ಸಿನಿಮಾಗಳ ಮಧ್ಯೆ ಇಂಟರ್ವಲ್ ಯಾಕೆ ಬರುತ್ತೆ ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ!

Published : Sep 07, 2026, 06:00 PM IST

ಹಿಂದೆ ಫಿಲ್ಮ್ ರೀಲ್‌ಗಳನ್ನು ಬದಲಿಸಲು ಶುರುವಾದ ಇಂಟರ್ವಲ್ ಪದ್ಧತಿ, ಡಿಜಿಟಲ್ ಯುಗದಲ್ಲೂ ಭಾರತೀಯ ಚಿತ್ರರಂಗದಲ್ಲಿ ಮುಂದುವರೆದಿದೆ. ಭಾರತದಲ್ಲಿ ಇಂಟರ್ವಲ್ ಪ್ರೇಕ್ಷಕರ ನಿರೀಕ್ಷೆಯಾಗಿ ಮತ್ತು ಥಿಯೇಟರ್‌ಗಳ ವ್ಯಾಪಾರ ಪದ್ಧತಿಯಾಗಿ ಮುಂದುವರಿದಿದೆ.

PREV
15
INTERVAL

ಥಿಯೇಟರ್‌ನಲ್ಲಿ ಸಿನಿಮಾ ನೋಡುವಾಗ ಕಥೆ ಸಖತ್ ಸಸ್ಪೆನ್ಸ್‌ನಲ್ಲಿ ಸಾಗುತ್ತಿರುತ್ತದೆ. ಆಗ ಇದ್ದಕ್ಕಿದ್ದಂತೆ ಪರದೆ ಮೇಲೆ "INTERVAL" ಅಂತ ಬರುತ್ತೆ. ಕೆಲವರಿಗೆ ಇದು ಪಾಪ್‌ಕಾರ್ನ್ ಸಮಯ, ಇನ್ನು ಕೆಲವರಿಗೆ ವಾಶ್‌ರೂಮ್ ಬ್ರೇಕ್. ಆದರೆ ಇಂಟರ್ವಲ್ ಕೇವಲ ವಿರಾಮವಷ್ಟೇ ಅಲ್ಲ. ಭಾರತೀಯ ಸಿನಿಮಾದ ಕಥೆ ಹೇಳುವ ಶೈಲಿಯಲ್ಲಿ ಇದಕ್ಕೊಂದು ಪ್ರಮುಖ ಕಾರಣವಿದೆ.

25
ಡಿಜಿಟಲ್ ಪ್ರೊಜೆಕ್ಟರ್

ಈಗಿನ ಡಿಜಿಟಲ್ ಪ್ರೊಜೆಕ್ಟರ್ ಕಾಲದಲ್ಲಿ, ಸಿನಿಮಾ ಓಡಿಸಲು ರೀಲ್ ಬದಲಿಸುವ ಅಗತ್ಯವಿಲ್ಲ. ಆದರೆ, ಹಿಂದೆಲ್ಲಾ ಸಿನಿಮಾಗಳನ್ನು ದೊಡ್ಡ ದೊಡ್ಡ film reels-ಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು. ಉದ್ದನೆಯ ಸಿನಿಮಾಗಳಲ್ಲಿ ಒಂದು ರೀಲ್ ಮುಗಿದಾಗ, ಇನ್ನೊಂದು ರೀಲ್ ಹಾಕಲು projectionist-ಗೆ ಸಮಯ ಬೇಕಿತ್ತು. ಇದಕ್ಕಾಗಿಯೇ ಸಿನಿಮಾದ ಮಧ್ಯೆ ವಿರಾಮ ನೀಡುವ ಪದ್ಧತಿ ಶುರುವಾಯಿತು. ತಂತ್ರಜ್ಞಾನ ಬೆಳೆದು ಡಿಜಿಟಲ್ ಯುಗ ಬಂದರೂ, ಭಾರತದಲ್ಲಿ ಇಂಟರ್ವಲ್ ಪದ್ಧತಿ ಮಾತ್ರ ಬದಲಾಗಲಿಲ್ಲ. ಈಗ ಇದು ನಮ್ಮ ಸಿನಿಮಾ ಸಂಸ್ಕೃತಿಯ ಭಾಗವಾಗಿದೆ.

35
ದೊಡ್ಡ ಟ್ವಿಸ್ಟ್

ಇದು ಸಿನಿಮಾ ಪ್ರೇಮಿಗಳಿಗೆ ಬಹಳ ಇಂಟ್ರೆಸ್ಟಿಂಗ್ ವಿಚಾರ. ಹೆಚ್ಚಿನ ಭಾರತೀಯ ಸಿನಿಮಾಗಳಲ್ಲಿ ಇಂಟರ್ವಲ್‌ಗೆ ಕೆಲವು ನಿಮಿಷಗಳ ಮೊದಲು ಒಂದು ದೊಡ್ಡ ಟ್ವಿಸ್ಟ್, ಆಘಾತಕಾರಿ ಘಟನೆ, ಫೈಟ್ ಅಥವಾ ಅನಿರೀಕ್ಷಿತ ದೃಶ್ಯವನ್ನು ಇಟ್ಟಿರುತ್ತಾರೆ. ಇದನ್ನೇ ಅಭಿಮಾನಿಗಳು "Interval Block" ಎಂದು ಕರೆಯುತ್ತಾರೆ. ಮುಂದೆ ಏನಾಗಬಹುದು? ಎಂಬ ಕುತೂಹಲವನ್ನು ಪ್ರೇಕ್ಷಕರಲ್ಲಿ ಬಿಟ್ಟು ಕಳುಹಿಸುವುದೇ ಇದರ ಉದ್ದೇಶ.

45
ಪ್ರೇಕ್ಷಕರು ರೆಸ್ಟ್ ಮಾಡುವ ಸಮಯವಲ್ಲ

ಇಂಟರ್ವಲ್ ಕೇವಲ ಪ್ರೇಕ್ಷಕರು ರೆಸ್ಟ್ ಮಾಡುವ ಸಮಯವಲ್ಲ. ಇದು ಥಿಯೇಟರ್‌ಗಳಿಗೆ ಆದಾಯ ತರುವ ಪ್ರಮುಖ ಸಮಯವೂ ಹೌದು. ಈ ವಿರಾಮದ ಸಮಯದಲ್ಲಿ ಜನರು ಪಾಪ್‌ಕಾರ್ನ್, ಜ್ಯೂಸ್, ಕಾಫಿ, ಸಮೋಸಾದಂತಹ ತಿಂಡಿ-ತಿನಿಸುಗಳನ್ನು ಖರೀದಿಸುತ್ತಾರೆ. ಇದರಿಂದ ಥಿಯೇಟರ್‌ಗಳ ವ್ಯಾಪಾರ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ದೀರ್ಘಕಾಲ ಕುಳಿತ ಪ್ರೇಕ್ಷಕರಿಗೆ ಸ್ವಲ್ಪ ವಿಶ್ರಾಂತಿ, ವಾಶ್‌ರೂಮ್‌ಗೆ ಹೋಗಲು ಮತ್ತು ಆಹಾರ ಖರೀದಿಸಲು ಈ ವಿರಾಮ ಸಹಾಯ ಮಾಡುತ್ತದೆ.

55
ಇಂಟರ್ವಲ್ ಪ್ರೇಕ್ಷಕರ ನಿರೀಕ್ಷೆ

ಹಲವು ದೇಶಗಳಲ್ಲಿ ಆಧುನಿಕ ಸಿನಿಮಾಗಳನ್ನು ಸಾಮಾನ್ಯವಾಗಿ ವಿರಾಮವಿಲ್ಲದೆ ಪ್ರದರ್ಶಿಸಲಾಗುತ್ತದೆ. ಡಿಜಿಟಲ್ ಪ್ರೊಜೆಕ್ಟರ್ ಬಂದ ಮೇಲೆ ರೀಲ್ ಬದಲಿಸುವ ಅಗತ್ಯವೂ ಇಲ್ಲವಾಯಿತು. ಆದರೆ, ಭಾರತದಲ್ಲಿ ಇಂಟರ್ವಲ್ ಪ್ರೇಕ್ಷಕರ ನಿರೀಕ್ಷೆಯಾಗಿ ಮತ್ತು ಥಿಯೇಟರ್‌ಗಳ ವ್ಯಾಪಾರ ಪದ್ಧತಿಯಾಗಿ ಮುಂದುವರಿದಿದೆ.

ಇದೇ ಕಾರಣಕ್ಕೆ ಕೆಲವು Hollywood ಸಿನಿಮಾಗಳಿದ್ರೂ ಭಾರತೀಯ ಥಿಯೇಟರ್‌ಗಳಲ್ಲಿ ಇಂಟರ್ವಲ್ ಸೇರಿಸಲಾಗುತ್ತದೆ. ಆದರೆ ಆ ಸಿನಿಮಾಗಳನ್ನು ಇಂಟರ್ವಲ್ ಗಮನದಲ್ಲಿಟ್ಟುಕೊಂಡು ಮಾಡಿರುವುದಿಲ್ಲ. ಹೀಗಾಗಿ, ಕೆಲವೊಮ್ಮೆ ಪ್ರಮುಖ ದೃಶ್ಯದ ಮಧ್ಯೆಯೇ ಸಿನಿಮಾ ನಿಲ್ಲಿಸಿದಾಗ ಪ್ರೇಕ್ಷಕರಿಗೆ ಕಿರಿಕಿರಿಯಾಗುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories