ಕನ್ನಡ ಚಿತ್ರರಂಗದ ಹಿರಿಯ ನಟರಲ್ಲಿ ಹಲವರು ಒಂದು ಕಾಲದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದವರು. ಆದರೆ ಅವರ ಮಕ್ಕಳಿಗೆ ಮಾತ್ರ ಅಂದುಕೊಳ್ಳುವಷ್ಟು ಯಶಸ್ಸು ಸಿಗಲೇ ಇಲ್ಲ.
ದೇವರಾಜ್ 90 ರ ದಶಕದ ಜನಪ್ರಿಯ ನಾಯಕ, ವಿಲನ್ ಕೂಡ ಹೌದು, ಆದರೆ ಅವರ ಪುತ್ರ ಪ್ರಜ್ವಲ್ ದೇವರಾಜ್’ಗೆ, ಅಂತಹ ಜನಪ್ರಿಯತೇ ಸಿಕ್ಕಿಲ್ಲ. ಪ್ರಣಮ್ ಗೂ ಹೆಚ್ಚಿನ ಅವಕಾಶಗಳೇ ಇಲ್ಲ.
ನಟ ಶಶಿ ಕುಮಾರ್ ಒಂದು ಕಾಲದ ಜನರ ಫೇವರಿಟ್ ಹೀರೋ, ಆದರೆ ಅವರ ಪುತ್ರ ಆದಿತ್ಯ ಶಶಿಕುಮಾರ್ ನಟರಾಗೋದ್ರಲ್ಲಿ ಸೋತಿದ್ದಾರೆ.
ನಿರ್ದೇಶನಕ್ಕೂ ಸೈ, ನಟನೆಗೂ ಸೈ ಎನಿಸಿಕೊಂಡಿದ್ದ ನಟ ಕಾಶಿನಾಥ್ ತಮ್ಮ ಹೊಸತನದ ಸಿನಿಮಾ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದರು. ಆದರೆ ಅವರ ಪುತ್ರ ಅಭಿಮನ್ಯು ಕಾಣಿಸಿಕೊಂಡಿದ್ದೆ ಕಡಿಮೆ.
ಟೈಗರ್ ಪ್ರಭಾಕರ್ ಅವರು ನಟ ಭಯಂಕರ ಆಗಿದ್ರು, ಆದರೆ ವಿನೋದ್ ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರುವಲ್ಲಿ ಸೋತಿದ್ದಾರೆ.
ಅಂಬರೀಶ್ಅವರು ರೆಬೆಲ್ ಸ್ಟಾರ್ ಆಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಆದರೆ ಇವರಿಗೆ ಸಿಕ್ಕ ಯಶಸ್ಸು ಮಗ ಅಭಿಷೇಕ್ ಗೆ ಸಿಕ್ಕಿಲ್ಲ. ಜನ ಇನ್ನೂ ಅವರನ್ನು ಮೆಚ್ಚಿಕೊಂಡಿಲ್ಲ.
ನವರಸ ನಾಯಕ ಜಗ್ಗೇಶ್ ನಕ್ಕು ನಗಿಸುವುದರಲ್ಲಿ ಇವತ್ತಿಗೂ ಫೇಮಸ್. ಆದರೆ ಇವರ ಮಕ್ಕಳಾದ ಗುರುರಾಜ್ ಮತ್ತು ಯತಿ ರಾಜ್ ನಟನೆಯನ್ನು ಜನ ಒಪ್ಪಿಕೊಂಡಿಲ್ಲ.
ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗಳು ಅಂದ್ರೆ ಇವತ್ತಿಗೂ ಕ್ರೇಜ್. ಆದರೆ ಅವರ ಮಕ್ಕಳಾದ ಮನೋರಂಜನ್ ಹಾಗೂ ತ್ರಿವಿಕ ಗೆ ಸಿನಿಮಾಗಳಲ್ಲಿ ಗುರುತಿಸಿಕೊಂಡದ್ದೆ ಕಡಿಮೆ.
ನೀಲಿ ಗಾಗ್ರಾ ಚೋಲಿಯಲ್ಲಿ ಹುಡುಗರ ಹಾರ್ಟ್’ಗೆ ಲಗ್ಗೆ ಇಟ್ಟ ಆಶಿಕಾ ರಂಗನಾಥ್
ಪ್ರೀತಿಯ ಮತ್ತಲ್ಲಿ ತೇಲುವಂತೆ ಮಾಡಿದ 2025ರ Romantic Kannada Songs
30-40ನೇ ವಯಸ್ಸಿಗೆ ಬದುಕಿನ ಪಯಣ ಮುಗಿಸಿದ ಜನಪ್ರಿಯ ಕನ್ನಡ ನಟರು
ಕಾಮಾಕ್ಯ ದೇವಿ ಸನ್ನಿಧಾನದಲ್ಲಿ ‘ತೀರ್ಥರೂಪ ತಂದೆಯವರಿಗೆ’ ತಂಡ