ಶಿರಡಿ ಸಾಯಿ ಚಿತ್ರದ ಚಿತ್ರೀಕರಣಕ್ಕಾಗಿ ಬಾದಾಮಿಗೆ ಬರುವಾಗ ನಟ ನಾಗಾರ್ಜುನ ದಾರಿ ತಪ್ಪಿದ್ದರು. ಆಗ ಆ ಹಳ್ಳಿಯ ಜನರು ಅವರಿಗೆ ಊಟ ಹಾಕಿ, ಮುಖ್ಯರಸ್ತೆಗೆ ದಾರಿ ತೋರಿಸಿ ಕಳುಹಿಸಿದ ಘಟನೆಯನ್ನು ಅವರು ಸ್ಮರಿಸಿದ್ದಾರೆ. ಕನ್ನಡಿಗರ ಈ ಆತಿಥ್ಯದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ತೆಲಗು ಚಿತ್ರರಂಗದ ಖ್ಯಾತ ನಟ ಅಕ್ಕಿನೇನಿ ನಾಗರ್ಜುನ್ ದಾರಿ ತಪ್ಪಿದ ನಮಗೆ ಕರ್ನಾಟಕದ ಜನರು ಊಟ ಹಾಕಿರುವ ಘಟನೆಯನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ ಹಳ್ಳಿ ಮತ್ತು ನಗರ ಭಾಗದ ಜನತೆ ನಡುವಿನ ವ್ಯತ್ಯಾಸವನ್ನು ಅಕ್ಕಿನೇನಿ ವಿವರಿಸಿದ್ದಾರೆ. ನಾಗರ್ಜುನ್ ಅವರ ಹೇಳಿಕೆಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
25
ತೆಲಂಗಾಣದಿಂದ ಬಾದಾಮಿಗೆ ಬರುತ್ತಿದ್ದ ನಟ
2012ರಲ್ಲಿ ಬಿಡುಗಡೆಯಾದ ಶಿರಡಿ ಸಾಯಿ ಸಿನಿಮಾದಲ್ಲಿ ನಾಗರ್ಜುನ್ ನಟಿಸಿದ್ದರು. ಈ ಸಿನಿಮಾದ ಚಿತ್ರೀಕರಣ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಭಾಗದಲ್ಲಿ ನಡೆದಿತ್ತು. ಚಿತ್ರೀಕರಣಕ್ಕಾಗಿ ನಾಗರ್ಜುನ್ ಅವರು ತಮ್ಮ ತಂಡದೊಂದಿಗೆ ತೆಲಂಗಾಣದಿಂದ ಬಾದಾಮಿಗೆ ಬರುತ್ತಿದ್ದರು. ದಾರಿಗಾಗಿ ಎಲ್ಲರೂ ಗೂಗಲ್ ಮ್ಯಾಪ್ ಮೇಲೆ ಅವಲಂಬಿತರಾಗಿದ್ದರು.
35
ದಾರಿ ತಪ್ಪಿದ ನಟ
ಗೂಗಲ್ ಮ್ಯಾಪ್ ಹೇಳಿದ ಮಾರ್ಗದಲ್ಲಿ ಬರುತ್ತಿರೋ ಸಂದರ್ಭದಲ್ಲಿ ನಾಗರ್ಜುನ್ ಅವರ ದಾರಿ ತಪ್ಪಿಸಿಕೊಂಡಿದ್ದರು. ಮುಖ್ಯರಸ್ತೆಯಿಂದ ಗ್ರಾಮಗಳಿಗೆ ಸಂಪರ್ಕಿಸುವ ಮಾರ್ಗಕ್ಕೆ ಬಂದಿದ್ದರು. ಚಿಕ್ಕ ಚಿಕ್ಕ ರಸ್ತೆಗಳು ಬರುತ್ತಿದ್ದಂತೆ ನಾಗರ್ಜುನ್ ಅವರಿಗರ ದಾರಿ ತಪ್ಪಿರೋದು ಗೊತ್ತಾಗಿತ್ತು. ಆ ಸಮಯದಲ್ಲಿ ರಾತ್ರಿ ಬೇರೆ ಆಗಿತ್ತು.
ಈ ಸಂದರ್ಭದಲ್ಲಿ ಆ ಹಳ್ಳಿಯ ಜನರು ನಮ್ಮನ್ನು ನೋಡಿ ಖುಷಿಯಿಂದ ಮಾತನಾಡಿದರು. ದಾರಿ ತಪ್ಪಿದ ನಮಗೆಲ್ಲರಿಗೂ ಕುಳಿತುಕೊಳ್ಳುವಂತೆ ಊಟ ಹಾಕಿದರು. ಊಟದ ಬಳಿಕ ಗ್ರಾಮದ ವ್ಯಕ್ತಿಯೊಬ್ಬರು ಬೈಕ್‌ನಲ್ಲಿ ಬಂದು ನಮ್ಮನ್ನು ಮುಖ್ಯರಸ್ತೆಗೆ ತಲುಪಿಸಿ, ಮಾರ್ಗ ಹೇಳಿ ಅಲ್ಲಿಂದ ಹೊರಟು ಹೋದರು. ಅದೇ ಸಿಟಿಯಲ್ಲಾಗಿದ್ರೆ ಹೀಗೆ ಆಗುತ್ತಿರಲಿಲ್ಲ ಎಂದು ಬಾದಾಮಿ ಜನತೆ ಬಗ್ಗೆ ನಾಗರ್ಜುನ್ ಹೇಳಿದರು.
55
ಹೃದಯವಂತರು, ಪ್ರಾಮಾಣಿಕರು
ಈ ವಿಡಿಯೋಗೆ ಕಮೆಂಟ್ ಮಾಡಿರುವ ಸೋಶಿಯಲ್ ಮೀಡಿಯಾ ಬಳಕೆದಾರರು, ನಮ್ಮ ಕನ್ನಡಿಗರು ಅಂದರೆ ಹೃದಯವಂತರು, ಪ್ರಾಮಾಣಿಕರು, ಆತಿಥ್ಯ ನೀಡುವುದರಲ್ಲಿ ಯಾವುದೇ ಖರ್ಚನ್ನು ನೋಡುವುದಿಲ್ಲ. ನಮ್ಮ ಉತ್ತರ ಕರ್ನಾಟಕ ಮಂದಿ ಹೇಳುವುದೇ ಬೇಡ. ಅವರ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ನಮ್ಮ ಉತ್ತರ ಕರ್ನಾಟಕ ಅಂದ್ರೆ ಹೀಗೆ ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.