"ಕ್ಯಾಂಡಿ ಶಾಪ್" ವಿಡಿಯೋದಿಂದಾಗಿ ಟ್ರೋಲ್‌ಗೆ ಒಳಗಾದ ಗಾಯಕಿ, ಗುಳಿ ಕೆನ್ನೆ ಚೆಲುವೆ ನೇಹಾ ಕಕ್ಕರ್, ಸೋಷಿಯಲ್ ಮೀಡಿಯಾದಲ್ಲಿ ಶಾಕಿಂಗ್ ಪೋಸ್ಟ್ ಹಾಕಿದ್ದಾರೆ. ಅವರು ಸೆಲೆಬ್ರಿಟಿ ಜೀವನದಿಂದ ವಿರಾಮ ತೆಗೆದುಕೊಳ್ಳುತ್ತಿದ್ದು, ತಮ್ಮ ಫೋಟೋ ತೆಗೆಯದಂತೆ ಪಾಪರಾಜಿಗಳು ಮತ್ತು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ
ಸಹೋದರನ ಜೊತೆಗೂಡಿ ಲಾಲಿಪಾಪ್ ಲಾಲಿಪಾಪ್ ಎಂಬ "ಕ್ಯಾಂಡಿ ಶಾಪ್" ವಿಡಿಯೋ ಶೇರ್ ಮಾಡಿ, ಅಶ್ಲೀಲ ಎನ್ನುವ ಕಾರಣಕ್ಕೆ ಸಕತ್ ಟ್ರೋಲ್‌ಗೆ ಒಳಗಾಗಿದ್ದ ಖ್ಯಾತ ಗಾಯಕ ನೇಹಾ ಕಕ್ಕರ್ ಇದೀಗ ಶಾಕಿಂಗ್ ಪೋಸ್ಟ್ ಒಂದನ್ನು ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರು ಹಾಕಿರುವ ಈ ಪೋಸ್ಟ್ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಲಾಗುತ್ತಿದೆ. ಅಷ್ಟಕ್ಕೂ, ನೇಹಾ ಅವರು ಎಲ್ಲರಿಗೂ ಗುಡ್ಬೈ, ಮತ್ತೆ ಸಿಗುತ್ತೇನೋ ಇಲ್ಲವೋ ಎಂದು ತಿಳಿಸಿದ್ದಾರೆ.
26
ಟ್ರೋಲ್‌ಗೆ ಒಳಗಾದ ನೇಹಾ
ಇತ್ತೀಚೆಗೆ ತನ್ನ ಸಹೋದರ ಟೋನಿ ಕಕ್ಕರ್ ಅವರೊಂದಿಗೆ ಮಾಡಿದ "ಕ್ಯಾಂಡಿ ಶಾಪ್" ವಿಡಿಯೋದಿಂದ ಸಾಮಾಜಿಕ ಮಾಧ್ಯಮದಲ್ಲಿ ಬಂದ ಟ್ರೋಲಿಂಗ್ ಮತ್ತು ಟೀಕೆಗಳಿಂದಾಗಿ ಈ ನಿರ್ಧಾರಕ್ಕೆ ಅವರು ಬಂದಿದ್ದಾರೆ. ಜನಮನದಿಂದ ದೂರವೇ ಉಳಿಯಲು ನಿರ್ಧರಿಸಿದ್ದಾರೆ.
36
ವಿರಾಮ ತೆಗೆದುಕೊಳ್ಳಲು ನಿರ್ಧಾರ
ಸೆಲೆಬ್ರಿಟಿ ಲೈಫ್ನಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರು ಹಂಚಿಕೊಂಡಿರುವ ಪೋಸ್ಟ್ ಭಾರಿ ವೈರಲ್ ಆಗುತ್ತಿದೆ. ಪ್ರಸ್ತುತ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜವಾಬ್ದಾರಿಗಳಿಂದ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ವಿವರಿಸಿದ್ದಾರೆ.
"ಪಾಪರಾಜಿಗಳು ಮತ್ತು ಅಭಿಮಾನಿಗಳು ನನ್ನ ಫೋಟೋ, ವಿಡಿಯೋ ಚಿತ್ರೀಕರಿಸದಿರುವಂತೆ ನಾನು ವಿನಂತಿಸುತ್ತೇನೆ. ನೀವು ನನ್ನ ಗೋಪ್ಯತೆಯನ್ನು ಗೌರವಿಸುತ್ತೀರಿ ಮತ್ತು ಈ ಜಗತ್ತಿನಲ್ಲಿ ನನ್ನನ್ನು ಮುಕ್ತವಾಗಿ ಬದುಕಲು ಬಿಡುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
56
ನನ್ನ ಶಾಂತಿಗಾಗಿ ಸಹಕಾರ
ದಯವಿಟ್ಟು ಕ್ಯಾಮರಾಗಳು ಬೇಡ, ನಾನು ವಿನಂತಿಸುತ್ತೇನೆ! ನನ್ನ ಶಾಂತಿಗಾಗಿ ನೀವೆಲ್ಲರೂ ನನಗೆ ನೀಡಬಹುದಾದ ಕನಿಷ್ಠ ವಿಷಯ ಇದು" ಎಂದು ನೇಹಾ ಬರೆದುಕೊಂಡಿದ್ದಾರೆ.
66
ಸಮತೋಲನಗೊಳಿಸಲು ಸಹಾಯ
ಈ ಮೂಲಕ ಫೋಟೋಗಳು ಅಥವಾ ವೀಡಿಯೊಗಳಿಗಾಗಿ ತಮಗೆ ಕಿರುಕುಳ ನೀಡಬೇಡಿ ಮತ್ತು ಅವರ ಗೋಪ್ಯತೆಯನ್ನು ಗೌರವಿಸುವಂತೆ ಅಭಿಮಾನಿಗಳು ಮತ್ತು ಪಾಪರಾಜಿಗಳನ್ನು ವಿನಂತಿಸಿದ್ದಾರೆ. ನೇಹಾ ಅವರು ತನಗಾಗಿ ಸಮಯ ತೆಗೆದುಕೊಳ್ಳಲು ಬಯಸುತ್ತಾರೆ ಮತ್ತು ಅವರು ಯಾವಾಗ ಹಿಂತಿರುಗುತ್ತಾರೆಂದು ತಿಳಿದಿಲ್ಲ ಎಂದು ಹೇಳಿದ್ದಾರೆ. ಈ ವಿರಾಮದ ಉದ್ದೇಶವು ಮನಸ್ಸಿನ ಶಾಂತಿಯನ್ನು ಕಂಡುಕೊಳ್ಳಲು ಮತ್ತು ಅವರ ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸಲು ಸಹಾಯ ಮಾಡುವುದು ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.