ನಾನಿನ್ನೂ ವರ್ಜಿನ್, ಮದ್ವೆ ಆದ್ಮೇಲೆ: ಸಹನಟಿ ಕ್ಯಾರೆಕ್ಟರ್‌ ಬಗ್ಗೆ ಶಿಲ್ಪಾ ಶಿಂಧೆ ಮಾತು

Published : Jul 15, 2026, 12:54 PM IST

'ಲಾಕ್ ಅಪ್ ಸೀಸನ್ 2' ರಿಯಾಲಿಟಿ ಶೋನಲ್ಲಿ ನಟಿ ಶಿಲ್ಪಾ ಶಿಂಧೆ, ಸಹ ಸ್ಪರ್ಧಿ ಶ್ರೇಯಾ ಕಾಲ್ರಾ ಜೊತೆ ಸೇರಿ ನಟಿ ಶಿವಾಂಗಿ ಜೋಶಿಯವರನ್ನು ಮಿಮಿಕ್ರಿ ಮಾಡಿದ್ದಾರೆ. ಶಿವಾಂಗಿಯವರ ಕ್ಯಾರೆಕ್ಟರ್, ವರ್ಜಿನ್ ಹೇಳಿಕೆ ಬಗ್ಗೆ ಕೊಂಕು ನುಡಿದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

PREV
15
ನಟಿ ಶಿಲ್ಪಾ ಶಿಂಧೆ

ನಟಿ ಶಿಲ್ಪಾ ಶಿಂಧೆ ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಶ್ರೇಯಾ ಕಾಲ್ರಾ ಜೊತೆಯಾಗಿ ಶಿವಾಂಗಿ ಜೋಶಿಯವರ ಮಿಮಿಕ್ರಿ ಮಾಡಿದ್ದಾರೆ. ಸದ್ಯ ಈ ಮಿಮಿಕ್ರಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಓರ್ವ ಮಹಿಳೆ ಬಗ್ಗೆ ಈ ರೀತಿಯಲ್ಲಿ ಕಮೆಂಟ್ ಮಾಡೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಲಾಗುತ್ತಿದೆ.

25
ಲಾಕ್ ಅಪ್ ಸೀಸನ್ 2

ರಿಯಾಲಿಟಿ ಶೋ 'ಲಾಕ್ ಅಪ್ ಸೀಸನ್ 2' ಆರಂಭವಾಗಿದ್ದು, ಪ್ರತಿನಿತ್ಯವೂ ಸ್ಪರ್ಧಿಗಳ ನಡುವೆ ಜಗಳ ನಡೆಯುತ್ತಿರುತ್ತದೆ. ಇದೀಗ ಶಿವಾಂಗಿ ಜೋಶಿ ಕುರಿತು ಶಿಲ್ಪಾ ಶಿಂಧೆ ಮಾಡಿದ ಕಮೆಂಟ್ ಹಲ್ ಚಲ್ ಸೃಷ್ಟಿಸಿದೆ. ಈ ಶೋನಲ್ಲಿ ತನ್ನನ್ನು ವರ್ಜಿನ್ ಎಂದು ಹೇಳಿಕೊಂಡಿರುವ ಶಿಲ್ಪಾ, ನೇರವಾಗಿ ಶಿವಾಂಗಿಯನ್ನು ಗುರಿಯಾಗಿಸಿ ಅವರ ಕ್ಯಾರೆಕ್ಟರ್ ಬಗ್ಗೆ ಕೊಂಕು ಮಾತುಗಳನ್ನಾಡಿದ್ದಾರೆ.

35
ಶೋನಲ್ಲಿ ಆಗಿದ್ದೇನು?

