ನನ್ನ ಮಗಳಿಗೆ ಮುಕ್ತ ಸ್ವಾತಂತ್ರ್ಯ ಕೊಡುತ್ತೇನೆ. ಅವಳು ಎಷ್ಟು ಜನರ ಜೊತೆಗೆ ಬೇಕಿದ್ದರೂ ಡೇಟಿಂಗ್ ಮಾಡಲಿ. ಡೇಟಿಂಗ್ ಮಾಡುವಾಗ ಮುಂದೇನಾಗುತ್ತೋ ಎಂಬ ಆತಂಕ ಅವಳಿಗೆ ಇರಬಾರದು ಎಂದರು ನಟಿ ಕಿಯಾರಾ ಅಡ್ವಾಣಿ.
ಟಾಕ್ಸಿಕ್ ನಾಯಕ ನಟಿ ಕಿಯಾರಾ ಅಡ್ವಾಣಿ ತನ್ನ ಮಗಳ ಡೇಟಿಂಗ್, ಮದುವೆ ವಿಚಾರಕ್ಕೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದಿದ್ದಾರೆ. ಈ ಕುರಿತು ಕಿಯಾರಾ, ನನ್ನ ಅಪ್ಪ ಅಮ್ಮ ತಮ್ಮ ಬದುಕಲ್ಲಿ ಬಂದ ಮೊದಲ ಹುಡುಗ ಅಥವಾ ಹುಡುಗಿಯನ್ನೇ ಆಯ್ಕೆ ಮಾಡಿ ಪ್ರೇಮಿಸಿ ಮದುವೆ ಆದರು.
25
ಲೈಫ್ ಪಾರ್ಟನರ್ ಥರ ನೋಡಿದ್ದೆ
ಅದನ್ನು ನೋಡಿ ಬೆಳೆದ ನಾನು ಡೇಟಿಂಗ್ ಮಾಡುತ್ತಿದ್ದ ಮೊದಲ ಹುಡುಗನನ್ನೇ ಲೈಫ್ ಪಾರ್ಟನರ್ ಥರ ನೋಡಿದ್ದೆ. ಆಮೇಲೆ ಡೇಟ್ ಮಾಡಿದ ಪ್ರತೀ ಹುಡುಗರನ್ನೂ ಅದೇ ದೃಷ್ಟಿಕೋನದಲ್ಲಿ ನೋಡಿದ್ದೆ. ಆದರೆ ಕೊನೆಗೆ ಬೇರೆಯವರನ್ನು ಮದುವೆಯಾದೆ.
35
ಸ್ವಾತಂತ್ರ್ಯ ಕೊಡುತ್ತೇನೆ
ಇದೆಲ್ಲ ಆದದ್ದು ಎಷ್ಟು ಒಳ್ಳೆಯದಾಯಿತು ಅಂತ ಈಗ ಅನಿಸುತ್ತದೆ. ನನ್ನ ಮಗಳಿಗೆ ಮುಕ್ತ ಸ್ವಾತಂತ್ರ್ಯ ಕೊಡುತ್ತೇನೆ. ಅವಳು ಎಷ್ಟು ಜನರ ಜೊತೆಗೆ ಬೇಕಿದ್ದರೂ ಡೇಟಿಂಗ್ ಮಾಡಲಿ. ಡೇಟಿಂಗ್ ಮಾಡುವಾಗ ಮುಂದೇನಾಗುತ್ತೋ ಎಂಬ ಆತಂಕ ಅವಳಿಗೆ ಇರಬಾರದು.
ಸಾಕಷ್ಟು ಆಯ್ಕೆಗಳ ಬಳಿಕ ಸರಿಯಾದ ವ್ಯಕ್ತಿಯನ್ನೇ ಅವಳು ಲೈಫ್ ಪಾರ್ಟನರ್ ಆಗಿ ಆಯ್ಕೆ ಮಾಡಿಕೊಳ್ಳಲಿ ಎಂದು ಬೋಲ್ಡ್ ಸ್ಟೇಟ್‌ಮೆಂಟ್ ನೀಡಿದ್ದಾರೆ. ನನ್ನ ಮಗಳು ಫುಲ್ ಲೈಫ್ ನೋಡಬೇಕು ಎಂಬುದು ನನ್ನ ಆಸೆ.
55
ತ್ಯಾಗ ಮಾಡಬಾರದು
ನನ್ನ ಹಾಗೆ ಜನರನ್ನು ಸಂತೋಷ ಪಡಿಸಲು ತನ್ನ ಖುಷಿಯನ್ನು ತ್ಯಾಗ ಮಾಡಬಾರದು. ತನಗನಿಸಿದ್ದನ್ನು ನೇರವಾಗಿ ಹೇಳು ಧೈರ್ಯ ಇರಬೇಕು. ಎಲ್ಲ ವಿಚಾರಗಳನ್ನೂ ನಿರ್ಭೀತಿಯಿಂದ ಹಂಚಿಕೊಳ್ಳಬೇಕು. ಆ ರೀತಿ ಮಗಳನ್ನು ಬೆಳೆಸುತ್ತೇನೆ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.