ಸಂಸತ್ತಿಗೆ ಬಂದ ಸಂಸದೆ ಕಂಗನಾ ರಣಾವತ್​ ಬ್ಯಾಗ್​, ವಾಚ್​ ಮೇಲೆ ಬಿತ್ತು ನೆಟ್ಟಿಗರ ಕಣ್ಣು: ಅಂಥದ್ದೇನಿದೆ ಅದರಲ್ಲಿ

Published : Aug 10, 2026, 01:17 PM IST

ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಸಂಸತ್ತಿನಲ್ಲಿ ಧರಿಸಿದ್ದ ಐಷಾರಾಮಿ ವಾಚ್ ಮತ್ತು ಬ್ಯಾಗ್‌ನಿಂದಾಗಿ ಸುದ್ದಿಯಲ್ಲಿದ್ದಾರೆ. ಅವರ 35 ಲಕ್ಷ ಮೌಲ್ಯದ ಹರ್ಮೆಸ್ ಬಿರ್ಕಿನ್ ಬ್ಯಾಗ್ ಮತ್ತು 21 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್‌ನ ಒಟ್ಟು ಬೆಲೆ 56 ಲಕ್ಷಕ್ಕೂ ಅಧಿಕವಾಗಿದ್ದು, ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ.

PREV
16
ಸದಾ ಸುದ್ದಿಯಲ್ಲಿ...

ನಟಿ, ಸಂಸದೆ ಕಂಗನಾ ರಣಾವತ್​ ಸದಾ ಕಾಂಟ್ರವರ್ಸಿಗಳಿಂದಲೇ ಸದಾ ಸದ್ದು ಮಾಡ್ತಿರೋರು. ಇರೋದನ್ನು ಇದ್ದ ಹಾಗೆ ಹೇಳುವ ಮೂಲಕ ಸದಾ ಸದ್ದು ಮಾಡ್ತಿರುತ್ತಾರೆ ನಟಿ. ಇತ್ತೀಚೆಗೆ ಜೆನ್​ Z ಪ್ರತಿಭಟನೆಯ ಕುರಿತು ಮಾತನಾಡಿ ವಿವಾದಕ್ಕೂ ಸಿಲುಕಿದ್ದಾರೆ.

26
ಕ್ಲಾಸಿಕ್ ಲುಕ್

ಇಂತಿಪ್ಪ ನಟಿ, ಸಂಸದೆ ಕಂಗನಾ ರಣಾವತ್​ ಅವರ ವಾಚ್​ ಮತ್ತು ಬ್ಯಾಗ್ ಮೇಲೆ ಈಗ ನೆಟ್ಟಿಗರ ಕಣ್ಣು ನೆಟ್ಟಿದೆ. ಸಂಸತ್ತಿನ ಮಳೆಗಾಲದ ಅಧಿವೇಶನದ ಉದ್ದಕ್ಕೂ ಕಂಗನಾ, ಒಂದರ ನಂತರ ಒಂದರಂತೆ ಸೊಗಸಾದ ಲುಕ್‌ಗಳೊಂದಿಗೆ ಗಮನ ಸೆಳೆಯುತ್ತಿದ್ದಾರೆ. ಆಕರ್ಷಕ ಸೀರೆಗಳು ಮತ್ತು ವಿವಿಧ ನಮೂನೆಗಳ ಸನ್​ಗ್ಲಾಸ್​ನೊಂದಿಗೂ ಕ್ಲಾಸಿಕ್ ಲುಕ್​ನಲ್ಲಿ ಮಿಂಚುತ್ತಿದ್ದಾರೆ.

36
ವಾಚ್​, ಬ್ಯಾಗ್​ ಬೆಲೆ

ಮೊನ್ನೆ ಕಂಗನಾ, ನೀಲಿಬಣ್ಣದ ಆಕಾಶ-ನೀಲಿ ಸೀರೆಯನ್ನು ಗರಿಗರಿಯಾದ ಬಿಳಿ ಬ್ಲೌಸ್‌ನೊಂದಿಗೆ ಸಂಸತ್ತನ್ನು ಪ್ರವೇಶಿಸಿದಾಗ, ಎಲ್ಲರ ಕಣ್ಣು ಕುಕ್ಕಿದ್ದು, ಅವರ 35 ಲಕ್ಷ ಮೌಲ್ಯದ ಕಪ್ಪು ಹರ್ಮೆಸ್ ಬಿರ್ಕಿನ್ ಟೋಗೊ ಲೆದರ್ ಬ್ಯಾಗ್ ಮತ್ತು ಸುಮಾರು 21 ಲಕ್ಷ ಮೌಲ್ಯದ ರೋಲೆಕ್ಸ್ ಲೇಡಿ ಡೇಟ್‌ಜಸ್ಟ್ ಚಾಕೊಲೇಟ್ ಬ್ರೌನ್ ಡಯಲ್.

46
ಐಷಾರಾಮಿ ಲುಕ್​

ಇದರ ಬೆಲೆ ಎಷ್ಟು ಎಂದು ನೆಟ್ಟಿಗರು ಸರ್ಚ್​ ಮಾಡಿದಾಗ, ಬೆಲೆ ತಿಳಿದಿದೆ. ಬ್ಯಾಗ್​ ಮತ್ತು ವಾಚ್​ ಬೆಲೆ 56 ಲಕ್ಷಕ್ಕೂ ಹೆಚ್ಚಾಗಿರುವುದಾಗಿ ತಿಳಿದುಬಂದಿದೆ. ಅಷ್ಟಕ್ಕೂ ಕಂಗನಾ ಸಿನಿಮಾದಲ್ಲಿಯಾಗಲೀ, ಸಂಸತ್ತಿನಲ್ಲಾಗಲಿ ತಮ್ಮ ಸ್ಪಷ್ಟ ಶೈಲಿ ಮತ್ತು ಐಷಾರಾಮಿ ಆಯ್ಕೆಗಳೊಂದಿಗೆ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ.

56
ನೆಟ್ಟಿಗರ ಕಮೆಂಟ್ಸ್​

ಇದು ವೈರಲ್​ ಆಗುತ್ತಲೇ ಇದರಲ್ಲೇನು ವಿಶೇಷ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಕಂಗನಾ ಸಂಸದೆಯಾಗುವುದಕ್ಕೂ ಮೊದಲು ನಟಿ. ಅವರು ಕೋಟಿ ಕೋಟಿ ಬೆಲೆ ಬಾಳುವ ದಿರಿಸು ಧರಿಸುವುದಕ್ಕೂ ಅರ್ಹರು ಇದ್ದಾರೆ. ಅದು ಅವರ ಹಣ, ಅವರು ಹೇಗಾದರೂ ಖರ್ಚು ಮಾಡುತ್ತಾರೆ. ಅದೇನೂ ರಾಜಕಾರಣಿಯಾಗಿ ಲೂಟಿ ಮಾಡಿದ ಹಣವಲ್ಲ ಎಂದು ಹೇಳುತ್ತಿದ್ದಾರೆ.

66
ಸದಾ ಹವಾ

ಒಟ್ಟಿನಲ್ಲಿ ನಟಿ ಕಂಗನಾ ರಣಾವತ್​ ಒಂದಲ್ಲೊಂದು ಕಾರಣಗಳಿಂದ ಸಕತ್​ ಸುದ್ದಿ ಮಾಡುತ್ತಲೇ ಇರುತ್ತಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ಅವರ ಹವಾ ಸದಾ ಇರುತ್ತದೆ ಎನ್ನುವುದಕ್ಕೆ ಇದೊಂದು ಸಾಕ್ಷಿಯಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories