'ಪ್ರಾಣಿಯನ್ನು ಕೊಂದು ತಿನ್ನೋದಕ್ಕಿಂತ ಊಟವನ್ನೇ ಬಿಡುವುದು ಉತ್ತಮ' ಎಂದಿರೋ ನಟಿ ಸಾಯಿ ಪಲ್ಲವಿ ಮಾತಿನ ಹಿಂದೆ ಸಾಕಷ್ಟು ಅರ್ಥವಿದೆ. ರಾಮಾಯಣ ಸಿನಿಮಾವನ್ನು ಒಪ್ಪಿಕೊಳ್ಳುವ ಮೊದಲೇ ತಾವು ಸಸ್ಯಾಹಾರಿಯಾಗಿದ್ದೆ ಎಂದಿದ್ದಾರೆ. ಹಾಗಿದ್ರೆ ಯಾವಾಗ, ಏಕೆ ಸಾಯಿ ಪಲ್ಲವಿ ಸಸ್ಯಾಹಾರಿ ಆಗಿದ್ದು? ನೋಡಿ..
‘ರಾಮಾಯಣ’ಕ್ಕಾಗಿಯಲ್ಲ, ಮೊದಲಿನಿಂದಲೂ ಸಸ್ಯಾಹಾರಿ! ಜಪಾನ್‌ನಲ್ಲಿನ ಕಷ್ಟದ ದಿನಗಳನ್ನು ನೆನಪಿಸಿಕೊಂಡ ಸಾಯಿ ಪಲ್ಲವಿ
ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಸೀತೆಯಾಗಿ ಕಾಣಿಸಿಕೊಳ್ಳಲಿರುವ ನಟಿ ಸಾಯಿ ಪಲ್ಲವಿ ಇದೀಗ ತಮ್ಮ ಆಹಾರ ಪದ್ಧತಿಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ಸೀತೆಯ ಪಾತ್ರ ನಿರ್ವಹಿಸುತ್ತಿರುವ ಕಾರಣಕ್ಕೆ ಅವರು ಸಸ್ಯಾಹಾರಿಯಾಗಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಆದರೆ, ಈ ಸುದ್ದಿಗೆ ಸ್ಪಷ್ಟನೆ ನೀಡಿರುವ ನಟಿ, ತಾವು ಮೊದಲಿನಿಂದಲೂ ಸಸ್ಯಾಹಾರಿ ಎಂದು ಹೇಳಿದ್ದಾರೆ. ತಮ್ಮ ಜೀವನಶೈಲಿಯ ಭಾಗವಾಗಿರುವ ಈ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಬದಲಿಸುವುದಿಲ್ಲ ಎಂಬುದನ್ನೂ ಅವರು ಈ ಹಿಂದೆ ತಿಳಿಸಿದ್ದರು.
27
‘ರಾಮಾಯಣ’ ಚಿತ್ರಕ್ಕಾಗಿ ಬದಲಾದ ಆಹಾರ ಪದ್ಧತಿಯಲ್ಲ!
ರಣಬೀರ್ ಕಪೂರ್ ರಾಮನಾಗಿ ಹಾಗೂ ಯಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ರಾಮಾಯಣ’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಯಿದೆ. ಈ ಸಿನಿಮಾದಲ್ಲಿ ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆಯಾಗಿರುವುದು ಕೂಡ ಸಾಕಷ್ಟು ಗಮನ ಸೆಳೆದಿದೆ. ಇದೇ ಸಂದರ್ಭದಲ್ಲಿ, ಪಾತ್ರದ ಕಾರಣದಿಂದ ನಟಿ ಸಸ್ಯಾಹಾರವನ್ನು ಅಳವಡಿಸಿಕೊಂಡಿದ್ದಾರೆ ಎಂಬ ಚರ್ಚೆ ಆರಂಭವಾಗಿತ್ತು.
37
ಆದರೆ, ಸಾಯಿ ಪಲ್ಲವಿ ಅವರ ಹಿಂದಿನ ಹೇಳಿಕೆ ಈ ಊಹಾಪೋಹಗಳಿಗೆ ತೆರೆ ಎಳೆಯುವಂತಿದೆ. ‘ರಾಮಾಯಣ’ ಸಿನಿಮಾವನ್ನು ಒಪ್ಪಿಕೊಳ್ಳುವ ಮೊದಲೇ ತಾವು ಸಸ್ಯಾಹಾರಿಯಾಗಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಇದು ಚಿತ್ರಕ್ಕಾಗಿ ಮಾಡಿಕೊಂಡ ಬದಲಾವಣೆಯಲ್ಲ; ಬಹಳ ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಜೀವನಶೈಲಿ ಎಂಬುದು ಅವರ ಮಾತಿನ ಸಾರ.
ಸಾಯಿ ಪಲ್ಲವಿ ತಮ್ಮ ಸಸ್ಯಾಹಾರದ ಬದ್ಧತೆಯನ್ನು ವಿವರಿಸುವಾಗ ಜಪಾನ್‌ನಲ್ಲಿ ಚಿತ್ರೀಕರಣ ನಡೆಸಿದ ಅನುಭವವನ್ನೂ ಹಂಚಿಕೊಂಡಿದ್ದರು. ‘ಅಮರನ್’ ಚಿತ್ರದ ಪ್ರಚಾರದ ವೇಳೆ ನಡೆದ ಟಾಕ್ ಶೋವೊಂದರಲ್ಲಿ ಮಾತನಾಡಿದ್ದ ಅವರು, ಜಪಾನ್‌ನಲ್ಲಿ ಸುಮಾರು ಒಂದು ತಿಂಗಳು ಚಿತ್ರೀಕರಣದಲ್ಲಿದ್ದಾಗ ಸಸ್ಯಾಹಾರ ಆಹಾರ ಹುಡುಕುವುದು ಸವಾಲಾಗಿತ್ತು ಎಂದು ನೆನಪಿಸಿಕೊಂಡಿದ್ದರು.
57
ಸಸ್ಯಾಹಾರಿ ತಿನಿಸು ಎಂದು ನೀಡಲಾಗುತ್ತಿದ್ದ ಕೆಲವು ಆಹಾರಗಳಲ್ಲಿಯೂ ಚಿಕನ್ ಸೂಪ್ ಬೆರೆಸಲಾಗುತ್ತಿತ್ತು ಎನ್ನುವುದು ಅವರಿಗೆ ಎದುರಾದ ಸಮಸ್ಯೆಯಾಗಿತ್ತು. ಇಂತಹ ಸಂದರ್ಭದಲ್ಲಿಯೂ ತಮ್ಮ ಆಹಾರ ಪದ್ಧತಿಯೊಂದಿಗೆ ರಾಜಿ ಮಾಡಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಪ್ರಾಣಿಯನ್ನು ಕೊಂದು ತಿನ್ನುವುದಕ್ಕಿಂತ ಊಟವನ್ನೇ ಬಿಡುವುದು ಉತ್ತಮ ಎಂಬ ತಮ್ಮ ನಿಲುವನ್ನು ನಟಿ ವ್ಯಕ್ತಪಡಿಸಿದ್ದರು.
67
ವೈಯಕ್ತಿಕ ನಂಬಿಕೆಗೆ ಬದ್ಧರಾದ ನಟಿ
ವಿದೇಶದಲ್ಲಿದ್ದಾಗಲೂ ಆಹಾರದ ವಿಚಾರದಲ್ಲಿ ತಮ್ಮ ತತ್ವವನ್ನು ಪಾಲಿಸಿರುವ ಸಾಯಿ ಪಲ್ಲವಿ ಅವರ ನಿಲುವು ಇದೀಗ ಮತ್ತೆ ಚರ್ಚೆಗೆ ಬಂದಿದೆ. ತೆರೆಯ ಮೇಲೆ ಸೀತೆಯಾಗಿ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿರುವ ನಟಿ, ನಿಜ ಜೀವನದಲ್ಲಿಯೂ ತಮ್ಮ ನಂಬಿಕೆ ಮತ್ತು ತತ್ವಗಳಿಗೆ ಮಹತ್ವ ನೀಡುತ್ತಾರೆ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ. ‘ರಾಮಾಯಣ’ಕ್ಕಾಗಿ ಸಸ್ಯಾಹಾರಿಯಾದರು ಎಂಬ ವದಂತಿಗಳ ನಡುವೆ, ಅವರ ಈ ಹಿಂದಿನ ಅನುಭವವೇ ಸತ್ಯವನ್ನು ತಿಳಿಸುವಂತಿದೆ.
77
ಅಂದಹಾಗೆ, ನಟಿ ಸಾಯಿ ಪಲ್ಲವಿ ಸದ್ಯಕ್ಕೆ ರಾಮಾಯಣ ಸಿನಿಮಾದ ಪ್ರಚಾರಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮುಮದಿನ ತಿಂಗಳು, ಅಂದರೆ 05 ನವೆಂಬರ್ 2026ರಂದು ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಸಿನಿಮಾ ಜಗತ್ತಿನಾದ್ಯಂತ ತೆರೆಗೆ ಬರಲಿದೆ. ರಾಮಾಯಣ ಚಿತ್ರದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ‘ರಾಮ’ನ ಪಾತ್ರದಲ್ಲಿ ನಟಿಸಿದ್ದು, ಕನ್ನಡದ ನಟ ಯಶ್ ‘ರಾವಣ’ ಪಾತ್ರ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.