Film Etiquette: ಥಿಯೇಟರ್‌ನಲ್ಲಿ ಸಿನಿಮಾ ನೋಡ್ತೀರಾ? ಈ 10 ತಪ್ಪುಗಳನ್ನು ಮಾತ್ರ ಮಾಡ್ಬೇಡಿ!

Published : Sep 04, 2026, 09:32 PM IST

ಥಿಯೇಟರ್‌ನಲ್ಲಿ ಸಿನಿಮಾ ನೋಡುವಾಗ ಮೊಬೈಲ್ ಫೋನ್ ಬಳಕೆ, ಗಟ್ಟಿಯಾಗಿ ಮಾತಾಡುವುದು, ಮುಂದಿನ ಸೀಟಿಗೆ ಕಾಲು ತಾಗಿಸುವುದು, ಸ್ಪಾಯ್ಲರ್ ಕೊಡುವುದರಿಂದ ಹಿಡಿದು ಪಾಪ್‌ಕಾರ್ನ್ ತಿನ್ನುವವರೆಗೆ ಗಮನಿಸಬೇಕಾದ 10 ಪ್ರಮುಖ ಸಿನಿಮಾ ಶಿಷ್ಟಾಚಾರಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

PREV
19
ಮೊಬೈಲ್ ಸೈಲೆಂಟ್‌ನಲ್ಲಿ ಇರಲಿ
ಸಿನಿಮಾ ಶುರುವಾದ ತಕ್ಷಣ ಮೊಬೈಲ್ ಅನ್ನು ಸೈಲೆಂಟ್ ಅಥವಾ 'ಡು ನಾಟ್ ಡಿಸ್ಟರ್ಬ್' ಮೋಡ್‌ಗೆ ಹಾಕಿ. ಅದನ್ನು ಬ್ಯಾಗ್ ಅಥವಾ ಪಾಕೆಟ್‌ನಲ್ಲಿ ಇಡುವುದು ಉತ್ತಮ. ಸಿನಿಮಾ ನೋಡುವಾಗ ಫೋನ್‌ನಲ್ಲಿ ಮಾತನಾಡಿದರೆ ಪಕ್ಕದವರಿಗೆ ಕಿರಿಕಿರಿಯಾಗುತ್ತದೆ. ಕತ್ತಲಿರುವ ಥಿಯೇಟರ್‌ನಲ್ಲಿ ನಿಮ್ಮ ಫೋನ್ ಸ್ಕ್ರೀನ್‌ನ ಸಣ್ಣ ಬೆಳಕು ಕೂಡ ಅಕ್ಕಪಕ್ಕದವರ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ.
29
ಸಿನಿಮಾ ನೋಡುವಾಗ ಚಾಟಿಂಗ್ ಬೇಡ
ಕೇವಲ ಒಂದೇ ಒಂದು ಮೆಸೇಜ್‌ಗೆ ರಿಪ್ಲೈ ಮಾಡ್ತೀನಿ ಅಂತ ಶುರುಮಾಡಿ, WhatsApp, Instagram ಅಂತ ಸೋಷಿಯಲ್ ಮೀಡಿಯಾ ಬಳಸುತ್ತಾ ಹೋದರೆ, ಅದು ಸಿನಿಮಾ ಅನುಭವವನ್ನು ಮಾತ್ರವಲ್ಲ, ನಿಮ್ಮ ಸುತ್ತಮುತ್ತಲಿನವರನ್ನೂ ಡಿಸ್ಟರ್ಬ್ ಮಾಡುತ್ತದೆ. ತುಂಬಾನೇ ಮುಖ್ಯವಾದ ಕಾಲ್ ಬಂದರೆ, ಥಿಯೇಟರ್‌ನಿಂದ ಹೊರಗೆ ಹೋಗಿ ಮಾತನಾಡುವುದು ಒಳ್ಳೆಯದು.
39
ಗಟ್ಟಿಯಾಗಿ ಮಾತನಾಡಬೇಡಿ
ಕಾಮಿಡಿ ದೃಶ್ಯಗಳಿಗೆ ನಗುವುದು, ಇಷ್ಟದ ಹೀರೋ ಎಂಟ್ರಿಗೆ ಚಪ್ಪಾಳೆ ತಟ್ಟುವುದು ಸಿನಿಮಾ ಅನುಭವದ ಒಂದು ಭಾಗವೇ ಸರಿ. ಆದರೆ, ಸಿನಿಮಾ ನೋಡುತ್ತಲೇ ಅದರ ಕಥೆಯ ಬಗ್ಗೆ ಚರ್ಚಿಸುವುದು, ಗಟ್ಟಿಯಾಗಿ ಮಾತನಾಡುವುದು ಬೇರೆಯವರಿಗೆ ತೊಂದರೆ ಕೊಡಬಹುದು.
49
ಸ್ಪಾಯ್ಲರ್ ಕೊಡಬೇಡಿ
