ಪೇಟ ತೊಟ್ಟು ಕಚ್ಚೆ ಸೀರೆಯುಟ್ಟು ಫೋಸ್ ಕೊಟ್ಟ ಬಿಗ್ಬಾಸ್ ಬೆಡಗಿ: ಸಂಗೀತಾ ಲುಕ್‌ಗೆ ಫ್ಯಾನ್ಸ್‌ ಫಿದಾ

Published : Mar 14, 2024, 01:34 PM IST

ಬಿಗ್‌ಬಾಸ್ ಸ್ಪರ್ಧಿ, ಅನೇಕ ಹೆಣ್ಮಕ್ಕಳ ಸ್ಪೂರ್ತಿ ನಟಿ ಸಂಗೀತಾ ಶೃಂಗೇರಿ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ತಮ್ಮ ಸ್ಟೈಲಿಶ್‌ ಲುಕ್‌ನ ಫೋಟೋಗಳನ್ನು ಪೋಸ್ಟ್‌ ಮಾಡ್ತಿರ್ತಾರೆ.

PREV
19
ಪೇಟ ತೊಟ್ಟು ಕಚ್ಚೆ ಸೀರೆಯುಟ್ಟು ಫೋಸ್ ಕೊಟ್ಟ ಬಿಗ್ಬಾಸ್ ಬೆಡಗಿ: ಸಂಗೀತಾ ಲುಕ್‌ಗೆ ಫ್ಯಾನ್ಸ್‌ ಫಿದಾ

ಬಿಗ್‌ಬಾಸ್ ಸ್ಪರ್ಧಿ, ಅನೇಕ ಹೆಣ್ಮಕ್ಕಳ ಸ್ಪೂರ್ತಿ ನಟಿ ಸಂಗೀತಾ ಶೃಂಗೇರಿ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ತಮ್ಮ ಸ್ಟೈಲಿಶ್‌ ಲುಕ್‌ನ ಫೋಟೋಗಳನ್ನು ಪೋಸ್ಟ್‌ ಮಾಡ್ತಿರ್ತಾರೆ.

29

ಈ ಬಾರಿ ಅವರು ಕನ್ನಡ ಧ್ವಜದಂತೆ ಕೆಂಪು ಹಳದಿ ಸಂಯೋಜನೆಯಲ್ಲಿ ಕಚ್ಚೆ ಸೀರೆಯುಟ್ಟು ಸಖತ್ ಆಗಿ ಪೋಸ್ ನೀಡಿದ್ದು, ಸಂಗೀತಾ ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

39

ಹಳ್ಳಿ ಸೊಗಡಿನ ಸಾಂಪ್ರದಾಯಿಕ ಹೆಣ್ಣು ಮಗಳ ಶೈಲಿಯಲ್ಲಿ  ಸಂಗೀತಾ ಶೃಂಗೇರಿ ಫೋಟೋಶೂಟ್ ಮಾಡಿಸಿದ್ದಾರೆ. ತಲೆಗೆ ಮೆರೂನ್  ಬಣ್ಣದ ಪೇಟಾ ತೊಟ್ಟಿದ್ದು, ಪಕ್ಕಾ ಕನ್ನಡ ಹುಡುಗಿಯಂತೆ  ಸಂಗೀತಾ ಕಂಗೊಳಿಸುತ್ತಿದ್ದಾರೆ. 

49

ಕೈ ತುಂಬಾ ಹಲವು ಬಣ್ಣಗಳ ಬ್ಯಾಂಡ್ ಧರಿಸಿರುವ ಸಂಗೀತಾ ಝರಿಯಂಚಿರುವ ಕೆಂಪು ಬಣ್ಣದ ಫುಲ್ ಕೈ ರವಿಕೆ ತೊಟ್ಟಿದ್ದು, ಅದಕ್ಕೆ ಮ್ಯಾಚ್ ಆಗುವಂತೆ ಹಳದಿ ಬಣ್ಣದ ಕಚ್ಚೆ ಸೀರೆಯುಟ್ಟಿದ್ದಾರೆ

59
Sangita Sringeri

ಸಂಗೀತಾ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದು, ಬೆಳ್ಳಂಬೆಳಗ್ಗೆ ದೇವತೆ ನೋಡಿದ ಹಾಗಾಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  

69
Sangita Sringeri

ಭಾರತೀಯ ಹಾಗೂ ಪಾಶ್ಚಿಮಾತ್ಯ ಎರಡು ಮಿಳಿತವಾದ ಈ ಲುಕ್ ಸಖತ್ ಆಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಸಂಗೀತಾ ಕನ್ನಡ ಬಿಗ್‌ ಬಾಸ್‌ನಲ್ಲಿ ಸಖತ್ ಫೈಟ್ ನೀಡಿದ್ದರು.

79
Sangita Sringeri

ಕೆಂಪು ರಾಯಲ್ ಎನ್‌ಫೀಲ್ಡ್‌ ಮೇಲೆಯೂ ಕುಳಿತು ಸಂಗೀತಾ ಫೋಸ್ ನೀಡಿದ್ದು, ಆ ಫೋಟೋಗಳಂತೂ ಸಖತ್ ಆಗಿವೆ ಕೆಲವರು ಕಾರ್ತಿಕ್‌ನ ಡ್ರೈವರ್ ಮಾಡ್ಕೋಳಿ ಎಂದು ಈ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. 

89
Sangita Sringeri

ಈ ಹುಡುಗಿ ನಮ್ಮನ್ನ ಬದುಕೋಕೆ ಬಿಡಲ್ಲಾ ಕಣ್ರೋ ಎಷ್ಟು ಚೆಂದ ಇದ್ದಾಳೆ ಇವಳು, ನಮ್ಮ ಹುಡುಗರನ್ನು ದೇವರೇ ಕಾಪಾಡಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

99
Sangita Sringeri

ರಾಯಲ್ ಎನ್‌ಫೀಲ್ಡ್ ಬೈಕ್ ಮೇಲೆ ನಾಟಿ ಕೋಳಿ ಹಿಡಿದುಕೊಂಡು ಸಂಗೀತಾ ಫೋಸ್ ಕೊಟ್ಟಿದ್ದು, ಪಕ್ಕಾ ರಾಯಲ್ ಆಗಿರೋ ಹಳ್ಳಿ ಹುಡುಗಿಯಂತೆ ಕಾಣಿಸ್ತಿದ್ದಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories