ಹುಟ್ಟುಹಬ್ಬದ ದಿನವೇ ಜಾರ್ಜ್‌ಕುಟ್ಟಿಯ ಅಸಲಿ ಸೀಕ್ರೆಟ್ ಬಿಚ್ಚಿಟ್ರು ಮೋಹನ್‌ಲಾಲ್: ಅಷ್ಟಕ್ಕೂ ಏನಂದ್ರು?

Published : May 21, 2026, 05:07 PM IST

ದೃಶ್ಯಂ ಫ್ರಾಂಚೈಸ್‌ನ ಜಾರ್ಜ್‌ಕುಟ್ಟಿ ಪಾತ್ರವನ್ನು ನಿರ್ವಹಿಸುವಾಗ ಎದುರಾದ ಸವಾಲುಗಳ ಬಗ್ಗೆ ನಟ ಮೋಹನ್‌ಲಾಲ್ ಮಾತನಾಡಿದ್ದಾರೆ. ಹೊರಗಿನಿಂದ ಶಾಂತವಾಗಿ ಕಂಡರೂ, ಒಳಗೆ ಭಯ ಮತ್ತು ಸಂಘರ್ಷದಲ್ಲಿರುವ ವ್ಯಕ್ತಿ ಆತ ಎಂದು ಅವರು ಹೇಳಿದ್ದಾರೆ.

PREV
15
ಬುದ್ಧಿವಂತರನ್ನೂ ಮೀರಿಸುವ ಜಾಣ್ಮೆ

ಕಳೆದ ನಾಲ್ಕೂವರೆ ದಶಕಗಳಿಂದ ಮೋಹನ್‌ಲಾಲ್ ನೂರಾರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆದರೆ, 'ದೃಶ್ಯಂ' ಸಿನಿಮಾದ ಜಾರ್ಜ್‌ಕುಟ್ಟಿ ಪಾತ್ರ ಮಾತ್ರ ತುಂಬಾನೇ ಸ್ಪೆಷಲ್. ನಾಲ್ಕನೇ ಕ್ಲಾಸ್ ಓದಿದ್ರೂ, ಬುದ್ಧಿವಂತರನ್ನೂ ಮೀರಿಸುವ ಜಾಣ್ಮೆ ಅವನದ್ದು. ಈಗ 'ದೃಶ್ಯಂ 3' ಸಿನಿಮಾ ರಿಲೀಸ್‌ಗೆ ರೆಡಿಯಾಗ್ತಿದ್ದು, ಈ ಪಾತ್ರದ ಬಗ್ಗೆ ಮೋಹನ್‌ಲಾಲ್ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಶೀರ್ವಾದ್ ಸಿನಿಮಾಸ್ ಆಯೋಜಿಸಿದ್ದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

25
ಸತ್ಯ ಹೇಳೋಕೆ ಆಗಲ್ಲ

ಜಾರ್ಜ್‌ಕುಟ್ಟಿ ಪಾತ್ರ ನನಗೆ ಇನ್ನೂ ಸರಿಯಾಗಿ ಅರ್ಥವಾಗಿಲ್ಲ. ದೃಶ್ಯಂ ಸರಣಿಯ ಪ್ರತಿ ಭಾಗದಲ್ಲೂ ಆತ ತದ್ವಿರುದ್ಧವಾಗಿ ರಿಯಾಕ್ಟ್ ಮಾಡ್ತಾನೆ. ಯಾಕಂದ್ರೆ, ಅವನಿಗೆ ಸತ್ಯ ಹೇಳೋಕೆ ಆಗಲ್ಲ. ತನ್ನ ಕುಟುಂಬಕ್ಕೆ ಏನೂ ಗೊತ್ತಾಗಬಾರದು ಅಂತ ನೋಡಿಕೊಳ್ಳಬೇಕು. ಹೀಗೆ ಸಾಕಷ್ಟು ವಿಚಾರಗಳಿವೆ. ಹಾಗಾಗಿ, ಅವನು ಯಾವಾಗಲೂ ತಪ್ಪು ಎಕ್ಸ್‌ಪ್ರೆಶನ್‌ಗಳನ್ನೇ ಕೊಡುತ್ತಾನೆ. ಯಾರಾದ್ರೂ ಬಂದು ಹೆದರಿಸಿದ್ರೆ, ಭಯಪಡೋ ಬದಲು ನಗುತ್ತಾ ನಿಂತಿರುತ್ತಾನೆ.

35
ಆತ ಕ್ರೈಂ ಮಾಡಿಲ್ಲ

ಆದರೆ ಅವನ ಒಳಗಡೆ ಭಯ ಇರುತ್ತೆ. ಜಾರ್ಜ್‌ಕುಟ್ಟಿ ನಿಜವಾಗ್ಲೂ ತುಂಬಾನೇ ಹೆದರುವ ವ್ಯಕ್ತಿ. ತಪ್ಪು ಮಾಡಿದವನಿಗೆ ಯಾವಾಗಲೂ ಭಯ ಇದ್ದೇ ಇರುತ್ತೆ. ನಿಜ ಹೇಳಬೇಕೆಂದರೆ, ಆತ ಕ್ರೈಂ ಮಾಡಿಲ್ಲ. ಆದರೂ, ಒಂದು ರೀತಿಯ ಅಪರಾಧಿ ಪ್ರಜ್ಞೆ ಅವನನ್ನು ಕಾಡುತ್ತಿರುತ್ತೆ. ಈ ಗಿಲ್ಟ್ ಅನ್ನೋದು ನರಕದ ಹಾಗೆ ಅಂತಾರೆ. ಅವನ ಒಂದು ಎಕ್ಸ್‌ಪ್ರೆಶನ್ ಬದಲಾದರೂ ಸಾಕು, ಜಾರ್ಜ್‌ಕುಟ್ಟಿ ಸಿಕ್ಕಿಬೀಳುತ್ತಾನೆ.

45
ಯಾವುದೇ ಹಂತಕ್ಕೂ ಹೋಗಲು ಸಿದ್ಧ

ಹೊರಗಿನಿಂದ ಖುಷಿಯಾಗಿ ಕಾಣುವ ಜಾರ್ಜ್‌ಕುಟ್ಟಿ, ಒಳಗೆ ದೊಡ್ಡ ಸಂಘರ್ಷವನ್ನೇ ಅನುಭವಿಸುತ್ತಿರುವ ವ್ಯಕ್ತಿ ಅಂತ ಮೋಹನ್‌ಲಾಲ್ ವಿವರಿಸಿದ್ದಾರೆ. ದೃಶ್ಯಂ ಸರಣಿಯಲ್ಲಿ ಬರುವ ಜಾರ್ಜ್‌ಕುಟ್ಟಿ ಮತ್ತು ಅವನ ಹೆಂಡತಿ ಆನಿಅಮ್ಮ, ಮಲಯಾಳಿ ಪ್ರೇಕ್ಷಕರಿಗೆ ತಮ್ಮ ಪಕ್ಕದ ಮನೆಯವರ ಹಾಗೆ ಅನಿಸುತ್ತಾರೆ. ತನ್ನ ಕುಟುಂಬವನ್ನು ರಕ್ಷಿಸಲು ಜಾರ್ಜ್‌ಕುಟ್ಟಿ ಯಾವುದೇ ಹಂತಕ್ಕೂ ಹೋಗಲು ಸಿದ್ಧ.

55
ಕುಟುಂಬವನ್ನು ಉಳಿಸಿಕೊಳ್ಳಲೇಬೇಕು

ಎಷ್ಟೇ ದೊಡ್ಡ ಸವಾಲುಗಳು ಬಂದರೂ, ಕುಟುಂಬವನ್ನು ಉಳಿಸಿಕೊಳ್ಳಲೇಬೇಕು ಅನ್ನೋದು ಅವನ ದೃಢ ನಿರ್ಧಾರ. 'ದೃಶ್ಯಂ 3' ಕೂಡ ಜಾರ್ಜ್‌ಕುಟ್ಟಿಯ ಇದೇ ನಿರ್ಧಾರಗಳ ಸುತ್ತವೇ ಮುಂದುವರಿಯಲಿದೆ. ನಿರ್ದೇಶಕ ಜೀತು ಜೋಸೆಫ್, ಕಳೆದ ಕೆಲವು ವರ್ಷಗಳಲ್ಲಿ ಆದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಜಾರ್ಜ್‌ಕುಟ್ಟಿ ಮತ್ತು ಅವನ ಕುಟುಂಬವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories