ನಟ ಅಜಯ್ ದೇವಗನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, 2013ರ 'ಸತ್ಯಾಗ್ರಹ' ಚಿತ್ರದಲ್ಲಿ ಕರೀನಾ ಕಪೂರ್ ಅವರು ಲಿಪ್‌ಲಾಕ್ ದೃಶ್ಯಕ್ಕೆ ನಿರಾಕರಿಸಿದ ಘಟನೆ ಮುನ್ನೆಲೆಗೆ ಬಂದಿದೆ. ಸೈಫ್ ಅಲಿ ಖಾನ್ ಜೊತೆಗಿನ ಮದುವೆಯ ನಂತರ ಕರೀನಾ ಈ ನಿರ್ಧಾರ ತೆಗೆದುಕೊಂಡಿದ್ದರು. ಅಲ್ಲಿ ಆಗಿದ್ದೇನು?
ನಟಿ ಕಾಜೋಲ್ ಪತಿ ಅಜಯ್ ದೇವಗನ್ ಅವರು ಮೊನ್ನೆಯಷ್ಟೇ ಅಂದ್ರೆ ಏಪ್ರಿಲ್ 2ರಂದು ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರ ಕುರಿತಾದ ರೋಚಕ ಸ್ಟೋರಿ ಒಂದು ಇದೀಗ ಬಹಿರಂಗಗೊಂಡಿದೆ. ಅದು ಕರೀನಾ ಕಪೂರ್ ಜೊತೆಗಿನ ಲಿಪ್‌ಲಾಕ್ ಕುರಿತು ಸಂದರ್ಭ.
27
ದೇಹ ಪ್ರದರ್ಶನ, Lip Lock
ಈಗಿನ ಬಹುತೇಕ ಚಿತ್ರತಾರೆಯರು ತಮ್ಮ ದೇಹ ಪ್ರದರ್ಶನ ಮಾಡಲು ಪೈಪೋಟಿಗೆ ನಿಂತಿದ್ದಾರೆ. ಎಷ್ಟೇ ಬೋಲ್ಡ್ (Bold) ಆಗಿ ಡ್ರೆಸ್ ಮಾಡಿಕೊಂಡರೂ ಕೆಲವು ನಟಿಯರಿಗೆ ಚಿತ್ರಗಳಲ್ಲಿ ನಾಯಕ ಜೊತೆ ಲಿಪ್ ಲಾಕ್ನಂಥ ಇಂಟಿಮೇಟ್ ದೃಶ್ಯಗಳನ್ನು ಮಾಡುವುದು ಸ್ವಲ್ಪ ಕಷ್ಟ ಎನ್ನಬಹುದು. ಈಗಿನ ಬಹುತೇಕ ನಟಿಯರು ಯಾವುದೇ ಮುಲಾಜು ಇಲ್ಲದೇ ಇದನ್ನು ಅಷ್ಟೇ ಬೋಲ್ಡ್ ಆಗಿ ಮಾಡುತ್ತಿದ್ದರೂ, ಕೆಲವು ನಟಿಯರು ಇನ್ನೂ ಸ್ವಲ್ಪ ಮರ್ಯಾದೆ ಉಳಿಸಿಕೊಂಡಿರುವ ಕಾರಣ, ಇಂಥ ದೃಶ್ಯಗಳನ್ನು ಮಾಡಲು ಹಿಂಜರಿಯುತ್ತಾರೆ.
37
ಕರೀನಾ ಕಪೂರ್ ಸ್ಟೋರಿ
ಅಂಥದ್ದೇ ಒಂದು ಸಮಸ್ಯೆ ಅಜಯ್ ದೇವಗನ್ ಜೊತೆ ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್ ಖಾನ್ (Kareena Kapoor Khan) ಅವರಿಗೆ ಎದುರಾಗಿತ್ತಂತೆ. ಕರೀನಾ ಕಪೂರ್ ಇಬ್ಬರು ಮಕ್ಕಳ ತಂದೆ ಸೈಫ್ ಅಲಿ ಖಾನ್ರನ್ನು ಮದುವೆಯಾಗಿ ಕಪೂರ್ ಸರ್ನೇಮ್ ಮುಂದೆ ಖಾನ್ ಸೇರಿಸಿಕೊಂಡ ಮೇಲೂ ಬೋಲ್ಡ್ ಡ್ರೆಸ್ಗಳಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ, ಕೆಲವೊಮ್ಮೆ ಅವರು ಡ್ರೆಸ್ನಿಂದಾಗಿ ಟ್ರೋಲ್ಗೆ ಒಳಗಾಗುವುದೂ ಇದೆ. ಆದರೆ ಈಗ ಕೆಲ ವರ್ಷಗಳ ಹಿಂದಿನ ಘಟನೆಯೊಂದನ್ನು ಅವರು ಮೆಲುಕು ಹಾಕಿದ್ದಾರೆ.
2013ರಲ್ಲಿ 'ಸತ್ಯಾಗ್ರಹ' ಸಿನಿಮಾದಲ್ಲಿ ಅಜಯ್ ದೇವಗನ್ (Ajay Devgan) ಅವರನ್ನು ಚುಂಬಿಸುವ ದೃಶ್ಯ ಮಾಡಲು ನಿರಾಕರಿಸಿದ್ದ ಘಟನೆ ಇದಾಗಿದೆ. ಕರೀನಾ ಮತ್ತು ಅಜಯ್ ಒಟ್ಟಿಗೆ ಅನೇಕ ಚಿತ್ರಗಳನ್ನು ಮಾಡಿದ್ದಾರೆ. ಇಬ್ಬರೂ ಒಳ್ಳೆ ಫ್ರೆಂಡ್ಸ್. ಹಿಂದೆ ಇವರು ಬಿಂದಾಸ್ ಆಗಿ ಲಿಪ್‌ಲಾಕ್ ಸೀನ್ ಮಾಡಿದ್ದರು. ಆದರೆ 'ಸತ್ಯಾಗ್ರಹ' ಸಿನಿಮಾದ ಲಿಪ್ ಲಾಕ್ ಸೀನ್ ಗೆ ಕರೀನಾ ನಿರಾಕರಿಸಿದ್ದರು.
57
ಓಂಕಾರ ಚಿತ್ರದಲ್ಲಿ ನಡೆದದ್ದು
2006ರಲ್ಲಿ ಬಂದ ‘ಓಂಕಾರ’ ಚಿತ್ರ ನಿಮಗೆ ನೆನಪಿರಬಹುದು. ಈ ಚಿತ್ರದಲ್ಲಿ ಅಜಯ್ ದೇವಗನ್ ಎದುರು ಕರೀನಾ ಕಪೂರ್ ನಟಿಸಿದ್ದರು. ಚಿತ್ರದಲ್ಲಿ ಇಬ್ಬರ ನಡುವೆ ಇಂಟಿಮೇಟ್ ದೃಶ್ಯವನ್ನೂ ಚಿತ್ರೀಕರಿಸಲಾಗಿದೆ. ಆದರೆ ವಿಶಾಲ್ ಭಾರದ್ವಾಜ್ ಅವರ ಈ ಚಿತ್ರದ ನಂತರ ಪ್ರಕಾಶ್ ಝಾ (Prakash Jha) 2013 ರಲ್ಲಿ 'ಸತ್ಯಾಗ್ರಹ' ತಂದಾಗ, ಸಮೀಕರಣವೇ ಬದಲಾಯಿತು. ಚಿತ್ರದಲ್ಲಿನ 'ಚುಂಬನದ ದೃಶ್ಯ'ದ ಬಗ್ಗೆ ಕರೀನಾ ಅಸಮಾಧಾನಗೊಂಡರು ಮತ್ತು ಅದನ್ನು ಮಾಡಲು ನಿರಾಕರಿಸಿದರು. 'ಓಂಕಾರ' ಅಲ್ಲದೆ, ಕರೀನಾ ಅವರು, ಅಜಯ್ ಜೊತೆ 'ಸಿಂಗಂ' ಮತ್ತು 'ಗೋಲ್ಮಾಲ್' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ಚಿತ್ರಗಳಲ್ಲಿ ಇವರಿಬ್ಬರ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಎಂಥದ್ದೇ ದೃಶ್ಯಗಳನ್ನಾದರೂ ಇಬ್ಬರೂ ಆರಾಮವಾಗಿ ಮಾಡಿದ್ದಾರೆ.
67
ಮದ್ವೆಯಾಗಿದ್ದ ಕರೀನಾ
‘ಓಂಕಾರ’ದಲ್ಲಿ ಇಂಟಿಮೇಟ್ ದೃಶ್ಯದ ವೇಳೆ ಅವರಿಗೆ ಯಾವುದೇ ಸಮಸ್ಯೆ ಎದುರಾಗದೇ ಇದ್ದಾಗ 'ಸತ್ಯಾಗ್ರಹ' ಚಿತ್ರದಲ್ಲಿ ಆಕೆ ಸತ್ಯಾಗ್ರಹ ಮಾಡಿದ್ದು ಏಕೆ ಎನ್ನುವ ಹಿಂದೆ ಕುತೂಹಲದ ಕಾರಣವಿದೆ. 16 ಅಕ್ಟೋಬರ್ 2012 ರಂದು ಕರೀನಾ ಸೈಫ್ ಅಲಿ ಖಾನ್ (Saif Ali Khan) ಅವರನ್ನು ವಿವಾಹವಾದರು. ಇದಾದ ನಂತರವೇ ಕರೀನಾ ಚಿತ್ರಗಳಲ್ಲಿ 'ಚುಂಬನದ ದೃಶ್ಯ'ದ ಕರೀನಾ ಬಗ್ಗೆ ಮನಸ್ಸು ಬದಲಾಯಿಸಿದರು.
77
ಲಿಪ್ಲಾಕ್ಗೆ ನಕಾರ
ಮದುವೆಯಾದ ಕೆಲವೇ ದಿನಗಳಲ್ಲಿ ‘ಸತ್ಯಾಗ್ರಹ’ (Satyagrah) ಚಿತ್ರೀಕರಣ ನಡೆಯುತ್ತಿತ್ತು. ಒಂದು ಹಾಡಿನ ಸಮಯದಲ್ಲಿ ಕರೀನಾ ಕಪೂರ್ ಮತ್ತು ಅಜಯ್ ಲಿಪ್‌ಲಾಕ್ ಮಾಡಬೇಕಾಯಿತು. ಹೀಗಿರುವಾಗ ಕರೀನಾ ಮದುವೆಯ ನಂತರ ಈ ಸೀನ್ ಮಾಡೋಕೆ ಆಗುತ್ತಿಲ್ಲ. ಮದುವೆಗಿಂತ ಮೊದಲು ಮಾಡಿದ ಹಾಗೆ ಈಗ ಮಾಡಲು ಸಾಧ್ಯವಿಲ್ಲ ಎಂದುಬಿಟ್ಟರು. ಈ ದೃಶ್ಯವನ್ನು ಮಾಡಲು ಸಾಧ್ಯವಿಲ್ಲ ಎಂದು ಪ್ರಕಾಶ್ ಝಾಗೆ ಅವರು ಹೇಳಿದರು. ಬೆಬೋಗಾಗಿ ಪ್ರಕಾಶ್ ಝಾ ದೃಶ್ಯವನ್ನು ಬದಲಾಯಿಸಬೇಕಾಯಿತು. ಈ ಹಿಂದೆ ಇಮ್ರಾನ್ ಹಶ್ಮಿ ಜೊತೆಗಿನ ‘ಬಡ್ತಮೀಜ್ ದಿಲ್’ ಚಿತ್ರದಲ್ಲಿ ಚುಂಬನದ ದೃಶ್ಯಕ್ಕೆ ಕರೀನಾ ನಿರಾಕರಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.