Karna: ಸೀಮಂತ ಸಂಭ್ರಮದಲ್ಲಿ ಕರ್ಣ ಸೀರಿಯಲ್​ ನಿತ್ಯಾ- ನಟಿ ನಮ್ರತಾ ಗೌಡ ಫ್ಯಾನ್ಸ್​ ಫುಲ್ ಖುಷ್​

Published : Aug 31, 2026, 08:04 PM IST

‘ಕರ್ಣ’ ಧಾರಾವಾಹಿಯಲ್ಲಿ ಹಲವು ತಿಂಗಳುಗಳಿಂದ ನಾಪತ್ತೆಯಾಗಿದ್ದ ನಿತ್ಯಾ ಪಾತ್ರವು ಗರ್ಭಿಣಿಯಾಗಿ ಮರಳಿದೆ. ತನ್ನ ಮಗುವಿಗೆ ಕರ್ಣನೇ ತಂದೆಯಾಗುವ ಭರವಸೆ ನೀಡಿದ್ದು, ಮಗುವಿನ ಭವಿಷ್ಯಕ್ಕಾಗಿ ಮತ್ತು ಕರ್ಣನ ಮೇಲಿನ ಹಳೆಯ ಪ್ರೀತಿಗಾಗಿ ನಿತ್ಯಾ ಮತ್ತೆ ವಿಲನ್ ಆಗುವಳೇ ಎಂಬ ಕುತೂಹಲ ಮೂಡಿದೆ.

PREV
16
ಮುಗಿಯಿತು ಒಂದು ಹಂತ

ಕರ್ಣ ಸೀರಿಯಲ್‌ನಲ್ಲಿ ಸದ್ಯ ಕರ್ಣನೇ ತನ್ನ ಮಗ ಎನ್ನುವ ಸತ್ಯ ರಮೇಶ್‌ಗೆ ತಿಳಿದಿದೆ. ಈ ವಿಷಯವನ್ನು ಆತ ಬಹಿರಂಗ ಪಡಿಸಿದ್ದಾನೆ ಕೂಡ. ಅಲ್ಲಿಗೆ ಸೀರಿಯಲ್‌ನ ಇನ್ನೊಂದು ಹಂತ ಮುಗಿದಿದೆ. ಸೀತಾ ಉರ್ಫ್ ಭುವನೇಶ್ವರಿಯೇ ತನ್ನ ಅಮ್ಮ ಎನ್ನುವ ವಿಷಯ ತಿಳಿಯಬೇಕಿದೆಯಷ್ಟೇ.

26
ನಿತ್ಯಾ ಎಂಟ್ರಿ

ಇವೆಲ್ಲಾ ಮುಗಿದ ಮೇಲೆ ಈಗ ಇನ್ನೊಂದು ಟ್ವಿಸ್ಟ್‌ ಸಿಗುತ್ತಿದೆ ಸೀರಿಯಲ್‌ಗೆ. ಅದೇನೆಂದರೆ, ಹಲವು ತಿಂಗಳುಗಳಿಂದ ನಾಪತ್ತೆಯಾಗಿದ್ದ ನಿತ್ಯಾ ಎಲ್ಲಿಗೆ ಹೋದಳು ಎನ್ನುವ ಸಂದೇಹ ಹಲವರನ್ನು ಕಾಡುತ್ತಿತ್ತು. ಈ ಪಾತ್ರ ಮಾಡುವ ನಟಿ ನಮ್ರತಾ ಗೌಡ ಸೀರಿಯಲ್‌ ಬಿಟ್ಟು ಹೋದರು ಎಂದೂ ಹೇಳಲಾಗಿತ್ತು. ಆದರೆ, ಇದೀಗ ನಮ್ರತಾ ಗೌಡ ಉರ್ಫ್‌ ನಿತ್ಯಾ ಮತ್ತೆ ಎಂಟ್ರಿಯಾಗಿದೆ. ಇದಾಗಲೇ ನಿತ್ಯಾ ಗರ್ಭಿಣಿಯಾಗಿದ್ದು ಎಲ್ಲರಿಗೂ ಗೊತ್ತಿರುವಂಥ ವಿಷಯವೇ. ಈಗ ಅವಳಿಗೆ ಸೀಮಂತ ಶಾಸ್ತ್ರ ನಡೆಯಲಿದೆ. ನಟಿ ನಮ್ರತಾ ಗೌಡ ರೀ-ಎಂಟ್ರಿ ಕೊಟ್ಟಿರೋದು ಫ್ಯಾನ್ಸ್​ಗೆ ತುಂಬಾ ಖುಷಿ ಕೊಟ್ಟಿದೆ.

36
ಸೀರಿಯಲ್‌ನಲ್ಲಿ ಮತ್ತಷ್ಟು ಟ್ವಿಸ್ಟ್‌

ಸೀರಿಯಲ್‌ನಲ್ಲಿ ಮತ್ತಷ್ಟು ಟ್ವಿಸ್ಟ್‌ ಸಿಗುವ ಸಾಧ್ಯತೆ ಇದೆ. ನಿತ್ಯಾಳ ಹೊಟ್ಟೆಯಲ್ಲಿ ಇರುವ ಮಗುವಿನ ಅಪ್ಪ ಬೇರೊಂದು ಮದುವೆಯಾಗಿ ಹೋಗಿದ್ದಾನೆ. ನಿತ್ಯಾಳ ಮಗುವಿಗೆ ತಾನೇ ಅಪ್ಪನಾಗಿ ಕಾಪಾಡುವೆ ಎಂದು ಕರ್ಣ ಇದಾಗಲೇ ಹೇಳಲಾಗಿದೆ. ಇಲ್ಲೇ ಇರುವುದು ಟ್ವಿಸ್ಟ್‌.

46
ಕರ್ಣನನ್ನು ಇಷ್ಟ ಪಟ್ಟಾಕೆ

ಇದೀಗ ಮಗುವಿನ ಚಿಂತೆ ಸಾಮಾನ್ಯವಾಗಿ ನಿತ್ಯಾಗೆ ಕಾಡಿಯೇ ಕಾಡುತ್ತದೆ. ಅಪ್ಪ ಯಾರು ಎಂದು ಕೇಳಿದರೆ ಏನು ಹೇಳುವುದು ಎನ್ನುವ ಚಿಂತೆ ಕೂಡ ಕಾಡುತ್ತಿರುತ್ತದೆ. ಅಷ್ಟಕ್ಕೂ ನಿತ್ಯಾ ಒಂದು ಹಂತದಲ್ಲಿ ಕರ್ಣನನ್ನು ತುಂಬಾ ಇಷ್ಟಪಟ್ಟವಳು. ಅವಳ ಜೊತೆ ಮದುವೆಯನ್ನೂ ನಡೆಸುವ ಯೋಜನೆ ರೂಪಿಸಲಾಗಿತ್ತು. ಆದ್ದರಿಂದ ಕರ್ಣನೇ ತನ್ನ ಪತಿ ಎಂದು ನಿತ್ಯಾ ಒಪ್ಪಿಕೊಂಡಿಯೂ ಆಗಿತ್ತು.

56
ನಿತ್ಯಾ ನೆಮ್ಮದಿಯಿಂದ ಇರಲು ಸಾಧ್ಯವೆ?

ಹಾಗಿದ್ದರೆ, ಇದೀಗ ತನ್ನ ಪ್ರಿಯಕರ ಎದುರಿಗೇ ಇರುವಾಗ, ಆಕೆಗೆ ಸಮಾಧಾನದಿಂದ ಇರಲು ಸಾಧ್ಯವೆ, ತನಗಾಗಿ ಅಲ್ಲದಿದ್ದರೂ, ತನ್ನ ಮಗುವಿಗಾಗಿ ಆಕೆಯ ಮನಸ್ಸಿನಲ್ಲಿ ಬೇರೆ ಭಾವನೆ ಉಂಟಾಗುವುದು ಸಹಜವೇ ಎನ್ನುವ ಅನುಮಾನ ಕಾಡುತ್ತಿದೆ.

66
ಮತ್ತೆ ವಿಲನ್‌ ಆಗ್ತಾಳಾ?

ಕರ್ಣ ಈಗ ತನ್ನ ತಂಗಿಯ ಗಂಡ ಆಗಿದ್ದರೂ, ಕರ್ಣನ ಮೇಲಿನ ಆಕೆಯ ಪ್ರೀತಿ ಕಡಿಮೆಯಾಗಿಲ್ಲ. ಮಗುವನ್ನು ನೋಡಿದ ಬಳಿಕ ಆಕೆಯ ಮನಸ್ಸಿನಲ್ಲಿ ಕೆಟ್ಟ ಯೋಚನೆ ಮೂಡಬಹುದಾ? ಮಗುವಿನ ಭವಿಷ್ಯಕ್ಕಾಗಿ ಆಕೆ ಮತ್ತೆ ವಿಲನ್‌ ಆಗ್ತಾಳಾ ಎನ್ನುವುದು ಸದ್ಯಕ್ಕಿರುವ ಕುತೂಹಲ. ಇಲ್ಲದಿದ್ದರೆ ಸೀರಿಯಲ್‌ನಲ್ಲಿ ಟ್ವಿಸ್ಟ್‌ ಇರಲ್ವಲ್ಲಾ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories