ದೇವರ ಪಾತ್ರಕ್ಕೆ ಜೀವ ತುಂಬುವ ‘ಭೂಮಿಗೆ ಬಂದ ಭಗವಂತ’ ನಟ ಕಾರ್ತಿಕ್ ಸಮಗ್, ಪ್ರಭಾಸ್ ಬೇಷ್ ಎಂದಿದ್ದೇಕೆ?

ಕಿರುತೆರೆಯಲ್ಲಿ ಇಂದ್ರ ದೇವನಾಗಿ, ಚಂದ್ರ ದೇವನಾಗಿ ಮಿಂಚಿ ಇದೀಗ ಭೂಮಿಗೆ ಬಂದ ಭಗವಂತ ಸೀರಿಯಲ್ ನಲ್ಲಿ ಶಿವನಾಗಿ ಮಿಂಚುತ್ತಿರುವ ಕಾರ್ತಿಕ್ ಸಮಗ್ ಕುರಿತು ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭೂಮಿಗೆ ಬಂದ ಭಗವಂತ (Bhumige Banda Bhagavanta) ಸೀರಿಯಲ್. ಕಲಿಯುಗದಲ್ಲಿ ಭಗವಂತ ಭೂಮಿಗೆ ಬಂದಾಗ ಹೇಗಿರುತ್ತೆ ಅನ್ನೋ ವಿಭಿನ್ನ ಕಥೆಯನ್ನು ಇಟ್ಟುಕೊಂಡು ಮಾಡಲಾದ ಸೀರಿಯಲ್. ಇದು ಜನರಿಂದ ಅಪಾರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. 
 

ಭೂಮಿಗೆ ಬಂದ ಭಗವಂತ ಸೀರಿಯಲ್ ಮಿಡಲ್ ಕ್ಲಾಸ್ ಜೀವನ ನಡೆಸುತ್ತಿರುವ ಶಿವಪ್ರಸಾದ್ ಮತ್ತು ಗಿರಿಜಾರ ಕಥೆ. ಈ ಕಥೆಯಲ್ಲಿ ಭಗವಂತನಾಗಿ ಶಿವಪ್ರಸಾದ್ ಜೀವನದಲ್ಲಿ ಬಂದು, ಹಿತವಚನಗಳನ್ನು ಹೇಳುವ ಮೂಲಕ ಒಳ್ಳೆಯ ಕೆಲಸ ಆಗುವಂತೆ ಮಾಡುವ ಶಿವನ ಪಾತ್ರದಲ್ಲಿ ಕಾರ್ತಿಕ್ ಸಮಗ (Karthik Samag) ನಟಿಸಿದ್ದಾರೆ. 
 


ಸೀರಿಯಲ್ ನಲ್ಲಿ ಕಾರ್ತಿಕ್ ಗೆ ಸ್ಕ್ರೀನ್ ಸ್ಪೇಸ್ ತುಂಬಾನೆ ಕಡಿಮೆ ಇದ್ದರೂ ಸಹ, ತಮ್ಮ ಮಾತು ಮತ್ತು ಅದ್ಭುತ ಅಭಿನಯದಿಂದ ಭಗವಂತನೆ ಬಂದು ಹಿತವಚನ ನೀಡುತ್ತಿದ್ದಾನೆ ಏನೋ ಅನ್ನುವಷ್ಟು ಕಾರ್ತಿಕ್ ಪಾತ್ರ ಜನರ ಜೀವನದಲ್ಲಿ ಬೆರೆತು ಹೋಗಿದೆ. 
 

ಈ ಹಿಂದೆ ಹರಹರ ಮಹದೇವ ಸೀರಿಯಲ್ ನಲ್ಲಿ ಚಂದ್ರ ದೇವನಾಗಿ, ಶನಿ ಸೀರಿಯಲ್ ನಲ್ಲಿ ಇಂದ್ರದೇವನಾಗಿ ಮಿಂಚಿ ಭಕ್ತಿ ಪ್ರಧಾನ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದ ಕಾರ್ತಿಕ್ ಗೆ ಶಿವನ ಪಾತ್ರ ಮಾಡುವಾಗ ಮಾತ್ರ ನನ್ನಿಂದ ಸಾಧ್ಯವಾಗಬಹುದೇ ಎನ್ನುವ ಭಯ ಇತ್ತಂತೆ. ಆದರೆ ಇದೀಗ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಅದ್ಭುತವಾಗಿ ನಟಿಸುತ್ತಿದ್ದಾರೆ ಇವರು. 
 

ಬಾಲ್ಯದಲ್ಲೇ ನಟನೆಯ ಬಗ್ಗೆ ಒಲವು ಹೊತ್ತಿದ್ದ ಕಾರ್ತಿಕ್ ಸಮಗ, ಉಡುಪಿಯವರು. ಎಂಕಾಂ ಮಾಡಿರುವ ಇವರು, ಸಿನಿಮಾ ರಂಗದಲ್ಲಿ ಗುರುತಿಸಬೇಕೆಂಬ ಹಂಬಲದಿಂದ ಬಾಲ್ಯದಲ್ಲಿಯೇ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ. ಅಷ್ಟೇ ಯಾಕೆ, ಭರತನಾತ್ಯ ಡ್ಯಾನ್ಸರ್ ಕೂಡ ಹೌದು, ಸಂಗೀತವನ್ನು ಸಹ ಅಭ್ಯಸಿಸಿದ್ದಾರೆ ಇವರು. 
 

ರಂಗಭೂಮಿ ಕಲಾವಿದರಾಗಿರುವ (theater artist) ಇವರು ಉಡುಪಿ ನಾಟ್ಯರಂಗದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವರು ಮಂಡ್ಯ ರಮೇಶ್ ಶಿಷ್ಯರೂ ಹೌದು. ಆರಂಭದಲ್ಲಿ ತೆರೆಯ ಹಿಂದೆ ಕೆಲಸ ಮಾಡುವ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟ ಇವರು. ನಂತರ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದರು. 
 

ರವಿ ಗರಣಿಯವರ ಅರಗಿಣಿ ಸೀರಿಯಲ್ ನಲ್ಲಿ ಮೊದಲನೆ ಬಾರಿ ವಿಲನ್ ಆಗಿ ಬಣ್ಣ ಹಚ್ಚಿದರು. ಅದು ಸಾಕಷ್ಟು ಹೆಸರು ತಂದು ಕೊಟ್ಟಿತು. ನಂತರ ಅಕ್ಕ ಸೀರಿಯಲ್ ನಲ್ಲಿ ನಟಿಸಿದರು. ಬಳಿಕ ಶನಿ, ಹರಹರ ಮಹಾದೇವ, ಶ್ರೀ ಗುರು ರಾಘವೇಂದ್ರ, ಮುದ್ದು ಲಕ್ಷ್ಮಿ ಮೊದಲಾದ ಸೀರಿಯಲ್ ನಲ್ಲಿ ನಟಿಸಿದರು. ಅಲ್ಲದೇ ಡೈನಾಮಿಕ್, ಮೊದಲ ಮಳೆ, ಹೇ ರಾಮ ಸಿನಿಮಾಗಳಲ್ಲೂ ನಟಿಸಿದ್ದಾರೆ.
 

ಕಾರ್ತಿಕ್ ಡಬ್ಬಿಂಗ್ ಆರ್ಟಿಸ್ಟ್ (dubbing artist) ಆಗಿ ಸಹ ಗುರುತಿಸಿಕೊಂಡಿದ್ದಾರೆ. ಪ್ರಭಾಸ್‌ ಅವರ ರಾಧೆ ಶ್ಯಾಮ್‌ ಸಿನಿಮಾಕ್ಕೆ ಪ್ರಭಾಸ್‌ ಅವರಿಗೆ ಡಬ್‌ ಮಾಡಿದ್ದರು. ಆವಾಗ ಸ್ವತಃ ಪ್ರಭಾಸ್‌ ಅವರೇ ಕರೆ ಮಾಡಿ, ತುಂಬe ಚೆನ್ನಾಗಿದೆ ಎಂದರು. ಅಷ್ಟೇ ಅಲ್ಲದೇ ರಾಮ್‌ಚರಣ್‌, ಜೂ. ಎನ್‌ಟಿಆರ್‌, ಧನುಷ್‌ ಹೀಗೆ ಹಲವು ಸ್ಟಾರ್‌ಗಳ ಕನ್ನಡ ಸಿನಿಮಾಗಳಿಗೂ ಇವರು ಡಬ್ ಮಾಡಿದ್ದಾರೆ. 
 

ಭೂಮಿಗೆ ಬಂದ ಭಗವಂತ ಸೀರಿಯಲ್ ನಿಂದಾಗಿ ಕಾರ್ತಿಕ್ ಜೀವನದಲ್ಲಿ ತುಂಬಾನೆ ಬದಲಾವಣೆಯಾಗಿದೆಯಂದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಧ್ಯಾನ ಮಾಡೋದನ್ನು ರೂಢಿ ಮಾಡಿಕೊಂಡಿದ್ದಾರಂತೆ. ಜನರು ಸಹ ತನ್ನನ್ನು ಭಗವಂತನಂತೆ ನೋಡುತ್ತಾರೆ. ಎದುರು ಸಿಕ್ಕಾಗ ಭಗವಂತನಂತೆ ಆಧರಿಸುವುದು ಕಂಡಾಗ, ಬೇರೆ ರೀತಿಯ ಅನುಭವ ಆಗುತ್ತೆ ಎನ್ನುತ್ತಾರೆ ಕಾರ್ತಿಕ್ ಸಮಗ್. 
 

Latest Videos

click me!