ಪವನ್ ಕಲ್ಯಾಣ್ ಅವರಿಗೆ ಅಣ್ಣ ಚಿರಂಜೀವಿ ಅಂದ್ರೆ ಪಂಚಪ್ರಾಣ. ಮೆಗಾಸ್ಟಾರ್ ಪ್ರಭಾವ ಪವನ್ ಜೀವನದ ಮೇಲೆ ತುಂಬಾನೇ ಇದೆ. ಒಂದು ಕಾಲದಲ್ಲಿ ಊಟದ ವಿಚಾರಕ್ಕೆ ಸಿಕ್ಕಾಪಟ್ಟೆ ಹಠ ಮಾಡ್ತಿದ್ದ ಪವನ್‌ಗೆ ಚಿರಂಜೀವಿ ಬುದ್ಧಿವಾದ ಹೇಳಿದ್ರು. ಆ ಒಂದು ಮಾತು ಪವರ್ ಸ್ಟಾರ್ ಜೀವನವನ್ನೇ ಹೇಗೆ ಬದಲಾಯಿಸ್ತು ಗೊತ್ತಾ?
ಜನಸೇನಾ ನಾಯಕ ಹಾಗೂ ನಟ ಪವನ್ ಕಲ್ಯಾಣ್ ಜೀವನದಲ್ಲಿ ಅಣ್ಣ ಚಿರಂಜೀವಿ ಪ್ರಭಾವ ತುಂಬಾನೇ ಇದೆ. ಬರೀ ಸಿನಿಮಾದಲ್ಲಿ ಮಾತ್ರವಲ್ಲ, ವೈಯಕ್ತಿಕ ಜೀವನದಲ್ಲೂ ಪವನ್‌ಗೆ ಮೆಗಾಸ್ಟಾರ್ ದಾರಿದೀಪ ಆಗಿದ್ದಾರೆ. ತಮ್ಮ ಹದಿಹರೆಯದ ದಿನಗಳಲ್ಲಿ ನಡೆದ ಒಂದು ಎಮೋಷನಲ್ ಘಟನೆಯನ್ನು ಪವನ್ ಕಲ್ಯಾಣ್ ಹಳೆಯ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದರು.
25
ಮಾಂಸ ಇಲ್ಲದೆ ಊಟ ಮಾಡ್ತಿರಲಿಲ್ಲ
ಪವನ್ ಕಲ್ಯಾಣ್ ತಮ್ಮ 16-17ನೇ ವಯಸ್ಸಿನಲ್ಲಿ ಊಟದ ವಿಚಾರಕ್ಕೆ ಸಿಕ್ಕಾಪಟ್ಟೆ ಹಠ ಮಾಡ್ತಿದ್ರು. ಊಟದಲ್ಲಿ ನಾನ್-ವೆಜ್ ಇಲ್ಲ ಅಂದ್ರೆ ಅವರು ತುತ್ತು ಅನ್ನ ಕೂಡ ತಿನ್ನುತ್ತಿರಲಿಲ್ಲ. ಮನೆಯಲ್ಲಿ ಮಾಂಸದ ಅಡುಗೆ ಮಾಡಿಲ್ಲ ಅಂದ್ರೆ ಪವನ್‌ಗೆ ವಿಪರೀತ ಕೋಪ ಬರುತ್ತಿತ್ತು. ಅಣ್ಣ ಚಿರಂಜೀವಿ ಮನೆಯಲ್ಲಿ ಇಲ್ಲದಾಗ, ಇದೇ ಕೋಪದಲ್ಲಿ ಮನೆಯವರ ಮೇಲೆ ಪವನ್ ರೇಗಾಡುತ್ತಿದ್ದರು.
35
ಪವನ್‌ಗೆ ಬುದ್ಧಿವಾದ ಹೇಳಿದ ಚಿರು
ತಮ್ಮನ ಈ ವರ್ತನೆಯನ್ನು ಚಿರಂಜೀವಿ ಗಮನಿಸಿದ್ದರು. ಆದರೆ ಅವರು ಪವನ್ ಮೇಲೆ ಕೋಪಗೊಳ್ಳಲಿಲ್ಲ ಅಥವಾ ಬೈಯಲಿಲ್ಲ. ಬದಲಾಗಿ, ಪವನ್ ಅವರನ್ನು ಹತ್ತಿರ ಕರೆದು ಪ್ರೀತಿಯಿಂದ ಒಂದು ಮಾತು ಹೇಳಿದರು. "ನಮಗೆ ಇವತ್ತು ಹೊಟ್ಟೆತುಂಬಾ ಊಟ ಸಿಗ್ತಿದೆ. ಆದರೆ ಸಮಾಜದಲ್ಲಿ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದ ಜನ ಬಹಳಷ್ಟಿದ್ದಾರೆ. ಒಮ್ಮೆ ಹೊರಗಿನ ಪ್ರಪಂಚ ನೋಡು" ಎಂದು ಬುದ್ಧಿವಾದ ಹೇಳಿದರು.
ಅಣ್ಣ ಹೇಳಿದ ಆ ಒಂದು ಮಾತು 16-17 ವರ್ಷದ ಪವನ್ ಕಲ್ಯಾಣ್ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿತು. ಸಮಾಜದ ಬಡತನ ಹಾಗೂ ಕಷ್ಟಗಳನ್ನು ಅರ್ಥಮಾಡಿಕೊಳ್ಳುವಂತೆ ಆ ಮಾತುಗಳು ಅವರ ಆಲೋಚನೆಯನ್ನೇ ಬದಲಾಯಿಸಿದವು. ಊಟದ ಮೇಲಿದ್ದ ಹಠ ಬಿಟ್ಟ ಪವನ್, ಇತರರ ಕಷ್ಟಗಳಿಗೆ ಸ್ಪಂದಿಸುವ ಸೂಕ್ಷ್ಮ ಸ್ವಭಾವವನ್ನು ಬೆಳೆಸಿಕೊಂಡರು.
55
ಸ್ಟಾರ್ ನಟ, ಜನನಾಯಕ ಪವನ್ ಕಲ್ಯಾಣ್
ಬಾಲ್ಯದಿಂದಲೂ ಅಣ್ಣ ಚಿರಂಜೀವಿ ಕಲಿಸಿದ ಇಂಥ ಅನೇಕ ಜೀವನಪಾಠಗಳು ಪವನ್ ಕಲ್ಯಾಣ್ ಅವರನ್ನು ಬೆಳೆಸಿದವು. ಇದೇ ಕಾರಣಕ್ಕೆ ಪವನ್ ಇಂದು ಸ್ಟಾರ್ ನಟನಾಗಿ, ಪ್ರಜಾನಾಯಕನಾಗಿ ಹಾಗೂ ಜವಾಬ್ದಾರಿಯುತ ವ್ಯಕ್ತಿಯಾಗಿ ರೂಪುಗೊಂಡಿದ್ದಾರೆ. ಸದ್ಯ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಬ್ಯುಸಿಯಾಗಿರುವ ಪವನ್ ಕಲ್ಯಾಣ್, ಬಿಡುವಿನ ವೇಳೆಯಲ್ಲಿ ತಮ್ಮ ಸಿನಿಮಾಗಳನ್ನು ಪೂರ್ಣಗೊಳಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.