ದೇಶವೇ ಚೀನಾ ಪ್ರಾಡಕ್ಟ್ ನೀಷೇಧಿಸ್ತಿದ್ರೆ, ಚಿರು ಮಗಳು ಮಾತ್ರ 1+ ಫೋನ್ ಆ್ಯಡ್‌ನಲ್ಲಿ ಬ್ಯುಸಿ

First Published | Jul 18, 2020, 3:43 PM IST

ಗಲ್ವಾನ್ ಕಣಿವೆಯಲ್ಲಿ ಭಾರತದ ಯೋಧರು ಹುತಾತ್ಮರಾದಾ ನಂತರದಲ್ಲಿ ಚೀನಾ ವಸ್ತುಗಳ ಬಳಕೆ ಭಾರತದಲ್ಲಿ ನಿಷೇಧಿಸಲಾಗುತ್ತಿದೆ. ಆದರೆ ನಟ ಚಿರಂಜೀವಿ ತಮ್ಮನ ಮಗಳು ನಿಹಾರಿಕಾ ಮಾತ್ರ 1 ಮೊಬೈಲ್‌ಗೆ ಜಾಹೀರಾತು ನೀಡೋದ್ರಲ್ಲಿ ಬ್ಯುಸಿ ಇದ್ದಾರೆ.

20 ಸೈನಿಕರನ್ನು ಕಳೆದುಕೊಂಡ ನೋವಿನಿಂದ ದೇಶವಿನ್ನೂ ಹೊರಗೆ ಬಂದಿಲ್ಲ.
ಈ ನಡುವೆ ಆತ್ಮನಿರ್ಭರ್ ಮೂಲಕ ಸ್ವದೇಶಿ ವಸ್ತುಗಳಿಗೆ ಒತ್ತು ನೀಡಲಾಗುತ್ತಿದೆ.
Tap to resize

ಆದರೆ ತೆಲುಗು ನಟ ಚಿರಂಜೀವಿ ತಮ್ಮನ ಮಗಳು ಮಾತ್ರ ಏನೂ ಆಗೇ ಇಲ್ಲ ಎಂಬಂತೆ 1+ ಫೋನ್‌ಗೆ ಆ್ಯಡ್‌ ಕೊಡುತ್ತಿದ್ದಾರೆ.
ಚೀನಾ ವಸ್ತುಗಳನ್ನು, ಆ್ಯಪ್‌ಗಳನ್ನು ಭಾರತೀಯರು ನಿಷೇಧಿಸುತ್ತಿದ್ದು, ಕೇಂದ್ರವೂ ಸೆಲೆಬ್ರಿಟಿಗಳು ಚೀನಾ ಉತ್ಪನ್ನಗಳಿಗೆ ಜಾಹೀರಾತು ನೀಡಬಾರದು ಎಂದು ತಿಳಿಸಿದೆ.
ಹೀಗಿದ್ದರೂ ನಿಹಾರಿಕಾ ಮಾತ್ರ ಇದ್ಯಾವುದರ ಅರಿವಿಲ್ಲದೆ ಆರಾಮಾವಾಗಿ ಜಾಹೀರಾತು ಕೊಟ್ಟಿದ್ದಾರೆ.
ಸರ್ಕಾರವೇ 59 ಆ್ಯಪ್ ನಿಷೇಧಿಸಿದ್ದು, ಹೀಗಿದ್ದರೂ ಚೀನಾ ಮೊಬೈಲ್‌ಗೆ ನಿಹಾರಿಕಾ ಜಾಹೀರಾತು ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಚೀನಾ ಫೋನ್ ಪ್ರಮೋಟ್ ಮಾಡಿದ ನಟಿ

Latest Videos

click me!