ನಾ ನಿನ್ನ ಬಿಡಲಾರೆ ಹಿತಾ@ 9: ನಟನೆಯಿಂದ ಮೋಡಿ ಮಾಡ್ತಿರೋ ಮಹಿತಾಳ ಕುತೂಹಲದ ಸ್ಟೋರಿ ಇಲ್ಲಿದೆ

Published : Sep 18, 2026, 05:11 PM IST

'ನಾ ನಿನ್ನ ಬಿಡಲಾರೆ' ಸೀರಿಯಲ್‌ನಲ್ಲಿ ಹಿತಾ ಪಾತ್ರದ ಮೂಲಕ ಗಮನ ಸೆಳೆಯುತ್ತಿರುವ ೯ ವರ್ಷದ ಬಾಲಕಿ ಮಹಿತಾ ಅದ್ಭುತ ನಟನೆಯ ಜೊತೆಗೆ ಗಾಯಕಿಯೂ ಹೌದು. ಹುಟ್ಟಿನಿಂದಲೇ ಒಲಿದಿರುವ ಈಕೆಯ ಕಲೆ ಮತ್ತು ಭಾವನಾತ್ಮಕ ನಟನೆ ವೀಕ್ಷಕರ ಕಣ್ಣಲ್ಲಿ ನೀರು ತರಿಸುತ್ತಿದೆ.

PREV
16
ಹಿತಾ ಅಲ್ಲ ಈಕೆ ಮಹಿತಾ

ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್​ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಬಾಲಕಿ ಎಂದರೆ ಹಿತಾ. ತನ್ನ ಅದ್ಭುತ ನಟನೆಯಿಂದ ಭೇಷ್​ ಎನ್ನಿಸಿಕೊಂಡಿದ್ದಾಳೆ ಈ ಪುಟಾಣಿಯ ರಿಯಲ್​ ಹೆಸರು ಮಹಿತಾ. ನಾ ನಿನ್ನ ಬಿಡಲಾರೆ ಸೀರಿಯಲ್​ನಲ್ಲಿ ಅದ್ಭುತ ನಟನೆಯಿಂದ ಮೋಡಿ ಮಾಡ್ತಿರೋ ಬಾಲಕಿ ಅಷ್ಟೇ ಅದ್ಭುತ ಗಾಯಕಿ ಕೂಡ. ಮಹಿತಾ, ಸ್ಕೂಲ್ ಮತ್ತು ಸೀರಿಯಲ್‌ ಎರಡನ್ನೂ ಮ್ಯಾನೇಜ್ ಮಾಡುತ್ತಿದ್ದಾಳೆ.

26
9ರ ಪುಟಾಣಿ

ಇಂದು ಅರ್ಥಾತ್​ ಸೆಪ್ಟೆಂಬರ್​ 18 ಪುಟಾಣಿಯ 9ನೇ ವರ್ಷದ ಹುಟ್ಟುಹಬ್ಬ. ಈ ದಿನವನ್ನು ವಿಶೇಷವಾಗಿ ಆಚರಿಸಿಕೊಂಡಿರುವ ಮಹಿತಾ, ಇದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾಳೆ. ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿರೋ ಈಕೆ, ಹುಟ್ಟುಹಬ್ಬವನ್ನು ಡಿಫರೆಂಟ್​ ಆಗಿ ಸೆಲೆಬ್ರೇಟ್​ ಮಾಡಿಕೊಂಡು ಅದರ ವಿಡಿಯೋ ಶೇರ್​ ಮಾಡಿದ್ದಾಳೆ.

36
ಹುಟ್ಟಿನಿಂದ ಬಂದ ಟ್ಯಾಲೆಂಟ್​

ಅಷ್ಟಕ್ಕೂ, ಕೆಲವರಿಗೆ ಹಾಗೆನೇ. ಟ್ಯಾಲೆಂಟ್​ ಎನ್ನುವುದು ಹುಟ್ಟುತ್ತಲೇ ಬಂದು ಬಿಡುತ್ತದೆ. ಹಿಂದಿನ ಜನ್ಮದಿಂದ ಬಂದ ಕಲೆ ಅದು ಎಂದು ಹೇಳುವವರೇ ಹೆಚ್ಚು ಮಂದಿ. ನಟನೆ, ಸಂಗೀತ, ಚಿತ್ರಕಲೆ, ಅಭಿನಯ, ನೃತ್ಯ... ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಚಿಕ್ಕಪುಟಾಣಿ ಇರುವಾಗಲೇ ಇವರು ಮಾಡುವ ಸಾಧನೆ ನೋಡಿದರೆ ನಿಜಕ್ಕೂ ಅದು ಈ ಜನ್ಮದಂತೂ ಇದ್ದಿರಲಿಕ್ಕೆ ಸಾಧ್ಯವೇ ಇಲ್ಲವೇನೋ ಅನ್ನಿಸಿಬಿಡುವುದು ಉಂಟು.

46
ರಕ್ತಗತವಾಗಿ ಬಂದ ಕಲೆ

ಕಲೆ ಎನ್ನುವುದು ರಕ್ತಗತವಾಗಿ ಬರುವುದು ನಿಜವಾದರೂ, ಕೆಲವೊಮ್ಮೆ ಯಾವ ಹಿನ್ನೆಲೆಯೂ ಇಲ್ಲದ ಪುಟಾಣಿ ಮಕ್ಕಳು ನಡೆದುಕೊಳ್ಳುವ ರೀತಿ ಅಚ್ಚರಿ ಎನ್ನಿಸುವುದು ಉಂಟು. ಅಂಥವಳಲ್ಲಿ ಒಬ್ಬಳು ಈ ಪುಟಾಣಿ ಮಹಿತಾ.

56
ಮನಸೋತ ವೀಕ್ಷಕರು

ನಾ ನಿನ್ನ ಬಿಡಲಾರೆ ಸೀರಿಯಲ್​ ಸೀರಿಯಲ್​ನಲ್ಲಿ ಈಕೆಯ ಒಂದೊಂದು ಅಭಿನಯಕ್ಕೂ ವೀಕ್ಷಕರು ಮನಸೋತಿದ್ದಾರೆ. ನಗು, ಅಳು, ತಮಾಷೆ ಏನೇ ಇರಲಿ. ಯಾವುದೇ ಭಾವ ಇರಲಿ ಅದಕ್ಕೆ ತಕ್ಕಂತೆ ನಟಿಸುತ್ತಾಳೆ. ದುಃಖದ ಸನ್ನಿವೇಶದಲ್ಲಿ ವೀಕ್ಷಕರನ್ನು ಅಳಿಸುತ್ತಾಳೆ.

66
ನಟನೆಯಿಂದ ಮೋಡಿ

ನಟನೆಯಲ್ಲಿ ಮಾತ್ರ ಮಹಿತಾ ಒಂದು ಹೆಜ್ಜೆ ಮುಂದು. ಅಬ್ಬಾ ಎನ್ನುವಂಥ ನಟನೆ ಈಕೆಯದ್ದು. ಇದೀಗ ಅಮ್ಮನ ನೆನಪಿನಲ್ಲಿ, ಅಮ್ಮನಿಗಾಗಿ ಹಂಬಲಿಸುತ್ತಾ, ಒಮ್ಮೆ ಬಂದು ನನ್ನನ್ನು ಹಗ್​ ಮಾಡು, ಪ್ಲೀಸ್​ ಬಾ ಅಮ್ಮಾ... ನನ್ನನ್ನು ಯಾಕೆ ಬಿಟ್ಟುಹೋದೆ... ಎಂದು ಕೇಳುವ ಪರಿ ಮಾತ್ರ ಬಹುತೇಕ ವೀಕ್ಷಕರು , ನೆಟ್ಟಿಗರ ಕಣ್ಣಲ್ಲಿ ನೀರನ್ನು ತರಿಸಿದ್ದನ್ನು ಕಮೆಂಟ್​ನಲ್ಲಿ ಹಾಕಿರುವ ಸಂದೇಶಗಳಿಂದಲೇ ನೋಡಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories