Samantha: 'ಸ್ವಲ್ಪ ಸಮಯದಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದೇನೆ'.. ಸಮಂತಾ ನೇರ ನುಡಿಗೆ ನೆಟ್ಟಿಗರ ಮೆಚ್ಚುಗೆ!

Published : Jul 15, 2026, 12:25 PM IST

ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಹತ್ತಾರು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಎಲ್ಲದಕ್ಕೂ ಈಗ 'ಶುಭಂ' ಹಾಡಲಾಗಿದೆ. 2025ರ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಇತ್ತೀಚೆಗೆ ‘ನಾವು ಪೋಷಕರಾಗುತ್ತಿದ್ದೇವೆ’ ಎಂಬ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈಗ ಹೊಸ ಸುದ್ದಿ!

PREV
17

ಸಮಂತಾ ಬಾಳಲ್ಲಿ ‘ಲಿಟಲ್ ಚಾಂಪ್’ ಎಂಟ್ರಿ: ರಾಜ್ ಜೊತೆಗಿನ ಹೊಸ ಇನ್ನಿಂಗ್ಸ್‌ನ ಬಣ್ಣದ ರಂಗು!

ದಕ್ಷಿಣ ಭಾರತದ ಚಿತ್ರರಂಗದ ‘ಕ್ವೀನ್’ ಸಮಂತಾ ರುತ್ ಪ್ರಭು (Samantha Ruth Prabhu) ಈಗ ಬದುಕಿನ ಅತ್ಯಂತ ಸುಂದರ ಹಾಗೂ ರೋಮಾಂಚಕಾರಿ ಪಾತ್ರಕ್ಕೆ ಸಜ್ಜಾಗಿದ್ದಾರೆ. ಹೌದು, ಇದು ನಿಜ! ತೆರೆಯ ಮೇಲೆ ನೂರಾರು ಪಾತ್ರಗಳಿಗೆ ಜೀವ ತುಂಬಿದ ಸಮಂತಾ, ಈಗ ನಿಜ ಜೀವನದಲ್ಲಿ ‘ಅಮ್ಮ’ನಾಗುವ ಸಂಭ್ರಮದಲ್ಲಿದ್ದಾರೆ. ಖ್ಯಾತ ಚಲನಚಿತ್ರ ನಿರ್ಮಾಪಕ ರಾಜ್ ನಿಡಿಮೋರು ಮತ್ತು ಸಮಂತಾ ದಂಪತಿ ಶೀಘ್ರದಲ್ಲೇ ತಮ್ಮ ಚೊಚ್ಚಲ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ.

27

ಕಳೆದ ಕೆಲವು ವರ್ಷಗಳಿಂದ ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಹತ್ತಾರು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಎಲ್ಲದಕ್ಕೂ ಈಗ 'ಶುಭಂ' ಹಾಡಲಾಗಿದೆ. 2025ರ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಜೂನ್ ತಿಂಗಳಿನಲ್ಲಿ "ನಾವು ಪೋಷಕರಾಗುತ್ತಿದ್ದೇವೆ" ಎಂಬ ಸಿಹಿ ಸುದ್ದಿಯನ್ನು ಹಂಚಿಕೊಂಡಾಗ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಇತ್ತೀಚೆಗೆ ಪಿಂಕ್ವಿಲ್ಲಾ ಜೊತೆಗಿನ ಮನಬಿಚ್ಚಿ ಮಾತನಾಡಿದ ಸಮಂತಾ, "ನಾನು ಈ ಕ್ಷಣಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ. ತಾಯಿಯಾಗುವುದು ನನ್ನ ದೊಡ್ಡ ಕನಸಾಗಿತ್ತು" ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.

37

ಹೊಸ ಶಕ್ತಿ, ಹೊಸ ಉದ್ದೇಶ:

ಗರ್ಭಾವಸ್ಥೆಯ ಈ ದಿನಗಳು ಸಮಂತಾ ಪಾಲಿಗೆ ಕೇವಲ ದೈಹಿಕ ಬದಲಾವಣೆಯಲ್ಲ, ಅದೊಂದು ಆತ್ಮಿಕ ಬದಲಾವಣೆ ಎನ್ನಬಹುದು. "ನಾನು ಯಾವಾಗಲೂ ಪ್ರತಿಯೊಂದು ಕೆಲಸವನ್ನು ಉತ್ಸಾಹದಿಂದ ಮಾಡುತ್ತಿದ್ದೆ. ಆದರೆ ಈಗ ನನ್ನಲ್ಲಿ ಒಂದು ವಿಭಿನ್ನವಾದ ಶಕ್ತಿ ಸಂಚಲನವಾಗುತ್ತಿದೆ. ಜೀವನಕ್ಕೆ ಒಂದು ಹೊಸ ಅರ್ಥ ಸಿಕ್ಕಂತಾಗಿದೆ," ಎಂದು ಅವರು ಹೇಳಿದ್ದಾರೆ. ಪ್ರತಿ ಕ್ಷಣವನ್ನೂ ಎಂಜಾಯ್ ಮಾಡುತ್ತಿರುವ ನಟಿ ಸಮಂತಾ, ಪ್ರತಿದಿನ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿದ್ದಾರಂತೆ.

47

ಸೆಟ್‌ನಿಂದ ಸಂಸಾರದವರೆಗೆ...

ಸಮಂತಾ ಮತ್ತು ರಾಜ್ ನಿಡಿಮೋರು ಅವರ ಸ್ನೇಹ ಶುರುವಾಗಿದ್ದು 'ದಿ ಫ್ಯಾಮಿಲಿ ಮ್ಯಾನ್ ಸೀಸನ್ 2' ಸೆಟ್‌ನಲ್ಲಿ. ಆನಂತರ 'ಸಿಟಾಡೆಲ್: ಹನಿ ಬನ್ನಿ' ಸರಣಿಯಲ್ಲೂ ಈ ಜೋಡಿ ಒಟ್ಟಾಗಿ ಕೆಲಸ ಮಾಡಿತು. 2024ರಲ್ಲಿ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡಿದ್ದವು.

57

ಆದರೆ ಈ ಜೋಡಿ ಮಾತ್ರ ಸೈಲೆಂಟ್ ಆಗಿ ಇತ್ತು. ವರ್ಷದ ಕೊನೆಯಲ್ಲಿ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಸರಳವಾಗಿ ಮದುವೆಯಾಗುವ ಮೂಲಕ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದರು. ಹಿಂದೆ ನಾಗ ಚೈತನ್ಯ ಅವರೊಂದಿಗಿನ ವಿಚ್ಛೇದನದ ನಂತರ ಸಾಕಷ್ಟು ನೋವು ಅನುಭವಿಸಿದ್ದ ಸಮಂತಾ, ಈಗ ರಾಜ್ ಜೊತೆ ಸುಖಿ ಸಂಸಾರ ನಡೆಸುತ್ತಿದ್ದಾರೆ.

67

ಗೆಲುವಿನ ನಾಗಾಲೋಟ:

ಸಮಂತಾ ಅವರ ವೈಯಕ್ತಿಕ ಜೀವನದಲ್ಲಿ ಸಂಭ್ರಮ ಮನೆ ಮಾಡಿದ್ದರೆ, ವೃತ್ತಿಜೀವನದಲ್ಲೂ ಅವರು ಗೆಲುವಿನ ಶಿಖರ ಏರಿದ್ದಾರೆ. ರಾಜ್ ಬರೆದು, ನಂದಿನಿ ರೆಡ್ಡಿ ನಿರ್ದೇಶಿಸಿದ 'ಮಾ ಇಂಟಿ ಬಂಗಾರಂ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ. ಬಾಚಿ ಇತಿಹಾಸ ಸೃಷ್ಟಿಸಿದೆ. ಮಹಿಳಾ ಪ್ರಧಾನ ತೆಲುಗು ಚಿತ್ರಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹೆಗ್ಗಳಿಕೆ ಈ ಚಿತ್ರದ್ದು. ಸದ್ಯ ಒಟಿಟಿಯಲ್ಲೂ ಅಬ್ಬರಿಸುತ್ತಿರುವ ಈ ಚಿತ್ರ ಸಮಂತಾ ಅವರ ಸ್ಟಾರ್ ಪವರ್‌ಗೆ ಸಾಕ್ಷಿಯಾಗಿದೆ.

77

ಒಟ್ಟಿನಲ್ಲಿ, ಸಮಂತಾ ಈಗ ಯಶಸ್ವಿ ನಟಿ ಮಾತ್ರವಲ್ಲ, ಸದ್ಯದಲ್ಲೇ ಜವಾಬ್ದಾರಿಯುತ ಅಮ್ಮನೂ ಆಗಲಿದ್ದಾರೆ. ಅವರ ಈ ಹೊಸ ಪ್ರಯಾಣ ಸುಖಕರವಾಗಿರಲಿ ಎಂಬುದು ಅಭಿಮಾನಿಗಳ ಹಾರೈಕೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಬಹಳಷ್ಟು ಮೆಚ್ಚುಗೆಯ ಕಾಮೆಂಟ್‌ಗಳು ಹರಿದಾಡುತ್ತಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories