'ಲಕ್ಷ್ಮೀ ನಿವಾಸ' ಖ್ಯಾತಿಯ ನಟಿ ಅನಿಕಾ ಸಿಂಧ್ಯ ಅವರು ತಮ್ಮ ಪ್ರೀತಿಯಲ್ಲಿನ ಮೋಸ ಮತ್ತು ಖಿನ್ನತೆಯ ಬಗ್ಗೆ ಮಾತನಾಡಿದ್ದಾರೆ. ತಾವು ಪ್ರೀತಿಸಿದ ವ್ಯಕ್ತಿಗಿಂತ, ಆತನಿಗಾಗಿ ವ್ಯರ್ಥ ಮಾಡಿದ ಸಮಯದ ಬಗ್ಗೆ ಹೆಚ್ಚು ಪಶ್ಚಾತ್ತಾಪವಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಲಕ್ಷ್ಮೀ ಬಾರಮ್ಮ ಸೇರಿದಂತೆ 50ಕ್ಕೂ ಅಧಿಕ ಸೀರಿಯಲ್ಗಳಲ್ಲಿ ನಟಿಸಿ, ಸುಮಾರು ಎಂಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರೊ ನಟಿ ಅನಿಕಾ ಸಿಂಧ್ಯ. ಯಾಹೂ, ಜೊತೆಜೊತೆಯಲಿ, ನೆನಪಿರಲಿ ಮುಂತಾದ ಹಿಟ್ ಸಿನಿಮಾಗಳನ್ನು ನೀಡಿದ್ದರೂ, ನನ್ನಂಥವಳಿಗೆ ಸಿನಿಮಾ ಇಂಡಸ್ಟ್ರಿ ಉಸಾಬರಿಯೇ ಬೇಡ ಎಂದುಕೊಂಡು ಸಿನಿಮಾದಿಂದ ಹೊರಕ್ಕೆ ಬಂದು ಸೀರಿಯಲ್ಗಳಲ್ಲಿಯೇ ಮಿಂಚುತ್ತಿರುವ ಅನಿಕಾ ಅವರು ಸೀರಿಯಲ್ ಪ್ರೇಮಿಗಳ ಫೆವರೆಟ್ ವಿಲನ್ ಕೂಡ ಹೌದು. ಸದ್ಯ ಅವರು ಲಕ್ಷ್ಮೀ ನಿವಾಸದಲ್ಲಿ (Lakshmi Nivasa Serial) ನೀಲು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
26
ನೆಗೆಟಿವ್ ರೋಲ್ಗಳಿಂದ ಜನಪ್ರಿಯ
ಈಗ ನಟಿಸಿರುವ ಹಲವಾರು ಸೀರಿಯಲ್ಗಳಲ್ಲಿ ಇವರದ್ದು ನೆಗೆಟಿವ್ ರೋಲ್ಗಳೇ. ಒಂದು ನೆಗೆಟಿವ್ ರೋಲ್ ಹಿಟ್ ಆಯಿತು ಎಂದಾಕ್ಷಣ ಸಹಜವಾಗಿ ಅದೇ ರೋಲ್ಗಳು ನಟ-ನಟಿಯರನ್ನು ಹುಡುಕಿ ಬರುವುದು ಇದೆ. ಅವರಿಗೆ ಇಷ್ಟ ಇರಲಿ, ಇಲ್ಲದೇ ಇರಲಿ, ಇಂಥ ರೋಲ್ ಮಾಡುವುದು ಅನಿವಾರ್ಯ ಎನ್ನುವ ಸನ್ನಿವೇಶವೂ ಎದುರಾಗಿಬಿಡುತ್ತದೆ. ಅಂಥವರಲ್ಲಿ ಒಬ್ಬರು ಅನಿಕಾ.
36
ಪ್ರೀತಿಯಲ್ಲಿ ಮೋಸ ಹೋದೆ
ಇದೀಗ ನಟಿ, ತಮ್ಮ ಲವ್ ಫೇಲ್ಯೂರ್ ಮತ್ತು ಡಿಪ್ರೆಷನ್ ಬಗ್ಗೆ ಮಾತನಾಡಿದ್ದಾರೆ. SumanTv Kannada Entertainmentಗೆ ನೀಡಿರುವ ಸಂದರ್ಶನದಲ್ಲಿ ನಟಿ ಈ ಬಗ್ಗೆ ಮಾತನಾಡಿದ್ದಾರೆ. ನಾನು ಪ್ರೀತಿಯಲ್ಲಿ ಮೋಸ ಹೋದೆ. ಆದರೆ ಆ ಹುಡುಗನನ್ನು ಕಳೆದುಕೊಂಡೆ ಅಂತ ಡಿಪ್ರೆಷನ್ಗೆ ನಾನು ಹೋಗಲಿಲ್ಲ. ಆದರೆ ನನ್ನ ಜೀವನದ ಅಮೂಲ್ಯ ವರ್ಷಗಳನ್ನು ಆತನಿಗಾಗಿ ಕಳೆದುಬಿಟ್ಟೆನಲ್ಲ ಎಂದು ಒಂದು ರೀತಿ ಡಿಪ್ರೆಷನ್ ಆಯ್ತು. ಅದನ್ನು ಖಿನ್ನತೆ ಎನ್ನಲು ಆಗದು. ನನ್ನನ್ನು ನಾನು ಹೀಲ್ ಮಾಡಿಕೊಳ್ಳಲು ಕೊಟ್ಟಿರುವ ಟೈಮ್ ಅದು ಎಂದಿದ್ದಾರೆ ನಟಿ ಅನಿಕಾ.