ನೀವು ಈಗಾಗಲೇ ಸಿನಿಮಾ ನೋಡಿದ್ದರೂ, ಎರಡನೇ ಬಾರಿ ನೋಡುವಾಗ ಸಿನಿಮಾದ ಟ್ವಿಸ್ಟ್, ಇಂಟರ್‌ವಲ್ ಬ್ಲಾಕ್, ಕ್ಲೈಮ್ಯಾಕ್ಸ್ ಬಗ್ಗೆ ಮೊದಲೇ ಹೇಳುವುದು ನಿಮ್ಮ ಅಕ್ಕಪಕ್ಕದವರಿಗೆ ಕಿರಿಕಿರಿ ಉಂಟುಮಾಡುತ್ತದೆ. ಇದು ಅವರ ಸಿನಿಮಾ ನೋಡುವ ಅನುಭವವನ್ನೇ ಹಾಳುಮಾಡುತ್ತದೆ.
59
ತಿಂಡಿ ತಿನ್ನುವಾಗಲೂ ಸ್ವಲ್ಪ ಗಮನವಿರಲಿ
ಥಿಯೇಟರ್‌ನಲ್ಲಿ ಪಾಪ್‌ಕಾರ್ನ್, ಚಿಪ್ಸ್, ಕೂಲ್ ಡ್ರಿಂಕ್ಸ್ ಇಲ್ಲದೆ ಸಿನಿಮಾ ಅನುಭವ ಪೂರ್ಣವಾಗುವುದಿಲ್ಲ. ಆದರೆ ಪಾಪ್‌ಕಾರ್ನ್, ಚಿಪ್ಸ್ ಪ್ಯಾಕೆಟ್‌ಗಳನ್ನು ಜೋರಾಗಿ ತೆರೆಯುವುದು, ಗರಿಗರಿಯಾದ ತಿಂಡಿಗಳನ್ನು ಹೆಚ್ಚು ಶಬ್ದ ಮಾಡಿ ತಿನ್ನುವುದು ಪಕ್ಕದವರಿಗೆ ತೊಂದರೆಯಾಗಬಹುದು. ಹಾಗಾಗಿ, ಸಾಧ್ಯವಾದಷ್ಟು ಕಡಿಮೆ ಶಬ್ದ ಮಾಡಿ ತಿನ್ನುವುದು ಉತ್ತಮ.
69
ಮುಂದಿನ ಸೀಟಿಗೆ ಕಾಲು ತಾಗಿಸಬೇಡಿ
ಆಸಕ್ತಿಯಿಂದ ಸಿನಿಮಾ ನೋಡುತ್ತಿರುವಾಗ, ಮುಂದಿರುವವರ ಸೀಟಿಗೆ ಕಾಲಿನಿಂದ ಒದೆಯುವುದು ಅವರಿಗೆ ಕಿರಿಕಿರಿ ಉಂಟುಮಾಡುತ್ತದೆ. ಥಿಯೇಟರ್ ಒಂದು ಸಾರ್ವಜನಿಕ ಸ್ಥಳ. ಮುಂದಿನ ಸೀಟಿನ ಮೇಲೆ ಕಾಲಿಡುವುದು ಅಥವಾ ಸೀಟುಗಳ ನಡುವೆ ಕಾಲು ಚಾಚುವುದು ಬೇರೆಯವರಿಗೆ ಮುಜುಗರ ಉಂಟುಮಾಡಬಹುದು. ಆದ್ದರಿಂದ, ನಿಮ್ಮ ಕಾಲುಗಳನ್ನು ನಿಮ್ಮ ಜಾಗದಲ್ಲೇ ಇಟ್ಟುಕೊಳ್ಳುವುದು ಉತ್ತಮ.
79
ತಡವಾಗಿ ಬರುವುದನ್ನು ತಪ್ಪಿಸಿ
ಸಿನಿಮಾ ಶುರುವಾಗಿ ಓಡುತ್ತಿರುವಾಗ ಕತ್ತಲೆಯಲ್ಲಿ ಬಂದು ನಿಮ್ಮ ಸೀಟು ಹುಡುಕುವುದು ನಿಮಗೂ ಕಷ್ಟ, ಈಗಾಗಲೇ ಸಿನಿಮಾ ನೋಡುತ್ತಿರುವವರಿಗೂ ಅಡ್ಡಿಯಾಗುತ್ತದೆ. ಆದ್ದರಿಂದ, ಶೋ ಟೈಮ್‌ಗೂ ಮುನ್ನವೇ ಥಿಯೇಟರ್‌ಗೆ ಬಂದು ನಿಮ್ಮ ಸೀಟು ಹುಡುಕಿ ಕುಳಿತುಕೊಳ್ಳುವುದು ಉತ್ತಮ.
89
ವಿಡಿಯೋ ರೆಕಾರ್ಡ್ ಮಾಡಬೇಡಿ
ಸ್ಕ್ರೀನ್ ಮೇಲೆ ಬರುವ ದೃಶ್ಯಗಳನ್ನು ಫೋಟೋ ಅಥವಾ ವಿಡಿಯೋ ತೆಗೆಯುವುದು ಬೇರೆಯವರ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಮುಖ್ಯವಾಗಿ, ಭಾರತದಲ್ಲಿ ಸಿನಿಮಾಗಳನ್ನು ಅನುಮತಿಯಿಲ್ಲದೆ ರೆಕಾರ್ಡ್ ಮಾಡುವುದರ ವಿರುದ್ಧ 'ಸಿನಿಮಾಟೋಗ್ರಾಫ್ (ತಿದ್ದುಪಡಿ) ಕಾಯ್ದೆ, 2023' ಅಡಿಯಲ್ಲಿ ಕಠಿಣ ಕಾನೂನು ನಿಯಮಗಳಿವೆ. ಅನಧಿಕೃತ ರೆಕಾರ್ಡಿಂಗ್ ಮತ್ತು ಪ್ರಸಾರ ಶಿಕ್ಷಾರ್ಹ ಅಪರಾಧ.
99
ಕಸವನ್ನು ಅಲ್ಲೇ ಬಿಟ್ಟು ಬರಬೇಡಿ

ಪಾಪ್‌ಕಾರ್ನ್ ಬಾಕ್ಸ್, ಕಪ್‌ಗಳು, ಟಿಶ್ಯೂ, ಫುಡ್ ಪ್ಯಾಕೆಟ್‌ಗಳನ್ನು ಸೀಟಿನ ಪಕ್ಕದಲ್ಲೇ ಹಾಕಿ ಬರುವುದನ್ನು ತಪ್ಪಿಸಬೇಕು. ಥಿಯೇಟರ್ ಸಿಬ್ಬಂದಿ ಸ್ವಚ್ಛ ಮಾಡುತ್ತಾರೆ ನಿಜ, ಆದರೆ ನಮ್ಮ ಕಸವನ್ನು ಸರಿಯಾದ ಜಾಗದಲ್ಲಿ ಹಾಕುವುದು ನಮ್ಮ ಮೂಲಭೂತ ಜವಾಬ್ದಾರಿ. ಒಟ್ಟಿನಲ್ಲಿ, ಥಿಯೇಟರ್‌ನಲ್ಲಿ ಸಿನಿಮಾ ನೋಡುವಾಗ ಬೇರೆಯವರ ಅನುಭವವನ್ನೂ ಗೌರವಿಸುವುದು ಮುಖ್ಯ. ನಮ್ಮ ಮನರಂಜನೆ ಬೇರೆಯವರಿಗೆ ತೊಂದರೆಯಾಗದಂತೆ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡರೆ, ಎಲ್ಲರಿಗೂ ಉತ್ತಮ ಸಿನಿಮಾ ಅನುಭವ ಸಿಗುತ್ತದೆ. 

ಗಮನಿಸಿ: ಈ ಲೇಖನದಲ್ಲಿ ಉಲ್ಲೇಖಿಸಲಾದ ಕೆಲವು ಮಾಹಿತಿಯನ್ನು ಬ್ರಿಟಿಷ್ ಶಿಷ್ಟಾಚಾರ ಪ್ರಕಾಶಕರಾದ 'ಡೆಬ್ರೆಟ್ಸ್' (Debrett’s) ಪ್ರಕಟಿಸಿದ “ಸಿನಿಮಾದಲ್ಲಿ ಶಿಷ್ಟಾಚಾರ” (Etiquette at the Cinema) ಮಾರ್ಗದರ್ಶಿಯನ್ನು ಆಧರಿಸಿ ನೀಡಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories