ಸೊಸೆ ಐಶ್ವರ್ಯಾ ರೈ ಬಾಯಿಂದ ಮದುವೆ ಹೊಸದರಲ್ಲೇ ಬಯಲಾಗಿತ್ತು 'ಬಿಗ್ ಬಿ-ಜಯಾ' ಅಸಲೀ ಮುಖ!

Published : Nov 05, 2025, 11:10 AM IST

ಇದೆಲ್ಲಾ ಓಕೆ.. ಮದುವೆಯಾದ ಹೊಸದರಲ್ಲಿ ಬಚ್ಚನ್ ಪರಿವಾರದ ಸೊಸೆ ಆದ ಐಶ್ವರ್ಯಾ ರೈ ಅವರು ಸಂದರ್ಶನದಲ್ಲಿ ಒಂದು ಮಾತು ಹೇಳಿದ್ದರು. ಆದರೆ, ಈಗ ಅದೇನೇನೋ ಸುದ್ದಿ ಹರಿದಾಡುತ್ತಿದೆ. ಐಶೂ ತುಂಬಾ ಬುದ್ಧಿವಂತೆ, ಬಚ್ಚನ್ ಫ್ಯಾಮಿಲಿ ಕೂಡ ಗ್ರೇಟ್.. ಆದರೆ.. ಈ ಸುದ್ದಿ? ಅದೇನು ನೋಡಿ..

PREV
19
ಜಯಾ ಬಚ್ಚನ್ ಬಗ್ಗೆ ಐಶ್ವರ್ಯಾ ರೈ ಮಾತು!

ಐಶ್ವರ್ಯಾ ರೈ (Aishwarya Rai) ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ (Abhishek Bachchan) ಡಿವೋರ್ಸ್ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಅದು ಸುಳ್ಳು ಸುದ್ದಿ ಅಂತಲೂ ಹರಿದಾಡುತ್ತಿದೆ. ಸಿನಿಪ್ರೇಮಿಗಳು ಹಾಗೂ ಅವರ ಅಭಿಮಾನಿಗಳು ಈ ವಿಷಯದಲ್ಲಿ ಸಾಕಷ್ಟು ಕನ್‌ಫ್ಯೂಸ್ ಆಗಿದ್ದಾರೆ.

29
ಜಯಾ ಬಚ್ಚನ್ ಬಗ್ಗೆ ಐಶ್ವರ್ಯಾ ರೈ ಮಾತು!

ಇದೀಗ ಸಿಕ್ಕ ಮಾಹಿತಿ ಪ್ರಕಾರ, ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಜೋಡಿ ಪರಸ್ಪರ ಯಾವುದೇ ಭಿನ್ನಾಭಿಪ್ರಾಯ ಇಲ್ಲದೇ ಚೆನ್ನಾಗಿಯೇ ಇದ್ದಾರೆ. ಆದರೆ, ಸುದ್ದಿ ಹರಿದಾಡಲು ಬೇರೆಯದೇ ಕಾರಣವಿದೆ ಎನ್ನಲಾಗುತ್ತಿದೆ.

39
ಜಯಾ ಬಚ್ಚನ್ ಬಗ್ಗೆ ಐಶ್ವರ್ಯಾ ರೈ ಮಾತು!

ನಟಿ ಐಶ್ವರ್ಯಾ ರೈ ಅವರಿಗೆ ತಮ್ಮ ತಾಯಿಯ ಮೇಲೆ ಅತೀವ ಪ್ರೀತಿ ಇದೆ. ಆ ಕಾರಣಕ್ಕೆ ಅವರು ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ತಾಯಿಯ ಬಳಿಯೇ ಹೆಚ್ಚಾಗಿ ಇರುತ್ತಾರೆ ಎನ್ನಲಾಗಿದೆ. ಅಲ್ಲಿ ಕೆಲಸದವರ ಬದಲು ಸ್ವತಃ ತಾವೇ ತಾಯಿಯ ಆರೈಕೆಯಲ್ಲಿ ತೊಡಗುತ್ತಾರೆ ಎನ್ನಲಾಗಿದೆ.

49
ಜಯಾ ಬಚ್ಚನ್ ಬಗ್ಗೆ ಐಶ್ವರ್ಯಾ ರೈ ಮಾತು!

ಬಚ್ಚನ್ ಫ್ಯಾಮಿಲಿ ಜೊತೆ ಅವರು ಹೊರಗಡೆ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಕಾರಣಕ್ಕೆ ಹೀಗೆಲ್ಲಾ ಸುದ್ದಿ ಹಬ್ಬಿಸಲಾಗುತ್ತಿದೆ ಎನ್ನಲಾಗಿದೆ. ಇಡೀ ಕುಟುಂಬ ಸಿನಿಮಾ, ರಾಜಕೀಯ ಎಂದು ಮನೆಯಿಂದ ಹೊರಗಡೆ ಕೆಲಸ ಮಾಡುವುದರಿಂದ ಎಲ್ಲರೂ ಒಟ್ಟಿಗೇ ಹೊರಗೆ ಹೋಗಲು ಕಷ್ಟವಾಗಿದೆ.

59
ಜಯಾ ಬಚ್ಚನ್ ಬಗ್ಗೆ ಐಶ್ವರ್ಯಾ ರೈ ಮಾತು!

