ನ್ಯೂ ಲುಕ್: ಲಾಕ್‌ಡೌನಲ್ಲಿ ಇನ್ನಷ್ಟು ತೆಳ್ಳನಾದ್ರಾ ಇಲಿಯಾನಾ..?

First Published | Jul 18, 2020, 3:07 PM IST

ನಟಿ ಇಲಿಯಾನ ಡಿಕ್ರೋಜ ಮೊದಲೇ ತೆಳ್ಳನೆ. ಈಗ ಹೊಸ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದು, ಅರೆ ಇಲಿಯಾನ ಇನ್ನೂ ತೆಳ್ಳನಾದ್ರಾ ಎಂಬಂತಾಗಿದೆ ನೆಟ್ಟಿಗರ ರಿಯಾಕ್ಷನ್. ಇಲ್ಲಿವೆ ಫೋಟೋಸ್

ನಟಿ ಇಲಿಯಾನ ಡಿಕ್ರೋಜ ಮೊದಲೇ ತೆಳ್ಳನೆ. ಈಗ ಹೊಸ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದು, ಅರೆ ಇಲಿಯಾನ ಇನ್ನೂ ತೆಳ್ಳನಾದ್ರಾ ಎಂಬಂತಾಗಿದೆ ನೆಟ್ಟಿಗರ ರಿಯಾಕ್ಷನ್.
ಸೌತ್ ಇಂಡಿಯನ್ ಸೇರಿ ಬಾಲಿವುಡ್ ಸಿನಿಮಾಗಳಲ್ಲಿ ನಟಿಸೋ ಇಲಿಯಾನ ಅವರದ್ದು ತೆಳ್ಳನೆ ದೇಹ. ಸ್ಲಿಮ್ ಬ್ಯೂಟಿ ಅಂದ್ರೂ ತೀರಾ ತೆಳ್ಳನಿದ್ರೂ ಕ್ಯೂಟ್ ಆಗಿ ಕಾಣ್ತಾರೆ ಈ ನಟಿ.
Tap to resize

ಸಣ್ಣ ನಡುವಿಗೇ ಫೇಮಸ್ ಆಗಿರೋ ನಟಿ ಕಳೆದ ವರ್ಷ ಸ್ವಲ್ಪ ದಪ್ಪಗಾಗಿದ್ರು. ಅಮರ್ ಅಕ್ಬರ್, ಟಂಟೋನಿ ಸಿನಿಮಾದಲ್ಲಿ ಇಲಿಯಾನ ಅವ್ರನ್ನ ನೋಡಿ ಟ್ರೋಲ್ ಮಾಡಿದ್ರು ನೆಟ್ಟಿಗರು
ಆದರೆ ಈ ಲಾಕ್‌ಡೌನ್ ಅವಧಿಯಲ್ಲಿ ಇಲಯಾನ ಇನ್ನಷ್ಟು ತೆಳ್ಳನಾಗಿದ್ದಾರೆ. ಇಲಿಯಾನ ತಮ್ಮ ಲಾಕ್‌ಡೌನ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ದೇಹದ ಸೌಂದರ್ಯ ಕಾಪಾಡಿಕೊಂಡು ಎಲ್ರೂ ಡ್ರೆಸ್ ಅಪ್ ಆಗಿ ಎಂದು ಪೋಸ್ಟ್ ಜೊತೆಗೆ ಬರೆದಿದ್ದಾರೆ.
ನಿಮ್ಮ ದೇಹ ಸುಂದರವಾದದ್ದು. ಅದನ್ನು ಆರೈಕೆ ಮಾಡಿ. ಡ್ರೆಸ್ ಅಪ್, ಶೋ ಅಪ್. ಬೇರೆ ಯಾರಿಗಾಗಿಯೋ ಅಲ್ಲ, ನಿಮಗಾಗಿ ಮಾಡಿ ಎಂದಿದ್ದಾರೆ.
ಇಲಿಯಾನ ಅವರ ಮುಂದಿನ ಚಿತ್ರ ದ ಬಿಗ್ ಬುಲ್ ಹಾಟ್‌ಸ್ಟಾರ್‌ನಲ್ಲಿ ರಿಲೀಸ್ ಆಗಲಿದ್ದು, ಅಭಿಷೇಕ್ ಬಚ್ಚನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.
ಹಾಗೆಯೇ ನಟಿ ಇಲಿಯಾನ ತೆಲುಗು ಸಿನಿಮಾಗಳಲ್ಲಿಯೂ ಅವಕಾಶಗಳಿಗೆ ಪ್ರಯತ್ನಿಸುತ್ತಿದ್ದಾರೆ.
ನಾಗಾರ್ಜುನ ಅವರ ಮುಂದಿನ ಪ್ರಾಜೆಕ್ಟ್‌ನಲ್ಲಿ ಇಲಿಯಾನ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಇನ್ನೂ ಯಾವುದೂ ಪಕ್ಕಾ ಆಗಿಲ್ಲ.

Latest Videos

click me!