Latest Videos

ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ನಟಿಸಿದ ಕನ್ನಡ ಸಿನಿಮಾ ಇದೇ ನೋಡಿ!

First Published May 26, 2024, 3:50 PM IST

ಮುಂಬೈ ಇಂಡಿಯನ್ಸ್ ತಂಡದ ನಾಯಕ, ಕ್ರಿಕೆಟಿಕ ಹಾರ್ದಿಕ್ ಪಾಂಡ್ಯ ಸಂಸಾರದಲ್ಲಿ ಬರುಗಾಳಿ ಎದ್ದಿದೆ ಎಂಬ ವರದಿಗಳು ಹೊರ ಬರುತ್ತಿವೆ. ಮಕ್ಕಳಾದ ನಂತರ ಹಾರ್ದಿಕ್ ಪಾಂಡ್ಯ ಮತ್ತು ನಟಿ ನತಾಶಾ ಸ್ಟಾಂಕೋವಿಕ್‌ ಮದುವೆಯಾಗಿದ್ದರು.  
 

ಮದುವೆಗೂ ಮುನ್ನ ನತಾತಾ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಮಾಡೆಲಿಂಗ್ ಜೊತೆಯಲ್ಲಿ ಚಂದನವನದ ಸಿನಿಮಾವೊಂದರಲ್ಲಿಯೂ ನತಾಶಾ ಕಾಣಿಸಿಕೊಂಡಿದ್ದರು. ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದ ನತಾಶಾಗೂ ಸ್ಯಾಂಡಲ್‌ವುಡ್‌ಗೂ ನಂಟಿದೆ.

2020ರಲ್ಲಿ ಸೆರ್ಬಿಯಾ ಮೂಲದ ನತಾಶಾರನ್ನು ಹಾರ್ದಿಕ್ ಪಾಂಡ್ಯಾ ಮದುವೆಯಾಗಿದ್ದರು. ಮದುವೆಗೂ ಮೊದಲೇ ಹಾರ್ದಿಕ್ ಪಾಂಡ್ಯ ಮತ್ತು ನತಾಶಾಗೆ ಆಗಸ್ತ್ಯ ಹೆಸರಿನ ಮಗನಿದ್ದನು. ಮಗನ ಸಮ್ಮುಖದಲ್ಲಿಯೇ ಇಬ್ಬರು ಮದುವೆಯಾಗಿದ್ದರು, ಮದುವೆಯಾದ ನಾಲ್ಕೇ ವರ್ಷಕ್ಕೆ ಇಬ್ಬರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಎಂಬ ಮಾತುಗಳು ಕೇಳಿ ಬಂದಿವೆ.

ನತಾಶಾ ಇನ್‌ಸ್ಟಗ್ರಾಂ ಸೇರದಂತೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಹೆಸರಿನ ಜೊತೆಯಲ್ಲಿದ್ದ ಪಾಂಡ್ಯಾ ಸರ್‌ನೇಮ್ ತೆಗೆದಿದ್ದಾರೆ. ಈ ಬೆಳವಣಿಗೆಯಿಂದಾಗಿ ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲವಾ ಎಂಬ ಪ್ರಶ್ನೆ ಮೂಡಿದೆ. ಆದರೆ ಈ ಬಗ್ಗೆ ಹಾರ್ದಿಕ್ ಆಗಲಿ ಅಥವಾ ನತಾಶಾ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಮದುವೆಗೂ ಮುನ್ನ ಸ್ಯಾಂಡಲ್‌ವುಡ್ ಅಂಗಳಕ್ಕೆ ನತಾಶಾರನ್ನು ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಕರೆ ತಂದಿದ್ದರು. ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದ ಹಾಡಿನಲ್ಲಿ ನತಾಶಾ ಮಿಂಚಿನ ಬೆಳ್ಳಿಯಂತೆ ಸೊಂಟ ಬಳುಕಿಸಿ ಪಡ್ಡೆ ಹೈಕಳ ಹೃದಯದಲ್ಲಿ ಸಂಚಲನ ಸೃಷ್ಟಿಸಿದ್ದರು.

Natasa Stankovic

ಯೋಗರಾಜ್ ಭಟ್ ನಿರ್ದೇಶನದ ದನ ಕಾಯೋನು ಸಿನಿಮಾ 2016ರಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ನಾಯಕ ನಟನಾಗಿ ದುನಿಯಾ ವಿಜಯ್ ನಾಯಕಿಯಾಗಿ ಪ್ರಿಯಾಮಣಿ ನಟಿಸಿದ್ದರು. ಪ್ರಾದೇಶಿಕತೆ ಕಥಾ ಹಂದರವನ್ನು ಒಳಗೊಂಡಿದ್ದ ಈ ಚಿತ್ರ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ದನ ಕಾಯೋನು ಸಿನಿಮಾದ ಟೈಟಲ್ ಸಾಂಗ್ ನಾವು ದನ ಕಾಯೋರು ಹಾಡಿನಲ್ಲಿ ನತಾಶಾ ವಿಶೇಷ ಪಾತ್ರದ ಮೂಲಕ ಗಮನ ಸೆಳೆದಿದ್ದರು.

ಈ ಎಲ್ಲಾ ಸುದ್ದಿಗಳ ನಡುವೆ ಜಿಮ್ ಟ್ರೈನರ್ ಜೊತೆ ನತಾಶಾ ಕಾಣಿಸಿಕೊಂಡಿದ್ದು, ಹಲವು ಚರ್ಚೆಗೆ ಗ್ರಾಸವಾಗಿದೆ. ಇನ್‌ಸ್ಟಾಗ್ರಾಂನಲ್ಲಿ ನತಾಶಾ ಯೇಸು ಫೋಟೋ ಸಹ ಶೇರ್ ಮಾಡಿಕೊಂಡಿದ್ದಾರೆ. ಒಂದು ವೇಳೆ ಡಿವೋರ್ಸ್ ಆದ್ರೆ ಹಾರ್ದಿಕ್ ತಮ್ಮ ಆಸ್ತಿಯ ಶೇ.70ರಷ್ಟು ಭಾಗ ನೀಡಬೇಕು ಎಂಬ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಆರಂಭಗೊಂಡಿವೆ.

ಈ ಬಾರಿಯ 2024ರ ಐಪಿಎಲ್‌ನ ಯಾವುದೇ ಪಂದ್ಯಕ್ಕೂ ನತಾತಾ ಆಗಮಿಸಿರಲಿಲ್ಲ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಪಾಂಡ್ಯ ಮತ್ತು ಅವರ ತಂಡವನ್ನು ನತಾಶಾ ಬೆಂಬಲಿಸಿಲ್ಲ ಎಂದು ವರದಿಯಾಗಿದೆ. ಇತ್ತ ಡಿವೋರ್ಸ್ ವದಂತಿಗಳ ಬೆನ್ನಲ್ಲೇ ನತಾಶಾ ಬಿಕಿನಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

click me!