ಫ್ಯಾಮಿಲಿಯಲ್ಲಿ ಎಲ್ಲರೂ ಪ್ರತ್ಯೇಕವಾಗಿ ತಮ್ಮತಮ್ಮ ಕೆಲಸದಲ್ಲಿ ಬ್ಯುಸಿ ಆಗಿರುವ ಕಾರಣಕ್ಕೆ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಅವರನ್ನೂ ಕೂಡ ಒಟ್ಟಿಗೇ ನೋಡಲು ಸಾಧ್ಯವಾಗುತ್ತಿಲ್ಲ. ಮಗಳು ಆರಾಧ್ಯಾ ಜೊತೆ ಮಾತ್ರ ಐಶೂ ಅವರು ಆಗಾಗ ಕಾಣಿಸುತ್ತಾರೆ.

69
ಜಯಾ ಬಚ್ಚನ್ ಬಗ್ಗೆ ಐಶ್ವರ್ಯಾ ರೈ ಮಾತು!

ಈ ಎಲ್ಲ ಕಾರಣಗಳಿಂದ ಅಭಿ-ಐಶೂ ಮಧ್ಯೆ ಮನಸ್ತಾಪ ಮೂಡಿದೆ, ಡಿವೋರ್ಸ್ ಆಗಲಿದೆ ಎಂದೆಲ್ಲಾ ರೂಮರ್ ಹಬ್ಬಿದೆ ಎನ್ನಲಾಗುತ್ತಿದೆ. ಸತ್ಯ ಸಂಗತಿ ಏನೆಂದರೆ, ಬಚ್ಚನ್ ಪರಿವಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಅವರೆಲ್ಲರೂ ಕೈಕೈ ಹಿಡಿದುಕೊಂಡು ಒಟ್ಟಿಗೇ ಓಡಾಡಲು ಸಾಧ್ಯವಾಗುತ್ತಿಲ್ಲ ಅಷ್ಟೇ ಎನ್ನುತ್ತಾರೆ ಅವರ ಆಪ್ತರು. ಇದೇ ಕಾರಣಕ್ಕೆ ಡಿವೋರ್ಸ್ ಗಾಸಿಪ್ ಜರಿದಾಡುತ್ತಿದೆ ಎನ್ನೋದು ಹಲವರ ಮಾತು.

79
ಜಯಾ ಬಚ್ಚನ್ ಬಗ್ಗೆ ಐಶ್ವರ್ಯಾ ರೈ ಮಾತು!

ಇದೆಲ್ಲಾ ಓಕೆ.. ತಮ್ಮ ಮದುವೆಯ ಸಮಯದಲ್ಲಿ ಅಂದರೆ, ಮದುವೆಯಾದ ಹೊಸದರಲ್ಲಿ ಬಚ್ಚನ್ ಪರಿವಾರದ ಸೊಸೆ ಆದ ಐಶ್ವರ್ಯಾ ರೈ ಅವರು ಸಂದರ್ಶನದಲ್ಲಿ ಒಂದು ಮಾತು ಹೇಳಿದ್ದರು. ಅದೇನು ನೋಡಿ..

89
ಜಯಾ ಬಚ್ಚನ್ ಬಗ್ಗೆ ಐಶ್ವರ್ಯಾ ರೈ ಮಾತು!

'ಜಯಾ ಬಚ್ಚನ್ ಅವರು ನನ್ನ ತಾಯಿಯಂಥವರು. ಅವರು ನನ್ನನ್ನು ಸ್ವೀಕರಿಸಿದ ರೀತಿಗೆ ಹಾಗೂ ತೋರಿಸಿದ ಪ್ರೀತಿಗೆ ನಾನು ಸದಾ ಕೃತಜ್ಞನಾಗಿರುವೆ' ಎಂದಿದ್ದರು. ಜೊತೆಗೆ, ಮಾವ ಅಮಿತಾಭ್ ಬಗ್ಗೆ 'ನನ್ನ ಮಾವನವರನ್ನು ನಾನು 'ಪಾ' ಎಂದೇ ಕರೆಯುತ್ತೇನೆ. ಅವರು ನನಗೆ ತಂದೆಯ ಸಮಾನರಾಗಿ ಅಕ್ಕರೆ ಧಾರೆಯೆರೆಯುತ್ತಿದ್ದಾರೆ. ಅತ್ತೆ-ಮಾವನನ್ನ ಪಾಲಿಗೆ 'ಮಾ-ಪಾ' ಎಂದಿದ್ದರು.

99
ಜಯಾ ಬಚ್ಚನ್ ಬಗ್ಗೆ ಐಶ್ವರ್ಯಾ ರೈ ಮಾತು!

ಆದರೆ, ಇಂದು ಬಚ್ಚನ್ ಪರಿವಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನಲಾಗುತ್ತಿದೆ. ಜಯಾ ಬಚ್ಚನ್ ಹಾಗೂ ಐಶ್ವರ್ಯಾ ರೈ ಮಧ್ಯೆ ಆಗಿಬರಲ್ಲ ಎನ್ನುವ ಸುದ್ದಿಯ ಜೊತೆಗೆ, ಅಭಿಷೇಕ್-ಐಶ್ವರ್ಯಾ ರೈ ಮಧ್ಯೆ ಕೂಡ ಅಂತರ ಉಂಟಾಗಿದೆ ಎನ್ನಲಾಗುತ್ತಿದೆ.

ಅದೇನೇ ಆದರೂ ಡಿವೋರ್ಸ್ ಆಗಿದೆ, ಅಥವಾ ಆಗಲಿದೆ ಎನ್ನವುದು ಮಾತ್ರ ಶುದ್ಧ ಸುಳ್ಳು ಎನ್ನಲಾಗುತ್ತಿದೆ. ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ, ಕಾದು ನೋಡಬೇಕಷ್ಟೇ..!

Read more Photos on
click me!

Recommended Stories