ಶ್ರೇಯಾ ಕಲ್ರಾ ಜೊತೆ ಕುಳಿತುಕೊಂಡಿದ್ದ ಶಿಲ್ಪಾ ಶಿಂಧೆ ತಮ್ಮ ಎದುರಾಳಿ ಸ್ಪರ್ಧಿಯಾಗಿದ್ದ ಶಿವಾಂಗಿ ಜೋಶಿ ಅವರನ್ನು ನಕಲು ಮಾಡುತ್ತಿದ್ದರು. ಈ ವೇಳೆ ಮಾತನಾಡುತ್ತಿರುವ ಸಂದರ್ಭದಲ್ಲಿ ಶಿಲ್ಪಾ, ಅರೇ ಯಾರ್, ನನ್ನ ಬಳಿಯಲ್ಲಿ ಯಾವುದೇ ಸೀಕ್ರೆಟ್ ಇಲ್ಲ. ನಾನು ಎಷ್ಟು ನಟನೆ ಮಾಡಲಿ? ನಾನು ತುಂಬಾ ಇನೋಸೆಂಟ್, ನನಗೆ ಏನೂ ಬೇಡಲ್ಲ. ನಾನು ವರ್ಜಿನ್ ಆಗಿದ್ದು, ಮದುವೆ ಆದ್ಮೇಲೆಯೇ ಅದನ್ನು ಮಾಡುವೆ ಎಂದು ಹೇಳಿದ್ದಾರೆ.

45
ಶಿಲ್ಪಾ ಶಿಂಧೆ ಮಿಮಿಕ್ರಿ

ಈ ರೀತಿಯಾಗಿ ಶಿಲ್ಪಾ ಮಿಮಿಕ್ರಿ ಮಾಡುತ್ತಿದ್ದಂತೆ ಶ್ರೇಯಾ ಕಲ್ರಾ ನಗುತ್ತಾರೆ. ಇದಾದ ಬಳಿಕ ನಟ ಹರ್ಷದ್ ಚೋಪ್ರಾ ಅವರ ಮಿಮಿಕ್ರಿ ಮಾಡುವ ಶಿಲ್ಪಾ ಶಿಂಧೆ, ಶಿವಾಂಗಿ ನೀನು ಏನು ಯೋಚನೆ ಮಾಡ್ತಿದ್ದಿಯಾ? ಎಂದು ಪ್ರಶ್ನೆ ಮಾಡಿ, ಗೊತ್ತಿಲ್ಲ. ಸೀಕ್ರೆಟ್ ರಿವೀಲ್ ಆದ ಕೂಡಲೇ ನಾನು ತುಂಬಾ ನಗುತ್ತೇನೆ ಎಂದು ಹೇಳುತ್ತಾರೆ. ಈಗ ನಾನು ನಗುವುದಿಲ್ಲ ಎಂದು ಹೇಳಿ ಮಿಮಿಕ್ರಿ ಮುಗಿಸುತ್ತಾರೆ.

ಇದನ್ನೂ ಓದಿ: Toxic ಹಾಡಿನ ಹಲ್​ಚಲ್​ ಮಧ್ಯೆ, ಊರು ಬಿಟ್ಟು ಎಂಜಾಯ್​ ಮಾಡ್ತಿರೋ ರಾಧಿಕಾ ಪಂಡಿತ್​- ಫೋಟೋಸ್​ ವೈರಲ್​

55
ಶಿವಾಂಗಿ ಜೋಶಿ ಮತ್ತು ಹರ್ಷದ್ ಚೋಪ್ರಾ

ಲಾಕ್ ಅಪ್ ಸೀಸನ್ 2ರ ಪ್ರೋಮೋ ಹಲ್ ಚಲ್ ಸೃಷ್ಟಿಯಾಗಿದೆ. ತಮ್ಮ ಬಗ್ಗೆ ಶಿಲ್ಪಾ ಶಿಂಧೆ ಮಾಡಿರುವ ಮಿಮಿಕ್ರಿ ಮತ್ತು ನೆಗೆಟಿವ್ ಕಮೆಂಟ್‌ ಬಗ್ಗೆ ಶಿವಾಂಗಿ ಜೋಶಿ ಮತ್ತು ಹರ್ಷದ್ ಚೋಪ್ರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೀಕೆಂಡ್ ಸಂಚಿಕೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಗೌರಿ ಹಿಂದೂನೂ ಅಲ್ಲ, ಇದು ಲವ್​ ಜಿಹಾದೂ ಅಲ್ಲ: ಫತ್ವಾ ಹೊರಡುತ್ತಲೇ ಆಮೀರ್ ಖಾನ್​ ತಿರುಗೇಟು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories