Seetha Raama serial ಇವರೇ ನೋಡಿ ಸೀತಾರಾಮ ಸಿಹಿಯ ನಿಜವಾದ ಅಮ್ಮ!

First Published | May 26, 2024, 3:27 PM IST

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರವಾಹಿ ಮೂಲಕ ಕರ್ನಾಟಕದ ಮನೆಮಾತಾಗಿರುವ ಸಿಹಿ ನಟನೆಯನ್ನು  ಇಡೀ ಕರುನಾಡು ಮೆಚ್ಚಿಕೊಂಡಿದೆ. ಆಕೆಯ ಮುದ್ದಾದ ಮಾತಿಗೆ ಎಲ್ಲರೂ ಫಿದಾ ಆಗಿದ್ದಾರೆ.

ಸದ್ಯ ಸಿಹಿಯ ಮುದ್ದಿನ ಸೀತಮ್ಮ ಮತ್ತು ರಾಮನ ಮದುವೆ ಮಾತುಕತೆ ನಡೆಯುತ್ತಿದೆ. ಧಾರವಾಹಿಯಲ್ಲಿ ಈವರೆಗೆ ಸಿಹಿ ನಿಜವಾಗಲೂ ಯಾರ ಮಗಳು, ಸೀತನ ಮಗಳಾ? ಸೀತಾಗೆ ಮೊದಲು ಮದುವೆಯಾಗಿದೆಯಾ? ಆಕೆಯ ಜನ್ಮ ರಹಸ್ಯವೇನು ಎಂಬುದು ಈವರೆಗೆ ಬಹಿರಂಗವಾಗಿಲ್ಲ.

ಸೀತಾರಾಮ ಧಾರವಾಹಿ ವೀಕ್ಷಕರು ಕೂಡ ಸಿಹಿಯ ಜನ್ಮ ರಹಸ್ಯವೇನು? ರಾಮನಿಗೆ ಸಿಹಿಯ ಹುಟ್ಟಿನ ಗುಟ್ಟನ್ನು ಯಾವಾಗ ತಿಳಿಸುತ್ತಾಳೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಕೇಳುತ್ತಲೇ ಇದ್ದಾರೆ.

Tap to resize

ಧಾರವಾಹಿಯಲ್ಲಿ ಸಿಹಿಗೆ ಅಪ್ಪನ ಪ್ರೀತಿ ಇಲ್ಲ. ತನ್ನ ತಂದೆ ಯಾರು ಎನ್ನೋದು ಗೊತ್ತಿಲ್ಲ, ಮನೆಯಲ್ಲಿ ಕೂಡ ಆರ್ಥಿಕ ಸಂಕಷ್ಟ ಇದೆ.  ಹೀಗಾಗಿ ರಾಮನಿಂದ ಅಪ್ಪನ ಪ್ರೀತಿಯನ್ನು ಬಯಸುತ್ತಿದ್ದಾಳೆ ಸಿಹಿ.

 ಆದರೆ ನಿಜ ಜೀವನದಲ್ಲಿ ಕೂಡ ಸಿಹಿ ಪಾತ್ರದಲ್ಲಿರುವ ರಿತು ಸಿಂಗ್‌ ಗೆ ಅಪ್ಪನ ಪ್ರೀತಿ ಸಿಕ್ಕಿಲ್ಲವಂತೆ. ರಿತು ಸಿಂಗ್‌ ತುಂಬ ಚಿಕ್ಕವಳಿದ್ದಾಗಲೇ ಅವಳ ತಂದೆ ಮನೆ ಬಿಟ್ಟು ಹೋಗಿದ್ದಾರಂತೆ. ಈ ಹಿಂದೆ ಡ್ರಾಮಾ ಜ್ಯೂನಿಯರ್ಸ್ ವೇದಿಕೆಯಲ್ಲಿ ರಿತು ತಾಯಿ ಗೀತಾ ಅವರು ಈ ಬಗ್ಗೆ ಹೇಳಿಕೊಂಡಿದ್ದರು. ಇವರೇ ನೋಡಿ ಸಿಹಿಯ ನಿಜವಾದ ತಾಯಿ ಗೀತಾ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜೂನಿಯರ್ಸ್ ಶೋ ಮೂಲಕ ಪರಿಚಯವಾದ ನಿಜ ನಾಮಧೇಯ ರೀತು ಸಿಂಗ್. ಮೂಲತಃ ನೇಪಾಳದ ಪುಟ್ಟ ಪೋರಿ ಈಕೆ. ಈಕೆಯ ಫ್ಯಾಮಿಲಿ ಮೈಸೂರಿನಲ್ಲಿದ್ದರು. ಬಳಿಕ ಬೆಂಗಳೂರಿಗೆ ಶಿಫ್ಟ್ ಆದರು. 

ಡ್ರಾಮಾ ಜೂನಿಯರ್ಸ್ ಸೀಸನ್‌ 4 ಮೂಲಕ ಕರ್ನಾಟಕಕ್ಕೆ ಪರಿಚಯವಾದ ಈಕೆ ಸೀತಾ ರಾಮ ಧಾರವಾಹಿಯ ಸಿಹಿ ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ಈಕೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂದರೆ ಪಂಚ ಪ್ರಾಣ. 

Latest Videos

click me!