ನಟಿ ಹನ್ಸಿಕಾ ಮೋಟ್ವಾನಿ, ಪತಿ ಸೊಹೈಲ್ ಖತೂರಿಯಾ ಜೊತೆಗಿನ ವಿಚ್ಛೇದನದ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ಈ ಕಷ್ಟದ ಸಮಯದಲ್ಲಿ ತಮ್ಮ ಕುಟುಂಬ ನೀಡಿದ ಬೆಂಬಲವನ್ನು ನೆನೆದಿದ್ದು, ತಾವೀಗ ಭಾವನಾತ್ಮಕವಾಗಿ ಉತ್ತಮ ಸ್ಥಿತಿಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
'ಬಿಂದಾಸ್' ಸಿನಿಮಾ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿರುವ ನಟಿ ಹನ್ಸಿಕಾ ಮೋಟ್ವಾನಿ, ಪತಿ ಸೊಹೈಲ್ ಖತೂರಿಯಾ ಅವರಿಂದ ಕಾನೂನುಬದ್ಧವಾಗಿ ಬೇರ್ಪಟ್ಟ ಒಂದು ತಿಂಗಳ ನಂತರ ಮೊದಲ ಬಾರಿಗೆ ಈ ಬಗ್ಗೆ ಮಾತನಾಡಿದ್ದಾರೆ. ಈ ಜೋಡಿಯ ಬೇರ್ಪಡುವಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತಾದರೂ, ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.
26
ಸ್ಪಷ್ಟನೆ ನೀಡಿಲ್ಲ
ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ಮಾರ್ಚ್ 11 ರಂದು ಹನ್ಸಿಕಾ ಮತ್ತು ಸೊಹೈಲ್ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದರು. ಇತ್ತೀಚೆಗೆ 'Hauterrfly'ಗೆ ನೀಡಿದ ಸಂದರ್ಶನದಲ್ಲಿ ಹನ್ಸಿಕಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. 'ಅವರಿಗೆ ಕ್ಲಿಕ್‌ಬೇಟ್ ಬೇಕಿತ್ತು, ಸಿಕ್ಕಿತು. ಹೆಡ್‌ಲೈನ್ಸ್ ಬೇಕಿತ್ತು, ಸಿಕ್ಕಿತು. ನಾನೆಂದೂ ಸ್ಪಷ್ಟನೆ ನೀಡಿಲ್ಲ, ನೀಡುವುದೂ ಇಲ್ಲ.
36
ಟ್ರೇನ್‌ನಿಂದ ಇಳಿಯುವುದೇ ಉತ್ತಮ
ಯಾಕೆಂದರೆ ಅದು ನನಗೆ ಮುಖ್ಯವಲ್ಲ. ನನಗೇನೂ ಪಶ್ಚಾತ್ತಾಪವಿಲ್ಲ. ಕಷ್ಟಪಡುವುದಕ್ಕಿಂತ ತಪ್ಪು ಟ್ರೇನ್‌ನಿಂದ ಇಳಿಯುವುದೇ ಉತ್ತಮ' ಎಂದು ಅವರು ವಿವರಿಸಿದ್ದಾರೆ. ಬೇರ್ಪಟ್ಟ ನಂತರ ತಾವೀಗ ಉತ್ತಮ ಭಾವನಾತ್ಮಕ ಸ್ಥಿತಿಯಲ್ಲಿದ್ದು, ಜನರ ಅಭಿಪ್ರಾಯಕ್ಕಿಂತ ತಮ್ಮ ಯೋಗಕ್ಷೇಮಕ್ಕೆ ಹೆಚ್ಚು ಗಮನ ಹರಿಸುತ್ತಿರುವುದಾಗಿ ನಟಿ ಹೇಳಿದ್ದಾರೆ.
ವಿಚ್ಛೇದನದ ಹಿಂದಿನ ಕಾರಣಗಳು ಗೌಪ್ಯವಾಗಿಯೇ ಉಳಿಯಲಿವೆ ಎಂದು ಹನ್ಸಿಕಾ ಪುನರುಚ್ಚರಿಸಿದ್ದಾರೆ. ಇಂತಹ ವಿಷಯಗಳು ಸಂಬಂಧಪಟ್ಟವರ ನಡುವೆಯೇ ಇರಬೇಕು ಎಂಬುದು ಅವರ ಅಭಿಪ್ರಾಯ. ಈ ಸಮಯದಲ್ಲಿ ಅಚಲವಾಗಿ ಬೆಂಬಲ ನೀಡಿದ ತಮ್ಮ ತಾಯಿ ಮತ್ತು ಸಹೋದರನಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
56
ಹನ್ಸಿಕಾಸ್ ಲವ್ ಶಾದಿ ಡ್ರಾಮಾ
ವಿಚ್ಛೇದನದ ನಂತರ, ಹನ್ಸಿಕಾ ತಮ್ಮ ಕುಟುಂಬದೊಂದಿಗೆ ಜಪಾನ್‌ಗೆ ಪ್ರವಾಸಕ್ಕೆ ತೆರಳಿದ್ದರು. ಡಿಸೆಂಬರ್ 2022 ರಲ್ಲಿ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ಹನ್ಸಿಕಾ ಮತ್ತು ಸೊಹೈಲ್ ಅದ್ದೂರಿಯಾಗಿ ಮದುವೆಯಾಗಿದ್ದರು. ಇವರ ಮದುವೆಯನ್ನು 'ಹನ್ಸಿಕಾಸ್ ಲವ್ ಶಾದಿ ಡ್ರಾಮಾ' ಎಂಬ ಹೆಸರಿನಲ್ಲಿ 2023 ರಲ್ಲಿ ಜಿಯೋ ಹಾಟ್‌ಸ್ಟಾರ್ ಸೀರೀಸ್ ಆಗಿ ಚಿತ್ರೀಕರಿಸಲಾಗಿತ್ತು.
66
ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ
ಹನ್ಸಿಕಾ ಇತ್ತೀಚೆಗೆ 2024 ರಲ್ಲಿ ತೆರೆಕಂಡ 'ಗಾರ್ಡಿಯನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಬರಿ ಮತ್ತು ಗುರು ಶರವಣನ್ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅವರು ತೆಲುಗು ಡ್ಯಾನ್ಸ್ ಶೋ 'ಢೀ ಸೆಲೆಬ್ರಿಟಿ ಸ್ಪೆಷಲ್ 2' ನಲ್ಲಿ ತೀರ್ಪುಗಾರರಾಗಿಯೂ ಕಾಣಿಸಿಕೊಂಡಿದ್ದು, ಮುಂಬರುವ ತೆಲುಗು ಚಿತ್ರ 'ನಶಾ'ದಲ್ಲಿ ನಟಿಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.