Published : Aug 16, 2023, 05:59 PM ISTUpdated : Aug 18, 2023, 03:08 PM IST
1960ರ ದಶಕದಲ್ಲಿ ದಕ್ಷಿಣದ ಭಾಷೆಯಲ್ಲಿ ಸೂಪರ್‌ಸ್ಟಾರ್ ಆಗಿದ್ದ ಈ ಕನ್ನಡದ ನಟಿಯ ಅಸಾಧಾರಣ ಸಂಪತ್ತಿಗೆ ದೇಶವೇ ಮಾತನಾಡುವಂತೆ ಆಯಿತು. ಈ ನಟಿ ಯಾರೂ ಕೂಡ ಈವರೆಗೆ ಸಂಪಾದನೆ ಮಾಡದಂತಹ ಆಸ್ತಿ, ಚಿನ್ನ, ದುಡ್ಡು, ಬೆಳ್ಳಿ ಜೊತೆಗೆ ಬೆಲೆ ಬಾಳುವ ವಸ್ತುಗಳನ್ನು ಮಾಡಿಟ್ಟಿದ್ದಳು. ದೇಶ ಕಂಡ ಆ ಶ್ರೀಮಂತ ಕನ್ನಡದ ನಟಿಯ ಬಗ್ಗೆ ಇಲ್ಲಿದೆ ಸ್ವಾರಸ್ಯಕರ ಸಂಗತಿ.
ಭಾರತದಲ್ಲಿ 90ರ ದಶಕದಲ್ಲೇ ಶ್ರೀದೇವಿ ಪ್ರತಿ ಚಲನಚಿತ್ರಕ್ಕೆ 1 ಕೋಟಿ ರೂಪಾಯಿಗಳನ್ನು ಸಂಭಾವನೆ ಪಡೆಯಲು ಆರಂಭಿಸಿದಾಗಿನಿಂದ, ಅನೇಕ ನಟಿಯರು ಗಗನ ಮುಟ್ಟುವ ಶುಲ್ಕವನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ ಈ ನಟಿ ಮಾತ್ರ ಆಸ್ತಿ, ಚಿನ್ನ, ದುಡ್ಡು, ಬೆಳ್ಳಿ ಜೊತೆಗೆ ಬೆಲೆ ಬಾಳುವ ವಸ್ತುಗಳನ್ನು ಮಾಡಿಟ್ಟಿದ್ದಳು.
213
ಹಣದುಬ್ಬರಕ್ಕೆ ಸರಿಹೊಂದಿಸಲಾದ ಆದಾಯ, ಗಳಿಸಿದ ಸಂಪತ್ತು, ಒಡೆತನದ ಆಸ್ತಿ ಮತ್ತು ಆಸ್ತಿಯ ಸಂಪೂರ್ಣ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಾಗ, ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ ಮತ್ತು ಶ್ರೀದೇವಿಯಂತಹವರ ನಿವ್ವಳ ಮೌಲ್ಯವು ನಟಿ , ರಾಜಕಾರಣಿ ಜಯಲಲಿತಾಗೆ ಹೋಲಿಸಿದರೆ ಕಡಿಮೆಯೇ!
313
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ನಟಿ ಅಂದಿನ ಪೀಳಿಗೆಯ ಅತ್ಯಂತ ಯಶಸ್ವಿ ದಕ್ಷಿಣ ಭಾರತದ ನಟಿಯರಲ್ಲಿ ಒಬ್ಬರು. ಅವರ ಚಲನಚಿತ್ರ ಮತ್ತು ರಾಜಕೀಯ ಜೀವನವು ಇಷ್ಟೊಂದು ಮಟ್ಟದ್ ಸಂಪತ್ತನ್ನು ಸಂಗ್ರಹಿಸಲು ಅವಕಾಶ ಮಾಡಿಕೊಟ್ಟಿತು.
413
ಆಕೆಯ ಸೌಂದರ್ಯಕ್ಕೆ ಅನೇಕ ಮಾರು ಹೋಗಿದ್ದರು. ತನ್ನ ಬಣ್ಣದ ಬದುಕಿನಲ್ಲಿ ಉತ್ತುಂಗದ ಸ್ಥಿತಿಯಲ್ಲಿದ್ದ ಜಯರಾಮ್ ಜಯಲಲಿತಾ 31 ನೇ ವಯಸ್ಸಿನಲ್ಲಿ ಚಲನಚಿತ್ರಗಳಲ್ಲಿ ನಟಿಸುವುದರಿಂದ ದೂರ ಸರಿದು ರಾಜಕಾರಣದ ಬದುಕಿಗೆ ಎಂಟ್ರಿಕೊಟ್ಟರು.
513
1997 ರಲ್ಲಿ ವೇಳೆ ಕುಮಾರಿ ಜಯಲಲಿತಾ ಅವರ ರಾಜಕೀಯ ಜೀವನ ಉತ್ತುಂಗದಲ್ಲಿತ್ತು, ತಮಿಳುನಾಡಿನ ಜನತೆ ಆಕೆಯನ್ನು ಅಮ್ಮಾ ಎಂದೇ ಸಂಭೋಧಿಸುತ್ತಿದ್ದರು. ಇದೇ ಸಮಯದಲ್ಲಿ ಅಧಿಕಾರಿಗಳು ಜಯಲಲಿತಾ ಅವರ ಚೆನ್ನೈನಲ್ಲಿರುವ ಪೋಯಸ್ ಗಾರ್ಡನ್ ನಿವಾಸದ ಮೇಲೆ ದಾಳಿ ನಡೆಸಿದರು.
613
ಈ ದಾಳಿಯಲ್ಲಿ 10,500 ಸೀರೆಗಳು, 750 ಜೋಡಿ ಪಾದರಕ್ಷೆಗಳು, 91 ಕೈಗಡಿಯಾರಗಳು, ಜೊತೆಗೆ 800 ಕೆಜಿ ಬೆಳ್ಳಿ ಮತ್ತು 28 ಕೆಜಿ ಚಿನ್ನವನ್ನು ಒಳಗೊಂಡಿರುವ ಅಭೂತಪೂರ್ವ ಮತ್ತು ಬೃಹತ್ ಸಂಪತ್ತು ಪತ್ತೆಯಾಗಿತ್ತು.
713
ವರದಿಗಳು ಹೇಳುವಂತೆ ಜಯಲಲಿತಾ ಅವರ ನಿವ್ವಳ ಮೌಲ್ಯವು 900 ಕೋಟಿ ರೂಪಾಯಿಗಳಾಗಿದ್ದು, ಅವರು ಘೋಷಿಸಿದ 188 ಕೋಟಿ ರೂಪಾಯಿಗಳಿಗಿಂತ ಮೂರು ಪಟ್ಟು ಹೆಚ್ಚು.
813
2016 ರಲ್ಲಿ, ಆಕೆಯ ಸಂಪತ್ತಿನ ಬಗ್ಗೆ ಮತ್ತೊಂದು ತನಿಖೆ ನಡೆಯಿತು. ಅಮೂಲ್ಯವಾದ ಲೋಹದ ಹಿಡುವಳಿಗಳನ್ನು 1250 ಕೆಜಿ ಬೆಳ್ಳಿ ಮತ್ತು 21 ಕೆಜಿ ಚಿನ್ನವನ್ನು ಹೊಂದಿತ್ತು. 42 ಕೋಟಿ ಮೌಲ್ಯದ ಕಾನೂನುಬದ್ಧ ಚರ ಆಸ್ತಿಗಳ ಜೊತೆಗೆ ಎಂಟು ಕಾರುಗಳನ್ನು ಸಹ ಹೊಂದಿದ್ದರು ರಾಜಕಾರಣಿಯಾಗಿ ಪರಿವರ್ತನೆಗೊಂಡ ನಟಿ.
913
ಜಯಲಲಿತಾ ಅವರು , ಕಲ್ಯಾಣ್ ಕುಮಾರ್, NT ರಾಮರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಜೈಶಂಕರ್, ಮತ್ತು MG ರಾಮಚಂದ್ರನ್ ಸೇರಿದಂತೆ ಆ ಕಾಲದ ಅತ್ಯಂತ ಯಶಸ್ವಿ ನಟರೊಂದಿಗೆ ನಟಿಸಿದ್ದರು, 70 ರ ದಶಕದಲ್ಲಿ ದಕ್ಷಿಣದಲ್ಲಿ ಪ್ರಮುಖ ನಟಿಯಾಗಿ ಬೆಳೆದು ನಿಂತಿದ್ದರು.
1013
ಜಯರಾಮ್ ಜಯಲಲಿತಾ ಅವರು ಹಿಂದಿನ ಮೈಸೂರು ರಾಜ್ಯದಲ್ಲಿ (ಇಂದಿನ ಕರ್ನಾಟಕ) ಮಂಡ್ಯದ ಮೇಲುಕೋಟೆಯಲ್ಲಿ 1948 ರಲ್ಲಿ ಜನಿಸಿದರು. 1961 ರಲ್ಲಿ ಕನ್ನಡ-ಭಾಷೆಯ ಚಲನಚಿತ್ರ ಶ್ರೀ ಶೈಲ ಮಹಾತ್ಮೆ (1961) ನಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡರು.
1113
ಚಲನಚಿತ್ರಗಳು ಮತ್ತು ನಾಟಕಗಳಲ್ಲಿ ಸಣ್ಣ ಪಾತ್ರಗಳನ್ನು ಅನುಸರಿಸಿ, ಅವರು 1960 ರ ದಶಕದ ಮಧ್ಯಭಾಗದಲ್ಲಿ ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ಪ್ರಮುಖ ನಟಿಯಾಗಿ ಬೆಳೆದರು. 1968 ರಲ್ಲಿ, ಅವರು ಧರ್ಮೇಂದ್ರ ಅವರೊಂದಿಗೆ ಬಾಲಿವುಡ್ ಚಲನಚಿತ್ರ ಇಜ್ಜತ್‌ನಲ್ಲಿ ಕಾಣಿಸಿಕೊಂಡರು.
1213
1980 ರಲ್ಲಿ, ಅವರು ಚಲನಚಿತ್ರ ಪಾತ್ರಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದರು ಮತ್ತು ರಾಜಕೀಯಕ್ಕೆ ಪರಿವರ್ತನೆಯಾದರು. ಅವರು 1991 ಮತ್ತು 2016 ರ ನಡುವೆ ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ಅವರು ಡಿಸೆಂಬರ್ 2016 ರಲ್ಲಿ ತಮ್ಮ 68 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಸಾವಿನ ಬಗ್ಗೆ ಇಂದಿಗೂ ಹಲವು ಅನುಮಾನಗಳಿವೆ
1313
1964 ರಲ್ಲಿ ತಮ್ಮ ಕನ್ನಡದ ಚೊಚ್ಚಲ ಚಿತ್ರ ಚಿನ್ನದ ಗೊಂಬೆ ಯಲ್ಲಿ 15 ನೇ ವಯಸ್ಸಿನಲ್ಲಿ ನಾಯಕಿ ನಟಿಯಾಗಿ ಪದಾರ್ಪಣೆ ಮಾಡಿದರು. ಈ ಚಿತ್ರ ಸೂಪರ್ ಹಿಟ್ ಆಯಿತು. ದಿನ ಬೆಳಗಾಗುವುದೊಳಗೆ ಹೆಸರು ತಂದು ಕೊಟ್ಟಿತು.