ನಾನು ಅರ್ಜೆಂಟ್ನಲ್ಲಿ ಯಾಕೆ ಟೈಂ ವೇಸ್ಟ್ ಮಾಡಿಕೊಂಡೆ. ಆ ಬಾವಿಯೊಳಗೆ ತರಾತುರಿಯಲ್ಲಿ ಯಾಕೆ ಬಿದ್ದೆ, ಈಗಿರುವ ಮೈಂಡ್ಸೆಟ್, ಕೂಲ್ ಆಗಿ ಯೋಚನೆ ಮಾಡುವುದು ಯಾಕೆ ಆ ಟೈಮ್ನಲ್ಲಿ ನನಗೆ ಬರಲಿಲ್ಲ ಎನ್ನುವ ಬಗ್ಗೆ ನೋವಾಗ್ತಿದೆ. ಇದರಿಂದ ನನಗೆ ರಿಗ್ರೇಟ್ ಇದೆಯೇ ವಿನಾ ಆ ವ್ಯಕ್ತಿ ಹೋದ ಎನ್ನುವ ಬಗ್ಗೆ ಬೇಸರ ಇಲ್ಲ ಎಂದಿದ್ದಾರೆ ನಟಿ.
56
ಪಾರ್ಟನರ್ಗಳಿಗೆ ಬ್ರಾಡ್ ಮೈಂಡೆಡ್ ಬೇಕು
ಪಾರ್ಟನರ್ಗಳಿಗೆ ಬ್ರಾಡ್ ಮೈಂಡೆಡ್ ಮುಖ್ಯ. ಅವರಿಗೆ ಅದೇ ರೀತಿಯ ಮೆಂಟ್ಯಾಲಿಟಿ ಇರಬೇಕು. ಇಲ್ಲದಿದ್ದರೆ ಜೀವನ ತುಂಬಾ ಕಷ್ಟ ಎಂದಿದ್ದಾರೆ ನಟಿ. ಪತ್ನಿ ಆ್ಯಕ್ಟ್ ಮಾಡಿದರೆ ಓಕೆ ಅನ್ನಬೇಕು, ಸಪೋರ್ಟ್ ಮಾಡಬೇಕು. ಇಲ್ಲದಿದ್ದರೆ, ನಟಿಯಾದವಳು ನನಗೆ ಆ್ಯಕ್ಟಿಂಗ್ ಬೇಡ, ಗೃಹಿಣಿಯಾಗಿ ಇರ್ತೇನೆ ಎಂದು ಒಪ್ಪಿಕೊಳ್ಳಬೇಕು. ಹೀಗೆ ಇಬ್ಬರ ಮನಸ್ಥಿತಿ ಇದ್ದರಷ್ಟೇ ಲೈಫ್ ಸಕ್ಸಸ್ ಆಗುತ್ತದೆ ಎಂದಿದ್ದಾರೆ ಅನಿಕಾ.
66
ನಟಿಯ ಕುರಿತು
ಇನ್ನು ನಟಿಯ ಕುರಿತು ಹೇಳುವುದಾದರೆ, ಕಾದಂಬರಿ ಸೀಡಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ನಟಿ, ಹೆಚ್ಚಾಗಿ ಕಾಣಿಸಿಕೊಂಡದ್ದು ನೆಗೆಟಿವ್ ಪಾತ್ರಗಳಲ್ಲಿ. ಡಾಕ್ಟರ್ ಆಗಬೇಕೆಂದುಕೊಂಡಿದ್ದ ಅನಿಕಾ ಅವರಿಗೆ ಬಣ್ಣದ ಲೋಕ ಒಲಿದಿದ್ದೂ ಅಚಾನಕ್ ಆಗಿಯೇ. ಖಳನಾಯಕಿಯಾಗಿಯೇ ಗುರುತಿಸಿಕೊಂಡಿರುವ ಅನಿಕಾ ತಾವು ಯಾವ ರೋಲ್ಗೂ ಇದುವರೆಗೆ ಆಡಿಶನ್ ಕೊಟ್ಟಿಲ್ಲ ಎಂದು ಈ ಹಿಂದೆ ಹೇಳಿದ್ದರು. ಮೊದಲೆಲ್ಲಾ ಡೈಲಾಗ್ ಡೆಲಿವರಿ ಬಗ್ಗೆ ನಿರ್ದೇಶಕರು ಗಮನ ಕೊಡುತ್ತಿದ್ದರು. ಈಗ ಆಡಿಷನ್ ಹೆಚ್ಚಾಗಿ ಮಾಡ್ತಾರೆ ಜೊತೆಗೆ ಲುಕ್ ಟೆಸ್ಟಿಗೆ ಪ್ರಾಮುಖ್ಯತೆ ಇದೆ. ಆದರೆ ನಾನು ಶುರು ಮಾಡಿದಾಗ ಹೀಗೆಲ್ಲಾ ಇರಲಿಲ್ಲ ಎಂದು ನಟಿ ಹೇಳಿದ್ದಾರೆ. ಆಕಾಶದೀಪ, ಗುಪ್ತಗಾಮಿನಿ, ಕುಂಕುಮಭಾಗ್ಯ, ಕಂಕಣ, ನನ್ನವಳು, ಆಕಾಶದೀಪ, ಸುಕನ್ಯಾ, ಮನೆಮಗಳು, ಶುಭಮಂಗಳ, ಮಂದಾರ, ಸೂರ್ಯಕಾಂತಿ, ಲಕ್ಷ್ಮಿ ಬಾರಮ್ಮ ಹೀಗೆ ಮೂವತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.ಲಕ್ಷ್ಮಿ ಬಾರಮ್ಮ ಸೀರಿಯಲ್ನಲ್ಲಿ ವಿಲನ್ ಕುಮುದಾ ರೋಲ್ ಸಕತ್ ಹೆಸರು ತಂದುಕೊಟ್ಟಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.