ನಿಮ್ಮನ್ನು ಪತಿಯಾಗಿ ಹೊಂದಲು ಪುಣ್ಯ ಮಾಡಿದ್ದೇನೆ: ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನಟಿ ತೇಜಸ್ವಿನಿ ಮಾತು!

First Published | Sep 28, 2023, 12:30 AM IST

ಪನಿ ವರ್ಮಾ ಜೊತೆ ನಟಿ ತೇಜಸ್ವಿನಿ ಪ್ರಕಾಶ್‌ ಕಳೆದ ವರ್ಷ ಮಾರ್ಚ್ 20ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ನಟಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ.

ಕನ್ನಡ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಮಿಂಚುತ್ತಿರುವ ನಟಿ ತೇಜಸ್ವಿನಿ ಪ್ರಕಾಶ್‌ ಅವರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮನೆಗೆ ಹೊಸ ಅತಿಥಿ ಆಗಮನ ಆಗುತ್ತಿರೋ ಸಂಭ್ರಮದಲ್ಲಿದ್ದಾರೆ. ಈ ಗುಡ್ ನ್ಯೂಸ್ ಬಗ್ಗೆ ಈ ಹಿಂದೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಪನಿ ವರ್ಮಾ ಜೊತೆ ನಟಿ ತೇಜಸ್ವಿನಿ ಪ್ರಕಾಶ್‌ ಕಳೆದ ವರ್ಷ ಮಾರ್ಚ್ 20ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ನಟಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ.

Tap to resize

ನಮ್ಮ ಮಗು ಸಂತೋಷದಿಂದ ಹೊಳೆಯುತ್ತಿದ್ದು, ಪ್ರೀತಿಯಿಂದ ಬೆಳೆಯುತ್ತಿದೆ. ನಾವು ನಮ್ಮ ಜೀವನದ ಅತ್ಯಂತ ಆರಾಧ್ಯ ಉಡುಗೊರೆಯನ್ನು ಸ್ವೀಕರಿಸಲಿದ್ದೇವೆ. ನಿಮ್ಮ ಪ್ರಾರ್ಥನೆಯಲ್ಲಿ ನಮ್ಮನ್ನು ಇರಿಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.

ವಿಶೇಷವಾಗಿ ಜನ್ಮದಿನದ ಶುಭಾಶಯಗಳು ಗಂಡ. ನೀವು ನನಗೆ ತೋರಿದ ಪ್ರೀತಿ, ಕಾಳಜಿ ಮತ್ತು ವಾತ್ಸಲ್ಯಕ್ಕೆ ನಾನು ಕೃತಜ್ಞಳಾಗಿದ್ದೇನೆ. ನಿಮ್ಮನ್ನು ನನ್ನ ಪತಿಯಾಗಿ ಹೊಂದಲು ನಾನು ನಿಜವಾಗಿಯೂ ಪುಣ್ಯ ಮಾಡಿದ್ದು, ನಿಮ್ಮನ್ನು ಪ್ರೀತಿಸುತ್ತೇನೆ ಎಂದು ತೇಜಸ್ವಿನಿ ಬರೆದುಕೊಂಡಿದ್ದಾರೆ.

ತೇಜಸ್ವಿನಿ ಪ್ರಕಾಶ್‌ ಗಜ, ಈ ಪ್ರೀತಿ ಏಕೆ ಭೂಮಿ ಮೇಲಿದೆ, ಸವಿ ಸವಿ ನೆನಪು, ಬಂಧು ಬಳಗ, ಅರಮನೆ, ಜೊತೆಯಾಗಿ ಹಿತವಾಗಿ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ಕನ್ನಡದ ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಂಡಿದ್ದರು. 

ಬಳಿಕ ‘ನನ್ನರಸಿ ರಾಧೆ’ ಸೀರಿಯಲ್‌ನಲ್ಲಿ ಲಾವಣ್ಯ ಎಂಬ ಪಾತ್ರದಲ್ಲಿ ವಿಲನ್ ಆಗಿ ಬಣ್ಣ ಹಚ್ಚಿದ್ದರು. ಈ ಸೀರಿಯಲ್ ತೇಜಸ್ವಿನಿ ನಟಿಸಿದ ಕೊನೆಯ ಪ್ರಾಜೆಕ್ಟ್ ಆಗಿದೆ. ಸದ್ಯ ವೈಯಕ್ತಿಕ ಜೀವನದಲ್ಲಿ ತೇಜಸ್ವಿನಿ ಪ್ರಕಾಶ್‌ ಬ್ಯುಸಿಯಾಗಿದ್ದಾರೆ.

Latest Videos

click me!