ಇದರ ಜೊತೆಗೆ, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಮತ್ತು ಹಾಲಿವುಡ್‌ನ ಖ್ಯಾತ ಸಂಗೀತ ಸಂಯೋಜಕ ಹ್ಯಾನ್ಸ್ ಜಿಮ್ಮರ್ ಕೈಜೋಡಿಸಿರುವುದು ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಸಂಗೀತ, ಹಿನ್ನೆಲೆ ಧ್ವನಿ ಮತ್ತು ದೃಶ್ಯ ವೈಭವದ ಮೂಲಕ ಮಹಾಕಾವ್ಯಕ್ಕೆ ಹೊಸ ಅನುಭವ ನೀಡುವ ಪ್ರಯತ್ನ ಚಿತ್ರತಂಡದ್ದಾಗಿದೆ.
ನವೆಂಬರ್ 5ರಂದು ವಿಶ್ವಾದ್ಯಂತ ಬಿಡುಗಡೆ
‘ರಾಮಾಯಣ: ಪಾರ್ಟ್ 1’ ಸಿನಿಮಾ 2026ರ ನವೆಂಬರ್ 5ರಂದು ದೀಪಾವಳಿ ಸಮಯದಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಅದರಲ್ಲೂ 40 ಭಾಷೆಗಳಲ್ಲಿ ಬಿಡುಗಡೆ ಕಂಡರೆ ಈ ಚಿತ್ರದ ಅಬ್ಬರೆ ಅದೆಷ್ಟು ಜೋರಾಗಲಿದೆ ಎಂಬುದನ್ನು ಊಹಿಸಿದರೂ ಮೈ ರೋಮಾಂಚನ ಆಗುತ್ತದೆ. ಚಿತ್ರದ ಎರಡನೇ ಭಾಗದ ಬಿಡುಗಡೆ 2027ರಿಂದ 2028ಕ್ಕೆ ಮುಂದೂಡಲ್ಪಟ್ಟಿದೆ ಎಂಬ ವರದಿಗಳೂ ಹರಿದಾಡುತ್ತಿವೆ.
ಒಟ್ಟಿನಲ್ಲಿ, ವೈರಲ್ ಆಗಿರುವ ಆರಂಭಿಕ ವಿಮರ್ಶೆ, ರಣಬೀರ್ ಕಪೂರ್ ಮತ್ತು ಯಶ್ ಅವರ ವಿಭಿನ್ನ ಪಾತ್ರಗಳು, ಭಾವನಾತ್ಮಕ ಕಥಾಹಂದರ ಹಾಗೂ ಅದ್ಧೂರಿ ದೃಶ್ಯಗಳು ‘ರಾಮಾಯಣ’ ಚಿತ್ರದ ಬಗ್ಗೆ ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿವೆ. ಆದರೆ, ಈ ನಿರೀಕ್ಷೆಗಳನ್ನು ಸಿನಿಮಾ ಎಷ್ಟರಮಟ್ಟಿಗೆ ತಲುಪಲಿದೆ ಎಂಬುದಕ್ಕೆ ಅಧಿಕೃತ ವಿಮರ್ಶೆಗಳು ಮತ್ತು ಚಿತ್ರಮಂದಿರಗಳಲ್ಲಿನ ಪ್ರೇಕ್ಷಕರ ಪ್ರತಿಕ್ರಿಯೆಯೇ ಉತ್ತರ ನೀಡಲಿದೆ.