ಜೂನ್ 7 ರಂದು ಮುಕ್ತಾಯಗೊಳ್ಳಲಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯ ಬಗ್ಗೆ ಆದಿ ಪಾತ್ರಧಾರಿ ಹರೀಶ್ ರಾಜ್ ಮಾತನಾಡಿದ್ದಾರೆ. ಅವರು ತಮ್ಮ ನೆಚ್ಚಿನ ಕ್ಷಣಗಳು, ಫೈಟಿಂಗ್ ದೃಶ್ಯಗಳ ಮೆಲುಕು ಹಾಕಿದ್ದು, ಭಾಗ್ಯಳ ಪಾತ್ರದ ಬೆಳವಣಿಗೆ ಶ್ಲಾಘಿಸಿದ್ದಾರೆ ಮತ್ತು ಇಡೀ ತಂಡ ಮಿಸ್ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial) ಜೂನ್ 7ರಂದು ಮುಕ್ತಾಯಗೊಳ್ಳಲಿದೆ. ಕಳೆದ ಮೂರೂವರೆ ವರ್ಷಗಳಿಂದ ತೆರೆ ಕಂಡು ಎಲ್ಲರ ಮನಸ್ಸನ್ನು ಗೆದ್ದಿದ್ದ ಸೀರಿಯಲ್ ಈಗ ಮುಗಿಯಲಿದ್ದು, ಈ ಕುರಿತು ಸೀರಿಯಲ್ನಲ್ಲಿ ಆದಿ ಪಾತ್ರಧಾರಿ ಹರೀಶ್ ರಾಜ್ ಅವರು ಸೀರಿಯಲ್ನ ಕೆಲವೊಂದು ಘಟನೆಗಳ ಮೆಲುಕು ಹಾಕಿದ್ದಾರೆ.
25
ಫೆವರೆಟ್ ಮೋಮೆಂಟ್
ಈ ಸೀರಿಯಲ್ನಲ್ಲಿ ನನ್ನ ಫೆವರೆಟ್ ಮೋಮೆಂಟ್ ಎಂದರೆ ಆದೀಶ್ವರ ಕಾಮತ್ ಆಗಿ ಭಾಗ್ಯಳ ಎದುರು ಸಾರಿ ಕೇಳಿರುವಂಥದ್ದು. ಲೈಫ್ನಲ್ಲಿ ಅವನು ಮೊದಲ ಬಾರಿಗೆ ಮಂಡಿಯೂರಿ ಸಾರಿ ಕೇಳೋದು ತುಂಬಾ ಇಷ್ಟವಾಯ್ತು ಎಂದಿದ್ದಾರೆ.
35
ಅಚ್ಚೊತ್ತಿದ ಕಿಲ್ಲರ್ ಸೀನ್
ಮನಸ್ಸಿನಲ್ಲಿ ಅಚ್ಚೊತ್ತಿದ ಕಿಲ್ಲರ್ ಸೀನ್ ಬಗ್ಗೆ ಮಾತನಾಡಿದ ನಟ ಹರೀಶ್, ಈ ಸೀರಿಯಲ್ನಲ್ಲಿ 3-4 ಫೈಟ್ ಮಾಡಲು ಸಿಕ್ಕಿತು. ಅದನ್ನು ತುಂಬಾ ಚೆನ್ನಾಗಿ ಕಂಪೋಸ್ ಮಾಡಿದ್ರು, ಫೈಟಿಂಗ್ ದೃಶ್ಯಗಳು ತುಂಬಾ ಇಷ್ಟ ಆಯ್ತು ಎಂದಿದ್ದಾರೆ.
ಭಾಗ್ಯಲಕ್ಷ್ಮಿ ಮನೆಮಗಳ ಷೋ ಎನ್ನಿಸುವುದು ಏಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟ, ಭಾಗ್ಯ ಒಬ್ಬ ಸ್ವತಂತ್ರ ಮಹಿಳೆಯಾಗಿ ತನ್ನ ನಿರ್ಧಾರಗಳಿಂದ ಬೆಳೆದಿದ್ದಾಳೆ. ಯಾವುದೇ ಕಾರಣಕ್ಕೂ ಕುಗ್ಗಿ ಹೋಗಲಿಲ್ಲ. ಅವಳ ಕಾನ್ಫಿಡೆನ್ಸ್ ಡಬಲ್ ಆಗಿದೆ. ಗಂಡನ ಶೋಷಣೆ ಸಹಿಸಿಕೊಂಡು, ಬದುಕಬೇಕು ಎನ್ನುವುದು ಇಲ್ಲ. ತೀರಾ ಹದಗೆಟ್ಟಾಗ ತನ್ನ ಲೈಫ್ ತಾನು ನೋಡಿಕೊಂಡು ಛಲದಿಂದ ಎದುರಿಸಿದ ಭಾಗ್ಯ ಇಷ್ಟವಾದಳು ಎಂದಿದ್ದಾರೆ.
55
ಟೀಮ್ ತುಂಬಾ ಮಿಸ್ ಮಾಡ್ಕೋತೀನಿ
ನಾನು ನಮ್ಮ ಭಾಗ್ಯಲಕ್ಷ್ಮಿ ಟೀಂ ಅನ್ನು ತುಂಬಾ ಮಿಸ್ ಮಾಡಿಕೊಳ್ತೀನಿ. ಕೆಲವೊಮ್ಮೆ ಬೇರೆ ಬೇರೆ ಸೀರಿಯಲ್ಗಳಲ್ಲಿ ಟೀಮ್ ಚೆನ್ನಾಗಿರಲಿಲ್ಲ. ಆಗ ಬೇಸರ ಆಗತ್ತೆ. ಆದರೆ ಭಾಗ್ಯಲಕ್ಷ್ಮಿಯಲ್ಲಿ ಟೀಮ್ ತುಂಬಾ ಚೆನ್ನಾಗಿತ್ತು. ಅದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.