ಮಲಯಾಳಂ ಚಿತ್ರರಂಗವು ಸಣ್ಣ ಕಥೆಯನ್ನಿಟ್ಟುಕೊಂಡು ಅದ್ಭುತ ಸಿನಿಮಾ ಮಾಡುವಲ್ಲಿ ನಿಪುಣವಾಗಿದೆ. ನೀವು ಡಬಲ್ ಥ್ರಿಲ್ಲರ್ ಅನುಭವ ನೀಡುವ ಮಲಯಾಳಂ ಸಿನಿಮಾಗಳ ಹುಡುಕಾಟದಲ್ಲಿದ್ದರೆ, ಈ 5 ಚಿತ್ರಗಳನ್ನು ನಿಮ್ಮ ವಾಚ್ ಲಿಸ್ಟ್‌ಗೆ ಸೇರಿಸಿಕೊಳ್ಳಬಹುದು.
ಸಣ್ಣದಾದ ಎಳೆಯ ಕಥೆಯನ್ನಿಟ್ಟುಕೊಂಡು ಅದ್ಭುತವಾದ ಸಿನಿಮಾ ಮಾಡುವಲ್ಲಿ ಮಲಯಾಳಂ ಚಿತ್ರರಂಗ ನಿಪುಣರು. ನೀವು ಸಹ ಮಲಯಾಳಂ ಸಿನಿಮಾ ಪ್ರಿಯರಾಗಿದ್ದು, ಡಬಲ್ ಥ್ರಿಲ್ಲರ್ ಫಿಲಂ ಹುಡುಕುತ್ತಿದ್ದೀರಾ? ಈ ಕೆಳಗಿನ ಸಿನಿಮಾಗಳನ್ನು ನಿಮ್ಮ ವಾಚ್ ಲಿಸ್ಟ್‌ಗೆ ಸೇರಿಸಿಕೊಳ್ಳಿ. ಈ ಸಿನಿಮಾಗಳು ಥ್ರಿಲ್ಲರ್ ಎಂಬ ಪದಕ್ಕೆ ಸರಿಯಾದ ಅರ್ಥವನ್ನು ನೀಡಿವೆ.
26
Anjaam Pathiraa
ಇದು ಜಬರ್‌ದಸ್ತ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ಕ್ರೈಂ ಆಂಡ್ ಮಿಸ್ಟರಿ ಸ್ಟೋರಿ ವೀಕ್ಷಕರಿಗೆ ಇದು ಒಳ್ಳೆಯ ಆಯ್ಕೆಯಾಗಲಿದೆ. ಈ ಸಿನಿಮಾವನ್ನು ಸನ್ ನೆಕ್ಷ್ಟ್ ನಲ್ಲಿ ನೋಡಬಹುದು. ಮಲಯಾಳಂ ಜೊತೆ ಹಿಂದಿ ಭಾಷೆಯಲ್ಲಿಯೂ Anjaam Pathiraa ನೋಡುಗರಿಗೆ ಲಭ್ಯವಿದೆ.
36
Corona Papers
ಕೊರೊನಾ ಪೇಪರ್ಸ್ ಸಿನಿಮಾ ನೋಡಲು ಆರಂಭಿಸಿದ್ರೆ ಕೊನೆಯವರೆಗೂ ಕುರ್ಚಿಗೆ ಅಂಟಿಕೊಂಡೇ ಕುಳಿತುಕೊಳ್ಳುವಂತೆ ಮಾಡುತ್ತದೆ. ಈ ಬಾರಿ ವೀಕೆಂಡ್‌ನಲ್ಲಿ ನೋಡುವ ಸಿನಿಮಾಗಳ ಪಟ್ಟಿಗೆ Corona Papers ಸೇರಿಸಿಕೊಳ್ಳಿ. ಈ ಚಿತ್ರ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.
ಅತ್ಯಂತ ವಿಶೇಷ ಮತ್ತು ಅದ್ಭುತವಾದ ಕಥೆಯೇ ಗೋಲಂ ಸಿನಿಮಾದ ಪವರ್. ಕಚೇರಿಯೊಂದರಲ್ಲಿ ನಡೆಯುವ ಕೊ*ಲೆ ಸುತ್ತ ಸಿನಿಮಾ ಸಾಗುತ್ತದೆ. ಹೇಗೆ ಮತ್ತು ಯಾರು ಅನ್ನೋ ಪ್ರಶ್ನೆಗಳು ನಿಮ್ಮನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ. ಈ ಸಿನಿಮಾವನ್ನು ಹಾಟ್‌ಸ್ಟಾರ್‌ನಲ್ಲಿ ನೋಡಬಹುದು.
56
Operation Java
ಆಪರೇಷನ್ ಜಾವಾ ಹೆಸರಿನ ಸಿನಿಮಾ ನೋಡುವಾಗ ಮುಂದೆ ಏನಾಗುತ್ತೆ ಅನ್ನೋ ಕುತೂಹಲದಿಂದ ನಿಮ್ಮ ಹಾರ್ಟ್‌ಬೀಟ್ ಹೆಚ್ಚಳವಾಗುತ್ತದೆ. ಪ್ರೇಕ್ಷಕರ ನಿರೀಕ್ಷೆಗಿಂತ ಡಬಲ್ ಥ್ರಿಲ್ಲರ್ ಹೊಂದಿರುವ Operation Java ಸಿನಿಮಾವನ್ನು ಜಿ5 ಒಟಿಟಿ ಪ್ಲಾಟ್‌ಫಾರಂನಲ್ಲಿ ನೋಡಿ.
66
Pulimada
2023ರಲ್ಲಿ ಬಿಡುಗಡೆಯಾದ Pulimada ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದಾಗಿದೆ. ಜೋಜು ಜಾರ್ಜ್ ಮತ್ತು ಐಶ್ವರ್ಯಾ ರಾಜೇಶ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಓರ್ವ ಸಿವಿಲ್ ಆಫಿಸರ್ ಸುತ್ತ ಸಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.