ನಟಿ ಕರೀನಾ ಕಪೂರ್ ಖಾನ್ ತಮ್ಮ ಸಾಂಸಾರಿಕ ಜೀವನವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ. ಜಾಲಿ ಮೂಡ್‌ನಲ್ಲಿರುವ ಹಲವು ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಅದರಂತೆ ಬುಧವಾರ 53ನೇ ವರ್ಷದ ಜನ್ಮದಿನ ಆಚರಿಸಿಕೊಂಡ ಪತಿ ಸೈಫ್ ಅಲಿ ಖಾನ್‌ಗೆ ವಿಶೇಷ ಫೋಟೋವೊಂದನ್ನು ಬೆಬೋ ಹಂಚಿಕೊಂಡಿದ್ದಾರೆ.
ಇತ್ತೀಚಿನ ಟ್ರಿಪ್ ಒಂದರಲ್ಲಿಯೇ ಪತಿಯ ಜೊತೆಗೆ ಬಿಕಿನಿ ಧರಿಸಿ ಕುಳಿತಿರುವ ಚಿತ್ರವನ್ನು ಅವರು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಇದೇ ಚಿತ್ರವನ್ನು ಇಂದು ಕರೀನಾ ಕಪೂರ್ ಹಂಚಿಕೊಂಡಿದ್ದಾರೆ.
ಸ್ವಿಮ್ಮಿಂಗ್ ಪೂಲ್‌ನ ಎದುರು ಕರೀನಾ ಕಪೂರ್ ಗುಲಾಬಿ ಬಣ್ಣದ ಮೊನೊಕಿನಿ ಧರಿಸಿದ್ದರೆ, ಡೀಪ್ ಬ್ಲ್ಯೂ ಶಾರ್ಟ್ ಧರಿಸಿರುವ ಸೈಫ್ ಅಲಿ ಖಾನ್ ಶರ್ಟ್ ಇಲ್ಲದೇ ಕುಳಿತಿರುವ ಚಿತ್ರ ಇದಾಗಿದೆ.
ಚಿತ್ರವನ್ನು ಪೋಸ್ಟ್ ಮಾಡುವಾಗ ಸ್ವತಃ ಸೈಫ್ ಅಲಿ ಖಾನ್ ನನ್ನ ಮುಂದೆ ನಗುತ್ತಾ ನಿಂತಿದ್ದರು. ಎಂದಿನಂತೆ ಅವರ ಮುಖದಲ್ಲಿ ಸ್ಮೈಲ್ ಇತ್ತು ಎಂದು ಕರೀನಾ ಬರೆದಿದ್ದಾರೆ.
ನನ್ನ ಅಲ್ಟಿಮೇಟ್ ಲವರ್‌ಗೆ ಜನ್ಮದಿನದ ಶುಭಾಶಯಗಳು ಎಂದು ಕರೀನಾ ಕಪೂರ್ ಖಾನ್ ಬರೆದುಕೊಂಡಿದ್ದು, ಸ್ವಿಮ್ಮಿಂಗ್ ಫೂಲ್‌ನ ಎದುರು ಬಿಕಿನಿಯಲ್ಲಿ ಕುಳಿತಿರುವ ಚಿತ್ರ ಹಂಚಿಕೊಂಡಿದ್ದಾರೆ.
ಇನ್ನು ಕರೀನಾ ಕಪೂರ್ ಖಾನ್ ಶೇರ್ ಮಾಡಿಕೊಂಡಿರುವ ಚಿತ್ರಕ್ಕೆ ಬಾಲಿವುಡ್‌ನ ಹಲವು ನಾಯಕಿಯರು ಕಾಮೆಂಟ್ ಮಾಡಿದ್ದು ಸೈಫ್ ಅಲಿ ಖಾನ್‌ಗೆ ಜನ್ಮದಿನದ ಶುಭ ಕೋರಿದ್ದಾರೆ.
ಸೋನಮ್ ಕಪೂರ್, ಜೋಯಾ ಅಖ್ತರ್, ರೀಹಾ ಕಪೂರ್ ಹಾಗೂ ಮಹೀಪ್ ಕಪೂರ್, ಕರೀನಾ ಕಪೂರ್ ಖಾನ್ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
ಬರ್ತ್‌ಡೇಗೆ ನಾನು ಇನ್ಸ್‌ಟಾಗ್ರಾಮ್‌ನಲ್ಲಿ ಯಾವ ಫೋಟೋವನ್ನು ಹಾಕಿ ವಿಶ್ ಮಾಡಬೇಕು ಅನ್ನೋದನ್ನು ಸ್ವತಃ ಸೈಫ್ ಅಲಿ ಖಾನ್ ಆಯ್ಕೆ ಮಾಡಿದ್ದಾರೆ ಎಂದು ಕರೀನಾ ಬರೆದುಕೊಂಡಿದ್ದಾರೆ.
ಇನ್ನು ಸೈಫ್ ಅಲಿ ಖಾನ್ ಅವರ ಜನ್ಮದಿನದ ಸಂಭ್ರಮದಲ್ಲಿ ಅವರ ನಾಲ್ವರೂ ಮಕ್ಕಳು ಭಾಗಿಯಾಗಿದ್ದರು. ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್ ಜೊತೆ ಕರೀನಾ ಕಪೂರ್ ಅವರ ಇಬ್ಬರೂ ಮಕ್ಕಳೂ ಇದ್ದರು.
ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ 2012ರಲ್ಲಿ ವಿವಾಹವಾಗಿದ್ದರು. ಸೈಫ್ ಅಲಿ ಖಾನ್, ಕರೀನಾರನ್ನು ಮದುವೆಯಾಗುವ ಮುನ್ನ ಅಮೃತಾ ಸಿಂಗ್ ಜೊತೆ 13 ವರ್ಷ ಸಂಸಾರ ಮಾಡಿದ್ದರು.
ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಹಿರಿಯ ಪುತ್ರ ತೈಮೂರ್‌ಗೆ ಈಗ ಆರು ವರ್ಷ. 2ನೇ ಪುತ್ರ ಜೇಹ್ 2021ರಲ್ಲಿ ಜನಿಸಿದ್ದ.
ಮದುವೆಯಾಗುವ ಮುನ್ನ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್, ತಶಾನ್, ಓಂಕಾರ, ಖುರ್ಬಾನ್ ಮತ್ತು ಏಜೆಂಟ್ ವಿನೋದ್ ಅಂಥ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು.