ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ, ನಾಯಕಿಯಾಗಿ ಮಿಂಚುತ್ತಿರುವ ಕಾವ್ಯ ಕಲ್ಯಾಣ್‌ರಾಮ್, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರ ಪುತ್ರ, ಗಾಯಕ ಕಾಲಭೈರವ ಅವರನ್ನು ವಿವಾಹವಾಗಲಿದ್ದಾರೆ. ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಘೋಷಿಸಿದ ಕಾವ್ಯ, ಇಬ್ಬರ ನಡುವೆ ಪ್ರೀತಿ ಶುರುವಾದ ರಹಸ್ಯವನ್ನು ಹಂಚಿಕೊಂಡಿದ್ದಾರೆ.
ಬಾಲ ಕಲಾವಿದೆಯಾಗಿ ಟಾಲಿವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದ ನಟಿ ಕಾವ್ಯ ಕಲ್ಯಾಣ್‌ರಾಮ್ ಅವರು ಈಗ ಹೀರೋಯಿನ್ ಆಗಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಟಾಲಿವುಡ್ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಹಿರಿಯ ಮಗ ಗಾಯಕ ಕಾಲಭೈರವ ಅವರೊಂದಿಗೆ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಇದರೊಂದಿಗೆ ಕೆಲವು ದಿನಗಳಿಂದ ಕೇಳಿ ಬರುತ್ತಿದ್ದ ಸುದ್ದಿಗಳಿಗೆ ಫುಲ್ ಸ್ಟಾಪ್ ಬಿದ್ದಿದೆ.
26
ಇಡೀ ಜಗತ್ತು ಸುಂದರವಾಗಿ ಕಾಣುತ್ತದೆ
ಇಷ್ಟು ದಿನ ಸೀಕೆಟ್ ಆಗಿದ್ದ ವಿಚಾರವನ್ನು ನಟಿ ಕಾವ್ಯ ರಿವೀಲ್ ಮಾಡಿದ್ದು, ತನ್ನ ಜೀವನದಲ್ಲಿ ಸರಿಯಾದ ವ್ಯಕ್ತಿ ಬಂದ ಸಂದರ್ಭದಲ್ಲಿ ಇಡೀ ಪ್ರಪಂಚ ಸುಂದರವಾಗಿ ಕಾಣುತ್ತದೆ. ಕೆಲವು ನಮ್ಮ ಜೀವನಕ್ಕೆ ಬಂದರೆ ದೇವರು ನಮ್ಮ ಮೇಲೆ ಎಷ್ಟು ಪ್ರೀತಿ ಹೊಂದಿದ್ದಾರೆ ಎಂದು ಅರ್ಥವಾಗುತ್ತದೆ ಎಂದು ನಟಿ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ ಸಾಮಾನ್ಯ ದಿನಗಳು ಕೂಡ ವಿಶೇಷವಾಗಿ ಮಾಡಿದ್ದೀರಿ ಎಂದು ಕಾಲಭೈರವ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ತನ್ನನ್ನು ಜಗತ್ತಿನಲ್ಲಿ ಅತ್ಯಂತ ಅದೃಷ್ಟವಂತಳು ಎಂದು ಭಾವಿಸುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
36
ಈ ಸಂತಸ ಜೀವನದುದ್ದಕ್ಕೂ ಬೇಕು!
ತಮ್ಮ ಇಷ್ಟಗಳನ್ನು ಎಷ್ಟು ಚೆನ್ನಾಗಿ ಕಾಲಭೈರವ ಅರ್ಥ ಮಾಡಿಕೊಂಡಿದ್ದಾರೆ ಎಂದು ವಿವರಿಸಿರುವ ಕಾವ್ಯ ಕಲ್ಯಾಣ್‌ರಾಮ್ ಅವರು, ನಾನು ಬೇಡ ಅಂತ ಹೇಳಿದರು, ತನಗೆ ಡೈಟ್ ಕೋಕ್ ಬೇಕು ಎಂಬುವುದು ಅವರಿಗೆ ತಿಳಿಯುತ್ತದೆ. ಇಬ್ಬರ ನಡುವೆ ಇಂತಹ ಹಲವು ಸಣ್ಣ ಸಣ್ಣ ಕ್ಷಣಗಳು ಜೀವನವನ್ನು ಸುಂದರವಾಗಿ ಮಾಡುತ್ತಿದೆ, ಇಂತಹ ಕ್ಷಣಗಳು ಜೀವನದ ಉದ್ದಕ್ಕೂ ಬೇಕು ಎಂದು ಹೇಳಿದ್ದಾರೆ.
ಅಧಿಕೃತ ತಮ್ಮ ಪ್ರೀತಿಯ ವಿಚಾರವನ್ನು ಕ್ಯಾವ್ಯ ರಿವೀಲ್ ಮಾಡಿದ್ದು, ಈ ಪೋಸ್ಟ್ ಸಾಮಾಜಿಕ ಜಾತಲಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಬಾಲ ಕಲಾವಿದೆಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಈಗ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ವೃತ್ತಿಜೀವನದ ಉತ್ತಮ ಸ್ಥಿತಿಯಲ್ಲಿರುವ ಸಂದರ್ಭದಲ್ಲಿಯೇ ಖ್ಯಾತ ಸಂಗೀತ ನಿರ್ದೇಶಕರ ಕುಟುಂಬದಲ್ಲಿ ಸೊಸೆಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಇದರೊಂದಿಗೆ ಅಭಿಮಾನಿಗಳು ನಟಿಗೆ ಶುಭಾಶಯಗಳನ್ನು ತಿಳಿಸಿ, ಕಾಮೆಂಟ್ ಮಾಡುತ್ತಿದ್ದಾರೆ.
56
ಲವರ್ ತಮ್ಮನೊಂದಿಗೆ ಸಿನಿಮಾ
ಅಂದಹಾಗೇ, ಇವರ ಪ್ರೀತಿ ಶುರುವಾಗಿದ್ದು ವಿಶೇಷ ಅಂತಲೇ ಹೇಳಬಹುದು. ನಟಿ ಕಾವ್ಯ, ಕಾಲಭೈರವ ಸಹೋದರ ನಟಿಸುತ್ತಿರುವ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದು, ಈ ಸಂದರ್ಭದಲ್ಲಿಯೇ ಇಬ್ಬರ ಪರಿಚಯ ಆಗಿತ್ತಂತೆ. ಸಿನಿಮಾದಲ್ಲಿ ತಮ್ಮನಿಗೆ ಹೀರೋಯಿನ್ ಆಗಿ ನಟಿಸಿರುವ ಕಾವ್ಯ, ನಿಜ ಜೀವನದಲ್ಲಿ ಆತನ ಅಣ್ಣನನ್ನೇ ಪ್ರೀತಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
66
ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ
10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದ ಕಾವ್ಯ, ಮಸೂದ ಸಿನಿಮಾದೊಂದಿಗೆ ಹೀರೋಯಿನ್ ಆಗಿ ಕಾಮ್‌ಬ್ಯಾಕ್ ಮಾಡಿದ್ದರು. ಮೊದಲ ಸಿನಿಮಾವೇ ಸೂಪರ್ ಹಿಟ್ ಆಗಿತ್ತು. ಆ ಬಳಿಕ 'ಬಲಗಂ' ಸಿನಿಮಾದ ಕೂಡ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಇನ್ನು ಕಾಲಭೈರವ ಸಹೋದರ ನಟಿಸಿರುವ 'ಉಸ್ತಾದ್' ಸಿನಿಮಾದಲ್ಲಿ ಕಾವ್ಯ ಹೀರೋಯಿನ್ ಆಗಿ ನಟಿಸಿದ್ದರೆ. ಸದ್ಯ ಕಾವ್ಯ, 'ವಾಟ್ಸಾಪ್ ನರೇಶ್' ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.