ಹಿಮಾಲಯ ತಪ್ಪಲಿನ ಹಳ್ಳಿಯ 80ರ ವೃದ್ಧ ಹಾಗೂ 70ರ ವೃದ್ಧೆ ನಟಿಸಿರುವ ಚಿತ್ರ ಪೈರ್: ಏನಿದರ ವಿಶೇಷ?

Published : Oct 29, 2026, 04:12 PM IST

ವಿನೋದ್ ಕಾಪ್ರಿ ನಿರ್ದೇಶನದ ‘ಪೈರ್’ ಸಿನಿಮಾ ಅ.30ರಂದು ಬಿಡುಗಡೆಯಾಗುತ್ತಿದೆ. ಹಿಮಾಲಯದ ಹಳ್ಳಿಯ 80ರ ವೃದ್ಧ ಪದಮ್ ಸಿಂಗ್ ಹಾಗೂ 70ರ ಹೀರಾದೇವಿ ನಟಿಸಿರುವ ಈ ಚಿತ್ರ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ 18 ಪ್ರಶಸ್ತಿಗಳನ್ನು ಗೆದ್ದಿದೆ.

PREV
14
ಅ.30ರಂದು ಬಿಡುಗಡೆ

ಉತ್ತರಾಖಂಡದ ಹಿಮಾಲಯ ತಪ್ಪಲಿನ ಹಳ್ಳಿಯೊಂದರ 80ರ ವೃದ್ಧ ಹಾಗೂ 70ರ ವೃದ್ಧೆ ನಟಿಸಿರುವ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ 18 ಪ್ರಶಸ್ತಿಗಳನ್ನು ಬಾಚಿಕೊಂಡಿರುವ, ಪ್ರಶಸ್ತಿ ವಿಜೇತ ನಿರ್ದೇಶಕ ವಿನೋದ್ ಕಾಪ್ರಿ ನಿರ್ದೇಶನದ ‘ಪೈರ್’ ಚಿತ್ರ ಅ.30ರಂದು ಬಿಡುಗಡೆಯಾಗುತ್ತಿದೆ.

24
ವೃತ್ತಿಪರ ನಟರಲ್ಲ

ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರಮುಖ ಆಕರ್ಷಣೆ, ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ 80 ವರ್ಷದ ಪದಮ್ ಸಿಂಗ್ ಹಾಗೂ 70 ವರ್ಷದ ಹೀರಾದೇವಿ ಇಬ್ಬರೂ ವೃತ್ತಿಪರ ನಟರಲ್ಲ.

34
ಚಪ್ಪಾಳೆ ತಟ್ಟಿ ಗೌರವ

ಇವರ ಕೃತಕತೆಯಿಲ್ಲದ ಸಹಜ ಅಭಿನಯವೇ ಚಿತ್ರಕ್ಕೆ ಅದ್ಭುತ ಭಾವನಾತ್ಮಕ ಸ್ಪರ್ಶವನ್ನು ತಂದುಕೊಟ್ಟಿದೆ. ಎಸ್ಟೋನಿಯಾದ ಪ್ರತಿಷ್ಠಿತ ಟ್ಯಾಲಿನ್ ಬ್ಲ್ಯಾಕ್ ನೈಟ್ಸ್ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರಥಮವಾಗಿ ಪ್ರದರ್ಶನಗೊಂಡಾಗ ಇಡೀ ಸಭಾಂಗಣ ಎದ್ದುನಿಂತು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿತ್ತು.

44
ಪ್ರಮುಖ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ

ಆ ಬಳಿಕ ಜಗತ್ತಿನ ಹತ್ತಾರು ಪ್ರಮುಖ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ವಿನೋದ್ ಕಾಪ್ರಿ, ಅರಿಂದ್ರ ರೈ ಚೌಧರಿ ಮತ್ತು ಸುರೇಶ್ ಜೋಶಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories