ಬಾಕ್ಸ್ ಆಫೀಸ್‌ನಲ್ಲಿ ರಜನಿಕಾಂತ್ ಸುನಾಮಿ! ‘ಜೈಲರ್ 2’ ಅಬ್ಬರಕ್ಕೆ ಲಿಯೋ, ಕೂಲಿ ದಾಖಲೆ ಉಡೀಸ್! ಶೀಘ್ರದಲ್ಲೇ ತಮಿಳಿನ ನಂ.1 ಸಿನಿಮಾ..!

Published : Oct 23, 2026, 01:20 PM IST

ಬೆಂಗಳೂರು: ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಜೈಲರ್ 2 ಸಿನಿಮಾ ಮೊದಲ ವಾರವೇ ಭರ್ಜರಿ ಪ್ರದರ್ಶನ ಕಾಣುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಇದೀಗ ಜೈಲರ್ 2 ಸಿನಿಮಾವೂ ತಮಿಳು ಸಿನಿಮಾ ಇತಿಹಾಸದಲ್ಲೇ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪೈಕಿ ಎರಡನೇ ಸ್ಥಾನಕ್ಕೇರಿದೆ.

PREV
16
ತಮಿಳು ಸಿನಿಮಾದಲ್ಲಿ ಜೈಲರ್ 2 ಭರ್ಜರಿ ಕಲೆಕ್ಷನ್

ಜಗತ್ತಿನಾದ್ಯಂತ ಒಟ್ಟಾರೆ 600+ ಕೋಟಿ ರುಪಾಯಿ ಕಲೆಕ್ಷನ್ ಮಾಡುವ ಮೂಲಕ ತಮಿಳು ಸಿನಿಮಾ ಇತಿಹಾಸದಲ್ಲೇ ಅತಿಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಸಿನಿಮಾ ಎನ್ನುವ ಖ್ಯಾತಿಗೆ ಜೈಲರ್ 2 ಪಾತ್ರವಾಗಿದೆ. ಸದ್ಯದ ಸಿನಿಮಾ ಪ್ರದರ್ಶನದ ಟ್ರೆಂಡ್ ಗಮನಿಸಿದರೆ ತಮಿಳು ಸಿನಿಮಾ ಇತಿಹಾಸದಲ್ಲೇ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಹಾಕುತ್ತಿದೆ.

26
ಜೈಲರ್ 2 ಬಾಕ್ಸ್ ಆಫೀಸ್ ಕಲೆಕ್ಷನ್ ಅಪ್‌ಡೇಟ್ಸ್:

ಅಡ್ವಾನ್ಸ್‌ ಬುಕಿಂಗ್ ಮೂಲಕವೇ ಜೈಲರ್ 2 ಸಿನಿಮಾವೂ ಹೊಸ ದಾಖಲೆ ಬರೆದಿತ್ತು. ಸಿನಿಮಾ ರಿಲೀಸ್‌ಗೂ ಮೊದಲೇ ಜೈಲರ್ 2 ಸಿನಿಮಾದ 80 ಕೋಟಿ ರುಪಾಯಿ ಟಿಕೆಟ್‌ಗಳು ಮಾರಾಟವಾಗುವ ಮೂಲಕ ಇತಿಹಾಸ ಬರೆದಿತ್ತು. ಇದೇ ಕಾರಣಕ್ಕೆ ಜೈಲರ್ 2 ಸಿನಿಮಾಗೆ ಉತ್ತಮ ಆರಂಭ ಸಿಕ್ಕಿತ್ತು. ಇನ್ನು ಸಿನಿಮಾ ತೆರೆ ಕಂಡ ಮೊದಲ 4 ದಿನಗಳಲ್ಲೇ ಈ ಸಿನಿಮಾ 400 ಕೋಟಿ ರುಪಾಯಿಗಳನ್ನು ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆದಿತ್ತು.

36
ಮೊದಲ 8 ದಿನದಲ್ಲಿ 606 ಕೋಟಿ ರುಪಾಯಿ ಕಲೆಕ್ಷನ್ ಮಾಡಿದ ಜೈಲರ್

ವಾರಾಂತ್ಯ ಮಾತ್ರವಲ್ಲದೇ ದಸರಾ ರಜೆಯಿಂದಾಗಿ ಹೆಚ್ಚು ಹೆಚ್ಚು ಸಿನಿಮಾ ಪ್ರೇಕ್ಷಕರು ಸಿನಿ ಮಂದಿರದತ್ತ ದಾಪುಗಾಲು ಹಾಕಿದ್ದರ ಪರಿಣಾಮ ಮೊದಲ ವಾರದಂತ್ಯದ ವೇಳೆಗೆ ಭಾರತದಲ್ಲೇ ಒಟ್ಟಾರೆ 391.55 ಕೋಟಿ ರುಪಾಯಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಜೈಲರ್ 2 ಸಿನಿಮಾವೂ ಭಾರತದಾಚೆಗೆ $22.6 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ. ಈ ಮೂಲಕ ಒಟ್ಟಾರೆ ಮೊದಲ 8 ದಿನಗಳಲ್ಲಿ ಜೈಲರ್ ಸಿನಿಮಾದ ಕಲೆಕ್ಷನ್ ₹606 ಕೋಟಿ ರುಪಾಯಿಗಳಾಗಿದೆ.

