ಕನ್ನಡದ ನಟರಾಗಿದ್ದ ಯಶ್ ಅವರು ಇಷ್ಟು ದೊಡ್ಡ ಮಟ್ಟಕ್ಕೆ, ವಿಶ್ವದಾದ್ಯಂತ ಹೆಸರು ಮಾಡಲು, ಹಾಲಿವುಡ್ ರೇಂಜ್ ರೀಚ್ ಆಗಲು, ಪ್ಯಾನ್ ವರ್ಲ್ಡ್ ನಟರಾಗಲು ಕಾರಣದ ಸಂಗತಿಗಳು ಯಾವವು ಗೊತ್ತಾ?
ಅದು ಮತ್ತೇನೂ ಅಲ್ಲ.. ಯಶ್ ಅವರ ಸತತ ಪರಿಶ್ರಮ, ಬಿಗ್ ಡ್ರೀಮ್ ಅಂದರೆ ಅತ್ಯಂತ ದೊಡ್ಡ ಕನಸು ಕಂಡಿದ್ದು ಹಾಗೂ ಅದನ್ನು ನನಸಾಗಿಸಲು ಹಗಲಿರುಳೂ ಶ್ರಮಿಸಿದ್ದೇ ಕಾರಣ. ಅದೃಷ್ಟದ ಬಲವೂ ಸಾಥ್ ನೀಡಿದ್ದರೂ ಕೂಡ, ಯಶ್ ಅವರ ಕೆಲಸದ ಶ್ರದ್ಧೆ, ಕನ್ನಡ ಸಿನಿಮಾವನ್ನು ಪ್ರಪಂಚಕ್ಕೇ ತಲುಪಿಸಬೇಕೆಂಬ ಅದಮ್ಯ ಬಯಕೆ ಹಾಗೂ ಅದಕ್ಕೆ ಬೇಕಾದ ತಂಡ ಕಟ್ಟಿಕೊಂಡು ಮಾಡಿದ ಅವರತ ಪ್ರಯತ್ನವೇ ಇಂಥ ಅಮೋಘ ಸಾಧನೆಗೆ ಕಾರಣ..
ಇಂದು ನಟ ಯಶ್ ಅವರು 'ಇಡೀ ವಿಶ್ವವೇ ಗುರುತಿಸುವ, ಆರಾಧಿಸುವ, ಪ್ಯಾನ್ ವರ್ಲ್ಡ್ ಪಟ್ಟ ಗಿಟ್ಟಿಸಿಕೊಂಡ ಕನ್ನಡದ ಏಕೈಕ ನಟ. ಅವರ ಮುಂಬರುವ 2 ಸಿನಿಮಾ ನೋಡಲು ಇಡೀ ಜಗತ್ತೇ ಕಾಯುತ್ತಿದೆ ಎಂದರೆ, ಅವರೇನು, ತಲುಪಿದ ಎತ್ತರವೇನು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ! ಅವರ ಸಾಧನೆಯೇ ಎಲ್ಲವನ್ನೂ ಹೇಳುತ್ತೆ..