ಬ್ರಹ್ಮಗಂಟು ಸೀರಿಯಲ್ನಲ್ಲಿ ವಿಲನ್ ಸೌಂದರ್ಯಳ ಕರಾಮತ್ತಿನಲ್ಲಿ ಅರ್ಚನಾ ಮದುವೆ ಬೇರೆಯವರ ಜೊತೆ ನಡೆಯುತ್ತಿದೆ. ಚಿರುಗೆ ಅತ್ತಿಗೆ ನಿಜ ಗುಣವನ್ನು ಬಯಲು ಮಾಡುವುದು ನಾಯಕಿ ದೀಪಾಗೆ ಕಷ್ಟವಾಗಿದೆ. ಅವಳು ಎಲ್ಲರನ್ನೂ ಕೊಲ್ಲಿಸಲು ಮಾಡಿರುವ ಸಂಚು ದೀಪಾಗೆ ತಿಳಿದಿದ್ದರೂ ಅದಕ್ಕೆ ಸಾಕ್ಷಿ ಇಲ್ಲ. ಇದೀಗ ಮೋಸದಿಂದ ಅರ್ಚನಾಳ ಮದುವೆಯನ್ನು ಯಾವನದ್ದೋ ಜೊತೆ ಮಾಡಿಸಲು ಹೊರಟಿದ್ದಾಳೆ ಸೌಂದರ್ಯ. ಅರ್ಚನಾ ಮದುವೆಯಾಗಬೇಕು ಎಂದಿರೋ ರಾಹುಲ್ಗೆ ಅಪಘಾತ ಮಾಡಿಸಿದ್ದಾಳೆ ಸೌಂದರ್ಯ. ಆದರೆ ಇದಕ್ಕೆ ಸಾಕ್ಷಿ ಇಲ್ಲ.
27
ನರಸಿಂಹ ರಾಹುಲ್ಗೆ ಕಾವಲು
ಅದೇ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರೋ ರಾಹುಲ್ನ ಕೊಲ್ಲಿಸಲು ಸೌಂದರ್ಯ ರೌಡಿಗಳನ್ನು ಕಳಿಸಿದ್ದಾಳೆ. ಆದರೆ, ನರಸಿಂಹ ರಾಹುಲ್ಗೆ ಕಾವಲು ನೀಡುತ್ತಿದ್ದಾನೆ. ರೌಡಿಗಳನ್ನು ಚೆನ್ನಾಗಿ ಬಡಿದಿದ್ದಾನೆ. ಕೊನೆಗೆ ಚಿರುಗೆ ಕರೆ ಮಾಡಿ, ರಾಹುಲ್ ಒಳ್ಳೆಯವನು, ಅವನ ವಿರುದ್ಧ ಹೇಗೆ ಪಿತೂರಿ ನಡೆಯುತ್ತಿದೆ ಎಂದಿದ್ದಾರೆ. ಚಿರುಗೂ ಹೇಗಾದರೂ ಮಾಡಿ ಅರ್ಚನಾ ಮತ್ತು ರಾಹುಲ್ ಮದುವೆ ಮಾಡಿಸುವ ಆಸೆ.
37
ಪುಟ್ಟಕ್ಕನ ಮಕ್ಕಳು ಕಂಠಿ ಎಂಟ್ರಿ
ಅದಕ್ಕೆ ಮಾವ ಬೆನ್ನೆಲುಬಾಗಿದ್ದಾನೆ. ಭಟ್ಟರ ವೇಷದಲ್ಲಿ ಬಂದಿದ್ದಾನೆ. ಎಲ್ಲರೂ ಸೇರಿ ಪ್ಲ್ಯಾನ್ ಮಾಡಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಅದೇನೆಂದರೆ, ಪುಟ್ಟಕ್ಕನ ಮಕ್ಕಳು ಕಂಠಿ ಎಂಟ್ರಿ ಕೊಟ್ಟಿದ್ದಾನೆ. ಮದುವೆ ಮನೆಯಲ್ಲಿ ಹೊಗೆ ಹಾಕಿಸಿ ಅಲ್ಲಿಂದ ಅರ್ಚನಾಳನ್ನು ಕರೆದುಕೊಂಡು ಓಡಿ ಹೋಗಿದ್ದಾನೆ ಕಂಠಿ. ಎದುರಿಗೆ ಬಂದಿರೋ ರೌಡಿಗಳನ್ನುಹೊಡೆದುರುಳಿಸಿದ್ದಾನೆ.
ಅಲ್ಲಿ ರಾಹುಲ್ ಮತ್ತು ಅರ್ಚನಾ ಮದುವೆಗೆ ಎಲ್ಲಾ ರೆಡಿ ಮಾಡಿಕೊಳ್ಳಲಾಗಿದೆ. ಚಿರು ಮತ್ತು ದೀಪಾ ಅರ್ಚನಾಳನ್ನು ಕರೆದುಕೊಂಡು ಬರುವುದಾಗಿ ಸುಳ್ಳು ಹೇಳಿ ಮೊದಲೇ ನಿಗದಿಮಾಡಿದಂತೆ ರಾಹುಲ್ ಜೊತೆ ಮದುವೆ ನಿಗದಿ ಮಾಡಿದ ಸ್ಥಾನಕ್ಕೆ ಹೋಗಿದ್ದಾರೆ. ಅಷ್ಟರಲ್ಲಿ ಸೌಂದರ್ಯ ಬಂದಿದ್ದಾಳೆ. ಅವಳು ಬರುವ ಮೊದಲೇ ತಾಳಿ ಕಟ್ಟಿದ್ದಾನೆ ರಾಹುಲ್.
57
ಚಿರು ಕೆನ್ನೆಗೆ ಹೊಡೆದ ಸೌಂದರ್ಯ
ಚಿರು ತನ್ನ ವಿರುದ್ಧ ಹೋದುದಕ್ಕೆ ಅವನ ಕೆನ್ನೆಗೆ ಹೊಡೆದಿದ್ದಾಳೆ ಸೌಂದರ್ಯ. ಅದೇನೇ ಇದ್ದರೂ ಅವರಿಬ್ಬರ ಮದುವೆ ಆಗಿರುವುದಕ್ಕೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕಂಠಿ ಇಲ್ಲಿ ಹೀರೋ ಆಗಿದ್ದಾನೆ. ಅರ್ಚನಾ ಮತ್ತು ರಾಹುಲ್ನನ್ನು ಮದುವೆ ಮಾಡಿಸುವುದಾಗಿ ಸೌಂದರ್ಯಗೆ ದೀಪಾ ಸವಾಲು ಹಾಕಿದ್ದು ಸಕ್ಸಸ್ ಆಗಿದೆ.
67
ಸೌಂದರ್ಯ ಪ್ಲ್ಯಾನ್ ಫ್ಲಾಪ್
ಇದಾಗಲೇ ಸೌಂದರ್ಯ ಅರ್ಚನಾ ಮತ್ತು ರಾಹುಲ್ ಒಂದಾಗಬಾರದು ಎನ್ನುವ ಕಾರಣಕ್ಕೆ ರಾಹುಲ್ನನ್ನು ರೌಡಿಗಳನ್ನು ಕಳುಹಿಸಿ ಕೊ*ಲೆಗೆ ಪ್ರಯತ್ನಿಸಿದ್ದಳು. ಆದರೆ ಆತ ಬದುಕಿದ್ದಾನೆ. ಆಸ್ಪತ್ರೆಗೆ ದಾಖಲಾಗಿದ್ದ. ರಾಹುಲ್ ಮತ್ತು ಅರ್ಚನಾರನ್ನು ಒಂದು ಮಾಡಬೇಕು ಎನ್ನುವ ಕಾರಣಕ್ಕೆ ಚಿರುನೇ ಆತನನ್ನು ಮನೆಗೆ ಕರೆದಿದ್ದ.
77
ರೌಡಿಗಳಿಂದ ಅಟ್ಯಾಕ್
ಚಿರುವಿನ ಮನವಿ ಮೇರೆಗೆ ಬೈಕ್ನಲ್ಲಿ ರಾಹುಲ್ ಮನೆಗೆ ಬರುತ್ತಿರುವಾಗ ಹಿಂದಿನಿಂದ ರೌಡಿಗಳು ಗಾಡಿಯಲ್ಲಿ ಆತನಿಗೆ ಆ್ಯಕ್ಸಿಡೆಂಟ್ ಮಾಡಿದ್ದಾರೆ. ಆದರೆ ಆತ ಆಸ್ಪತ್ರೆಯಲ್ಲಿ ಇದ್ದು, ಜೀವ ಉಳಿಸಿಕೊಂಡಿದ್ದಾನೆ. ಇದನ್ನು ಕೇಳಿ ಸೌಂದರ್ಯಳ ತಲೆ ಕೆಟ್ಟು ಹೋಗಿದೆ. ಆದ್ದರಿಂದ ರೌಡಿಗಳನ್ನು ಕರೆಸಿ ಅವರನ್ನು ಕೊಲ್ಲಲು ಮುಂದಾಗಿದ್ದಳು. ಇದು ತಿಳಿಯುತ್ತಲೇ ಸೌಂದರ್ಯ ಹೀಗೆ ಮಾಡಿದ್ದಳು. ಆದರೆ ಈಗ ಎಲ್ಲವೂ ಉಲ್ಟಾ ಹೊಡೆದಿದೆ. ಸೌಂದರ್ಯಳಿಗೆ ದೀಪಾ ಹಾಕಿದ ಚಾಲೆಂಜ್ ಯಶಸ್ವಿಯಾಗಿದೆ.