46
600 ಕೋಟಿ ಕ್ಲಬ್ ಸೇರಿದ 4ನೇ ತಮಿಳು ಸಿನಿಮಾ

ಇನ್ನು ಸಿನಿಮಾ ತೆರೆಕಂಡು ಮೊದಲ 8 ದಿನಗಳಲ್ಲೇ 600 ಕೋಟಿ ಕ್ಲಬ್ ಸೇರಿದ ತಮಿಳಿನ ಎರಡನೇ ಸಿನಿಮಾ ಎನ್ನುವ ಹಿರಿಮೆಗೆ ಇದೀಗ ಜೈಲರ್ 2 ಪಾತ್ರವಾಗಿದೆ. ಇನ್ನು ಇದಷ್ಟೇ ಅಲ್ಲದೇ ತಮಿಳು ಸಿನಿಮಾ ಇತಿಹಾಸದಲ್ಲಿ 600 ಕೋಟಿ ಕಲೆಕ್ಷನ್ ಕ್ಲಬ್ ಸೇರಿದ ನಾಲ್ಕನೇ ಸಿನಿಮಾ ಎನ್ನುವ ಹಿರಿಮೆಗೂ ಜೈಲರ್ 2 ಪಾತ್ರವಾಗಿದೆ.

56
ಲಿಯೋ, ಕೂಲಿ ದಾಖಲೆ ಉಡೀಸ್

ಈ ಮೊದಲು ರಜನಿಕಾಂತ್ ನಟನೆಯ ಜೈಲರ್ ಸಿನಿಮಾವೂ 604 ಕೋಟಿ ರುಪಾಯಿ ಕಲೆಕ್ಷನ್ ಮಾಡಿತ್ತು. ಇನ್ನು ವಿಜಯ್ ಅವರ ಬ್ಲಾಕ್‌ಬಸ್ಟರ್ ಸಿನಿಮಾ ಲಿಯೋ ಸಿನಿಮಾವೂ 605 ಕೋಟಿ ರಿಪಾಯಿ ಕಲೆಕ್ಷನ್ ಮಾಡಿತ್ತು. ಇದೀಗ ಈ ಎರಡೂ ಸಿನಿಮಾ ಕಲೆಕ್ಷನ್ ದಾಖಲೆಗಳನ್ನು ಮುರಿದು ಜೈಲರ್ 2 ಸಿನಿಮಾವೂ ಎರಡನೇ ಸ್ಥಾನಕ್ಕೇರಿದೆ. ರಜಿನಿಕಾಂತ್ ಅವರ ಕೂಲಿ ಸಿನಿಮಾವೂ 518 ಕೋಟಿ ರುಪಾಯಿ ಕಲೆಕ್ಷನ್ ಮಾಡಿತ್ತು.

66
2.O ರೆಕಾರ್ಡ್ ಮುರಿಯುವ ಹಾದಿಯಲ್ಲಿ ಜೈಲರ್ 2

ಇನ್ನು ತಮಿಳು ಸಿನಿಮಾ ಇತಿಹಾಸದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಶಂಕರ್ ನಿರ್ದೇಶನದ 2.O ಪಾತ್ರವಾಗಿದೆ. ರಜಿನಿಕಾಂತ್ ಹಾಗೂ ಅಕ್ಷಯ್ ಕುಮಾರ್ ಒಟ್ಟಾಗಿ ನಟಿಸಿದ್ದ ಸೈಟಿಫಿಕ್ ಹಿಟ್ ಸಿನಿಮಾವೂ ಜಗತ್ತಿನಾದ್ಯಂತ ₹691 ಕೋಟಿ ಕಲೆಕ್ಷನ್ ಮಾಡುವ ಮೂಲಕ ನಂ.1 ಸ್ಥಾನದಲ್ಲಿದೆ. ಸದ್ಯ ಜೈಲರ್ 2 ಸಿನಿಮಾ ಗಳಿಕೆ ನೋಡಿದರೆ 2.0 ಹಿಂದಿಕ್ಕಿ ತಮಿಳಿನ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories