ಫಿಟ್‌ನೆಸ್‌ ಕೋಚ್‌ ಆಗಿರುವ ಭೂಮಿಕಾ ದೇಶಪಾಂಡೆ ಅವರು ಹೊಸ ಕಾರ್‌ ಖರೀದಿ ಮಾಡಿದ್ದಾರೆ. ಈ ಬಗ್ಗೆ ಅವರು ಸಂಕ್ಷಿಪ್ತ ಬರಹದೊಂದಿಗೆ ಪೋಸ್ಟ್‌ ಕೂಡ ಹಂಚಿಕೊಂಡಿದ್ದಾರೆ. ಹಾಗಾದರೆ ಭೂಮಿಕಾ ಪೋಸ್ಟ್‌ನಲ್ಲಿ ಏನಿತ್ತು? 

PREV
14
ಬೀದೀಲಿ ಬೀಳ್ತ್ಯಾ

“ರಾಯರ ಆಶೀರ್ವಾದ - ಅಪ್ಪ ಇದ್ದಿದ್ರೆ ಊರೆಲ್ಲ ಹೇಳ್ತಿದ್ರು, ನನ್ ಮಗಳು ಸ್ವಂತ ದುಡಿಮೆಲಿ ಬದುಕ್ತಿದ್ದಾಳೆ ನೋಡಿ ಅಂತ. ನಾನು ಕಷ್ಟದಲ್ಲಿದ್ದಾಗ ಜೊತೇಲಿ ನಿಂತು ಸಹಾಯ ಮಾಡಿದ್ದು ರಾಯರೊಬ್ಬರೇ, ನಿನ್ನ ಕೈಯಲ್ಲಿ ಆಗಲ್ಲ, ಬೀದೀಲಿ ಬೀಳ್ತ್ಯಾ, ಹೀಗೆಲ್ಲ ಅಂದವರ ಮುಂದೆ ಒಂದು ಹೆಣ್ಣು ಮನಸ್ಸು ಮಾಡಿದ್ರೆ ಏನ್ ಬೇಕಾದರೂ ಮಾಡಬಹುದು ಅಂತ ತೋರಿಸಿಕೊಟ್ಟಿದ್ದು ಕೈ ಹಿಡಿದು ನಡೆಸಿದ್ದು ನನ್ನ ರಾಯರು” ಎಂದು ಭೂಮಿಕಾ ಹೇಳಿದ್ದಾರೆ.

24
ರಾಯರೇ ಕಾರಣ

“ಹೆಮ್ಮೆಯಿಂದ ಹೇಳ್ತಿನಿ ಅಥವಾ ಜಂಬ ಅಂದುಕೊಂಡರು ಪರ್ವಾಗಿಲ್ಲ, ನನ್ನ ಈ ಚಿಕ್ಕ ಸಾಧನೆಗೆ ನನ್ನ ರಾಯರಷ್ಟೇ ಕಾರಣ, My whole credits to him” ಎಂದು ಭೂಮಿಕಾ ಹೇಳಿದ್ದಾರೆ.

34
ಪಾಸಿಟಿವ್‌ ಮಾತಾಡೋರಿಗೆ...

“ಜೊತೆಗೆ ನಿಂತು ನಾನ್ ಏನ್ ಮಾಡಿದ್ರು ಪಾಸಿಟಿವ್ ಮಾತಾಡೋ ಎಲ್ಲಾ ಮಂದಿಗೂ, ನಿಮಗೆ ವಿಶೇಷ ಧನ್ಯವಾದಗಳು, ಏಕೆಂದರೆ ದೇವರಿಗೆ ಹೂವ ಹಾಕಿದ್ರು ನಾನ್ ಕೆಟ್ಟವಳು ಅಂತ ಮಾತಾಡೋ ನೆಗೆಟಿವ್‌ ಜನರನ್ನು ಸೈಡ್ ಇಟ್ಟು, ನೀನು ಬೆಳಿ ಅಂತ ಒಳ್ಳೇದ್ ಬಯಸೋ ನಿಮಗೆ ನನ್ನ ಸಾಷ್ಟಾoಗ ನಮನಗಳು” ಎಂದು ಹೇಳಿದ್ದಾರೆ.

44
ಇನ್ನು ನನ್ನ ಬೆಳೆಸ್ತಾರೆ

“ಭೂಮಿಕಾ ಬದುಕೋದೇ ಇಲ್ಲ ಅಂದವರ ಮುಂದೆ ನಾನಿದ್ದೀನಿ ಹಾರಾಡು ಅಂತ ರೆಕ್ಕೆ ಕೊಟ್ಟಿದ್ದು ನನ್ನಪ್ಪ ರಾಯರು. ಆಡಿಕೊಂಡವರ ಮುಂದೆ, ಮೋಸ ಮಾಡಿದವರ ಮುಂದೆ ಇನ್ನು ಬೆಳೆಸ್ತಾರೆ, ಗೆಲ್ಲಿಸ್ತಾರೆ ನೋಡ್ತಿರಿ” ಎಂದು ಭೂಮಿಕಾ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories