ಬೀದಿಗೆ ಬಂದ ಸಂಸಾರದ ಕಥೆ; ಪತ್ನಿಯೂ ಇಲ್ಲ, ಗರ್ಲ್‌ಫ್ರೆಂಡ್ ಇಲ್ಲ;‌ ಪ್ರೆಸ್‌ಮೀಟ್‌ನಲ್ಲಿ ಕೂಗಾಡಿದ Ravi Mohan

Published : May 16, 2026, 03:20 PM IST

Actor Ravi Mohan Wife Aarti Ravi Case: ನಟ ರವಿ ಮೋಹನ್ ಇಂದು ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದ್ದಾರೆ. ತಮ್ಮ ವಿಚ್ಛೇದನ ಪ್ರಕ್ರಿಯೆ ಮುಗಿಯುವವರೆಗೂ ಯಾವುದೇ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

PREV
15
ಪತ್ನಿಯನ್ನೇ ಮೂರು ಕಾಸಿನ ನಟಿ!

ನಟ ರವಿ ಮೋಹನ್ ದಿಢೀರ್ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ವಿಚ್ಛೇದನ ಮತ್ತು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಆಕ್ರೋಶದಿಂದ ಮಾತನಾಡಿದ್ದಾರೆ. ಅವರು ಕಣ್ಣೀರು ಹಾಕಿದ ವಿಡಿಯೋ ಈಗ ವೈರಲ್ ಆಗಿದೆ. ಇದೇ ವೇಳೆ, '3 ಕಾಸಿನ ನಟಿ'ಗೆ ತನ್ನ ಬಗ್ಗೆ ಮಾತನಾಡಲು ಯಾವುದೇ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದ್ದಾರೆ. ಅವರು ಹೇಳಿದ್ದೇನು?

25
ಮಕ್ಕಳನ್ನು ನೋಡಲು ಬಿಡೋದಿಲ್ಲ

ವಿಚ್ಛೇದನ ಸಮಸ್ಯೆ ಬಗೆಹರಿಯುವವರೆಗೂ ಯಾವುದೇ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ರವಿ ಮೋಹನ್ ನಿರ್ಧರಿಸಿದ್ದಾರೆ. ತನಗೆ ತೊಂದರೆ ನೀಡುವುದನ್ನು ಅಥವಾ ಬೆದರಿಸುವುದನ್ನು ನಿಲ್ಲಿಸಬೇಕೆಂದು ಅವರು ಎಚ್ಚರಿಸಿದ್ದಾರೆ. ಮಕ್ಕಳನ್ನು ನೋಡಲು ಸಹ ಬಿಡುತ್ತಿಲ್ಲ ಎಂದು ಅವರು ನೋವು ತೋಡಿಕೊಂಡಿದ್ದಾರೆ. ಮಕ್ಕಳ ಶಾಲೆಗೆ ಭದ್ರತಾ ಸಿಬ್ಬಂದಿಯನ್ನು ಕಳುಹಿಸಲಾಗುತ್ತಿದೆ ಮತ್ತು ತನ್ನ ಮೊಬೈಲ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

35
ಕೆನಿಷಾ ನನ್ನ ಜೊತೆ ಇಲ್ಲ

ಕೆನಿಶಾ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ದಾಳಿ ನಡೆದಿದ್ದರಿಂದ, ಅವರು ನನ್ನಿಂದ ದೂರವಾಗಬೇಕಾಯಿತು ಎಂದು ರವಿ ಮೋಹನ್ ಹೇಳಿದ್ದಾರೆ. 'ಅವರು ಎಲ್ಲೇ ಇದ್ದರೂ ಶಾಂತಿ ಮತ್ತು ಸಂತೋಷದಿಂದ ಇರಬೇಕು ಎನ್ನುವುದೇ ನನ್ನ ಆಸೆ' ಎಂದಿದ್ದಾರೆ. ವಿಚ್ಛೇದನ ಮುಗಿಯುವವರೆಗೂ ತನ್ನ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಅನುಭವಿಸಿದ ಅವಮಾನಗಳಿಂದಾಗಿ ಇನ್ನು ಮುಂದೆ ನಟಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

45
ಬಲವಂತವಾಗಿ ಮದುವೆ ಮಾಡಿಕೊಂಡರು

'ಯಾರಾದರೂ ನನ್ನನ್ನು ಕೆಣಕಲು ಪ್ರಯತ್ನಿಸಿದರೆ, ಮಾಡಿ ನೋಡಿ. ನಾನು ಈ ಕ್ಷೇತ್ರದಲ್ಲಿ 23 ವರ್ಷಗಳ ಕಾಲ ಶ್ರಮಿಸಿದ್ದೇನೆ' ಎಂದು ಅವರು ಕಟು ಎಚ್ಚರಿಕೆ ನೀಡಿದ್ದಾರೆ.  

ಬಲವಂತವಾಗಿ ನನ್ನ ಮದುವೆ ನಡೆದಿದೆ, 'ಬೆದರಿಸಿ ಮದುವೆ ಮಾಡಿಕೊಂಡರು' ಎಂದು ಆರೋಪಿಸಿದ್ದಾರೆ. ಮದುವೆಯಾದ ದಿನದಿಂದಲೇ ತನ್ನ ಜೀವನ ನರಕವಾಯಿತು ಮತ್ತು ಮಾನಸಿಕವಾಗಿ ಹಿಂಸೆ ನೀಡಲಾಯಿತು ಎಂದು ಅವರು ಹೇಳಿದ್ದಾರೆ. 'ನನ್ನ ಮಕ್ಕಳಿಲ್ಲದೆ ಬದುಕಲು ಸಾಧ್ಯವಾಗುತ್ತಿಲ್ಲ' ಎಂದು ಅವರು ನೋವು ತೋಡಿಕೊಂಡಿದ್ದಾರೆ.

55
ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ರೆ ಸುಮ್ಮನಿರಲ್ಲ

ಕೆಲವರು ಪಿಆರ್ ತಂಡಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ ಎಂದು ರವಿ ಮೋಹನ್ ಆರೋಪಿಸಿದ್ದಾರೆ. '3 ಕಾಸಿನ ನಟಿಯೊಬ್ಬರು ಇದ್ದಾರೆ. ಅವರ ಬಗ್ಗೆ ಮೂವರು ನಟರು ನನ್ನ ಬಳಿ, 'ಅವಳು ನಮ್ಮ ಜೀವನವನ್ನು ಹಾಳುಮಾಡಲು ಬಂದವಳು' ಎಂದು ಅಸಭ್ಯವಾಗಿ ಮಾತನಾಡಿದ್ದರು. ಅಂತಹವಳು ನನ್ನ ಜೀವನದ ಬಗ್ಗೆ ಮಾತನಾಡುತ್ತಾಳೆ. ಇನ್ನೊಮ್ಮೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ ಸುಮ್ಮನಿರಲ್ಲ. ನನ್ನ ಬಗ್ಗೆ ಮಾತನಾಡಲು ನಿನಗೆ ಯಾವ ಯೋಗ್ಯತೆ ಇದೆ?' ಎಂದು ಆ ನಟಿಗೆ ನೇರವಾಗಿ ಸವಾಲು ಹಾಕಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories