ಬಿಗ್‌ಬಾಸ್ ಖ್ಯಾತಿಯ ಜಾಸ್ಮಿನ್ ಜಾಫರ್, ಡಿಪ್ರೆಶನ್ ಸಮಯದಲ್ಲಿ ತಮ್ಮ ಬದುಕನ್ನು ಬದಲಾಯಿಸಿದ ಸಾಕು ನಾಯಿ ರಿಯೋ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ರಿಯೋ ಬಂದ ಬಳಿಕ ಜೀವನದಲ್ಲಿ ಖುಷಿ ಮತ್ತು ಚೈತನ್ಯ ಮರಳಿದೆ ಎಂದು ಹೇಳಿದ್ದಾರೆ.
ಇನ್ಫ್ಲುಯೆನ್ಸರ್, ವ್ಲಾಗರ್ ಹಾಗೂ ಬಿಗ್‌ಬಾಸ್ ಮಾಜಿ ಸ್ಪರ್ಧಿ ಜಾಸ್ಮಿನ್ ಜಾಫರ್ ತಮ್ಮ ಜೀವನದ ಒಂದು ದೊಡ್ಡ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ತಮ್ಮ ಹೊಸ ವ್ಲಾಗ್‌ನಲ್ಲಿ, ಕೇವಲ ಮೂರೂವರೆ ತಿಂಗಳಲ್ಲಿ ತಮ್ಮ ಬದುಕನ್ನೇ ಬದಲಾಯಿಸಿದ 'ರಿಯೋ' ಎಂಬ ನಾಯಿಮರಿ ಬಗ್ಗೆ ಜಾಸ್ಮಿನ್ ಮಾತನಾಡಿದ್ದಾರೆ. ಜೀವನದಲ್ಲಿ ತುಂಬಾನೇ ಕೆಟ್ಟ ಪರಿಸ್ಥಿತಿಯಲ್ಲಿದ್ದಾಗ ರಿಯೋ ತಮ್ಮ ಕೈ ಸೇರಿತು ಅಂತ ಅವರು ನೆನಪಿಸಿಕೊಂಡಿದ್ದಾರೆ.
25
ಸದಾ ಅಳು ಬರ್ತಿತ್ತು
ಸುಮಾರು ಎರಡು ವರ್ಷಗಳಿಂದ ನಾನು ತುಂಬಾನೇ ಕೆಟ್ಟ ಸ್ಥಿತಿಯಲ್ಲಿದ್ದೆ. ಡಿಪ್ರೆಶನ್ ಅನ್ನೋದು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತೆ. ನನಗೆ ಸದಾ ಅಳು ಬರ್ತಿತ್ತು. ಯಾವಾಗ್ಲೂ ಮಲಗಿರಬೇಕು ಅನಿಸ್ತಿತ್ತು. ಯಾಕಂದ್ರೆ ಆಗ ಬೇರೆನೂ ಯೋಚನೆ ಮಾಡೋಕೆ ಆಗಲ್ವಲ್ಲ. ಏನೂ ಮಾಡೋಕೆ ಇಷ್ಟ ಇರಲಿಲ್ಲ.
35
ನಾನು ಓಕೆ ಅಂದೆ
ಹಸಿವು, ಬಾಯಾರಿಕೆ ಕೂಡ ಗೊತ್ತಾಗದಂಥ ಸ್ಥಿತಿ ನನ್ನದಾಗಿತ್ತು. ಇಂಥ ಸ್ಥಿತಿಯಲ್ಲಿ ಈ ನಾಯಿಮರಿಯನ್ನೂ ಜೊತೆಗೆ ಸೇರಿಸಿಕೊಂಡ್ರೆ ಸರಿ ಹೋಗುತ್ತಾ ಅಂತ ಮೊದಲು ಯೋಚನೆ ಮಾಡಿದ್ದೆ. ಆದ್ರೆ, 'ಅವನು ಬಂದ್ರೆ ಬದಲಾವಣೆ ಆಗಬಹುದು' ಅಂತ ನನ್ನ ಫ್ರೆಂಡ್ಸ್ ಹೇಳಿದ್ರು. ಹಾಗಾಗಿ ಒಂದು ರಾತ್ರಿ ನಾನು ಓಕೆ ಅಂದೆ ಎಂದು ಜಾಸ್ಮಿನ್ ಹೇಳಿದ್ದಾರೆ.
ಫೆಬ್ರವರಿ 3ನೇ ತಾರೀಕು ರಿಯೋ ನನ್ನ ಕೈಗೆ ಸಿಕ್ಕ. ಆಗ ಅವನಿಗೆ ಕೇವಲ 32 ದಿನ. ಪುಟ್ಟ ಮರಿ. ಅಂದು ಅವನು ನನ್ನ ನೋಡಿದ ನೋಟ ಇದೆಯಲ್ಲಾ... ಆ ಕಣ್ಣುಗಳಲ್ಲಿ ನನ್ನನ್ನೇ ನಾನು ನೋಡಿಕೊಂಡೆ. ನನ್ನೊಳಗಿನ ಭಯ, ಒಂಟಿತನ ಎಲ್ಲವೂ ಆ ಕಣ್ಣಲ್ಲಿ ಕಾಣಿಸ್ತು. ಅವನ ಜನರಿಂದ ದೂರಾಗಿ ನಮ್ಮ ಹತ್ರ ಬಂದಿದ್ದನಲ್ವಾ. ಏನೋ ಗೊತ್ತಿಲ್ಲ, ಅವನ ಜೊತೆ ಒಂದು ದೊಡ್ಡ ಕನೆಕ್ಷನ್ ಫೀಲ್ ಆಯ್ತು.
55
ನನಗೆ ಇವನೇ ಇಷ್ಟವಾದ
ರಿಯೋ ಜೊತೆ ಇನ್ನೊಂದು ನಾಯಿಮರಿಯನ್ನೂ ನೋಡಿದ್ದೆ. ಆದ್ರೆ ಮೊದಲ ನೋಟದಲ್ಲೇ ನನಗೆ ಇವನೇ ಇಷ್ಟವಾದ. ನನ್ನ ಕಣ್ಣಿನ ಹೊಳಪನ್ನ ಅವನೇ ನನಗೆ ವಾಪಸ್ ಕೊಟ್ಟಿದ್ದು. ಇವನಿರೋದಕ್ಕೇ ನಾನೀಗ ಹೀಗೆ ನಗ್ತಾ, ಆಟ ಆಡ್ತಾ, ಆಕ್ಟೀವ್ ಆಗಿ ಇರೋದು ಅಂತ ಜಾಸ್ಮಿನ್ ತಮ್ಮ ವ್ಲಾಗ್‌ನಲ್ಲಿ ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.