Kannada Actress Husband Flop Movie: ಸೌಥ್ ಸ್ಟಾರ್ ತಮ್ಮ ಮೊದಲ ಬಾಲಿವುಡ್ ಚಿತ್ರದಲ್ಲಿಯೇ ಹೀನಾಯ ಸೋಲು ಕಂಡಿದ್ದಾರೆ. 125 ಕೋಟಿ ಬಜೆಟ್‌ನ ಈ ಚಿತ್ರ ವಿಫಲವಾದ ನಂತರ, ಅವರು ಮತ್ತೆ ಹಿಂದಿ ಚಿತ್ರರಂಗದತ್ತ ಮುಖ ಮಾಡಿಲ್ಲ.
ಬಾಲಿವುಡ್‌ಗೆ ಹೋಗಿ ಸ್ಟಾರ್ ನಟನಾಗಿ ಮಿಂಚಬೇಕು ಎಂಬುವುದು ಎಲ್ಲಾ ಕಲಾವಿದರ ಆಸೆ. ಎಲ್ಲರನ್ನು ಕೈ ಬೀಸಿ ಕರೆಯುವ ಬಾಲಿವುಡ್ ಜಗತ್ತು ಕೆಲವರನ್ನು ಮಾತ್ರ ಅಪ್ಪಿಕೊಳ್ಳುತ್ತದೆ. ಇದೇ ರೀತಿ ಕನ್ನಡ ನಟಿಯ ಪತಿಯಾಗಿರುವ ಸೌಥ್ ಸಿನಿಲೋಕದ ನಟ, ಬಾಲಿವುಡ್‌ನಲ್ಲಿ ಸೋಲು ಕಂಡಿದ್ದಾರೆ. ಮೊದಲ ಚಿತ್ರದಲ್ಲಿಯೇ ಸೋತ ನಟ ಮತ್ತೇ ಹೊಸ ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ.
25
36 ವರ್ಷದ ನಟ
36 ವರ್ಷದ ನಟನ ಹಿಂದಿ ಸಿನಿಮಾ 2022ರಲ್ಲಿ ಬಿಡುಗಡೆಯಾಗಿತ್ತು. ಸುಮಾರು 125 ಕೋಟಿ ಬಜೆಟ್‌ನಲ್ಲಿ ಸಿದ್ಧವಾದ ಚಿತ್ರ, ಅಬ್ಬರದ ಪ್ರಚಾರವನ್ನು ಮಾಡಿತ್ತು. ಇಡೀ ಬಾಲಿವುಡ್ ಚಿತ್ರಕ್ಕೆ ಸಪೋರ್ಟ್ ಮಾಡಿದ್ರೂ ವೀಕ್ಷಕರು ಮಾತ್ರ ಚಿತ್ರವನ್ನು ಒಪ್ಪಿಕೊಳ್ಳಲಿಲ್ಲ. ಈ ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟನ ಪುತ್ರಿ ನಾಯಕಿಯಾಗಿ ನಟಿಸಿದ್ದರು. ಹಾಗಾದ್ರೆ ಯಾರು ಈ ನಟ ಗೊತ್ತಾ?
35
ರಶ್ಮಿಕಾ ಮಂದಣ್ಣ ಪತಿ ವಿಜಯ್ ದೇವರಕೊಂಡ
ಕೂರ್ಗದ ಚೆಲುವೆ ರಶ್ಮಿಕಾ ಮಂದಣ್ಣ ಪತಿ ವಿಜಯ್ ದೇವರಕೊಂಡ ಬಗ್ಗೆ ನಾವು ಹೇಳುತ್ತಿದ್ದೇವೆ. ಅರ್ಜುನ್ ರೆಡ್ಡಿ, ಡಿಯರ್ ಕಾಮ್ರೆಡ್, ಗೀತಾ ಗೋವಿಂದಂ, ಟ್ಯಾಕ್ಸಿವಾಲಾ ಸಾಲು ಸಾಲು ಹಿಟ್ ಸಿನಿಮಾ ನೀಡಿದ ವಿಜಯ್ ದೇವರಕೊಂಡ, 2022ರಲ್ಲಿ ಬಾಲಿವುಡ್‌ನತ್ತ ಮುಖ ಮಾಡಿದ್ದರು. ಪುರಿ ಜಗನ್ನಾಥ್ ನಿರ್ದೇಶನದ ಲಗೈರ್ ಚಿತ್ರಕ್ಕೆ ವಿಜಯ್ ನಾಯಕನಾದ್ರೆ, ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆ ನಾಯಕಿಯಾಗಿದ್ದರು. ಈ ಚಿತ್ರ ರಮ್ಯಾಕೃಷ್ಣ ಸೇರಿದಂತೆ ದೊಡ್ಡ ತಾರಾಬಳಗ ಹೊಂದಿದ್ರೂ ಸಿನಿಮಾ ಸೋತಿತ್ತು.
ಅಬ್ಬರದ ಪ್ರಚಾರದ ನಡುವೆಗೂ ಲಗೈರ್ ಸಿನಿಮಾ 25ನೇ ಆಗಸ್ಟ್ 2022ರಂದು ಬಿಡುಗಡೆಗೊಂಡಿತ್ತು. 10ಕ್ಕೆ 2.6 ರೇಟಿಂಗ್ ಪಡೆದ ಲಗೈರ್ ಸಿನಿಮಾ 2022 ಫ್ಲಾಪ್ ಚಿತ್ರಗಳಲ್ಲಿ ಒಂದಾಗಿತ್ತು. ಈ ಸೋಲಿನ ಬಳಿಕ ವಿಜಯ್ ದೇವರಕೊಂಡ ಮತ್ತೆ ಬಾಲಿವುಡ್‌ಗೆ ಹಿಂದಿರುಗಿಲ್ಲ. ಲಗೈರ್ ಬಳಿಕ ಬಂದ ಖುಷಿ ಮತ್ತು ಫ್ಯಾಮಿಲಿ ಸಿನಿಮಾಗಳು ವಿಜಯ್ ದೇವರಕೊಂಡಗೆ ದೊಡ್ಡ ಹಿಟ್ ತಂದುಕೊಟ್ಟಿಲ್ಲ.
ಈ ಹಿಂದೆ ಇದೇ ರೀತಿಯಾಗಿ ಬಾಲಿವುಡ್‌ಗೆ ಹೋಗಿ ಮೊದಲ ಪ್ರಯತ್ನದಲ್ಲಿಯೇ ಚಿರಂಜೀವಿ, ರಾಮಚರಣ್, ಪ್ರಭಾಸ್ ಮತ್ತು ಜೂ.ಎನ್‌ಟಿಆರ್ ಸಹ ಸೋತಿದ್ದುಂಟು. ಈ ಸೋಲಿನ ಬಳಿಕ ಈ ಸ್ಟಾರ್ ನಟರು ಮತ್ತೆ ಬಾಲಿವುಡ್ ಕಡೆ ಮುಖ ಮಾಡಿಲ್ಲ. ಆದರೆ ಕಳೆದ ಒಂದು ದಶಕದಿಂದ ಸೌಥ್ ಸಿನಿ ಅಂಗಳದ ಸಿನಿಮಾಗಳು ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ನಲ್ಲಿ ಬಿಡುಗಡೆಯಾಗುತ್ತಿವೆ. ಇಡೀ ಬಾಲಿವುಡ್ ಕನ್ನಡ, ಮಲಯಾಳಂ, ತಮಿಳು, ತೆಲಗು ಸಿನಿಮಾಗಳನ್ನ ಅಚ್ಚರಿಯಿಂದ ನೋಡಲಾರಂಭಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.