ಬೆಡ್‌ರೂಮ್‌ ಸೀನ್‌ಗಾಗಿಯೇ 1 ಕೋಟಿ ಜಾಸ್ತಿ ಸಂಭಾವನೆ ಕೇಳಿದ್ರಾ ತಮನ್ನಾ?

First Published | Sep 4, 2023, 6:30 PM IST

ನಟಿ ತಮನ್ನಾ ಕುರಿತಾಗಿ ತಮಿಳು ನಟ ಹಾಗೂ ವಿಮರ್ಶಕ ಬೈಲ್ವಾನ್ ರಂಗನಾಥನ್ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿದೆ. ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡುವ ವೇಳೆ ತಮನ್ನಾ ನಟನೆ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.
 

ನಟಿ ತಮನ್ನಾ ಗೆಲುವಿನ ಜೋಶ್‌ನಲ್ಲಿದ್ದಾರೆ. ಜೈಲರ್‌ ಚಿತ್ರದಲ್ಲಿ ಕಾವಾಲಯ್ಯ ಹಾಡಿನಲ್ಲಿ ಮೋಹಕವಾಗಿ ನೃತ್ಯ ಮಾಡಿದ್ದ ಈಕೆ ಸದ್ಯ ಖುಷಿಯ ಮೂಡ್‌ನಲ್ಲಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ತಮನ್ನಾ ಅವರು ನಟಿಸಿದ ಚಿತ್ರಗಳು ಬೇರೆ ಬೇರೆ ಕಾರಣಗಳಿಂದಾಗಿ ಸುದ್ದಿಯಾಗುತ್ತಿದೆ. ವೆಬ್‌ ಸಿರೀಸ್‌ನಲ್ಲಿ ಮಾದಕ ದೃಶ್ಯಗಳಲ್ಲಿಯೂ ಅವರು ಮುಕ್ತವಾಗಿ ನಟಿಸಿದ್ದರು.

Tap to resize

ಜೀ ಕರ್ದಾ ಹಾಗೂ ಲಸ್ಟ್‌ ಸ್ಟೋರೀಸ್‌ 2 ವೆಬ್‌ ಸಿರೀಸ್‌ನಲ್ಲಿ ಬಹಳ ಮಾದಕವಾಗಿ ನಟಿಸಿದ್ದ ತಮನ್ನಾ ಕೆಲವೊಂದು ಬೋಲ್ಡ್‌ ದೃಶ್ಯಗಳಲ್ಲೂ ನಟಿಸಿದ್ದರು.

ತಮನ್ನಾ ತಮಿಳು ಮಾತ್ರವಲ್ಲ ಹಿಂದಿ ಚಿತ್ರರಂಗದಲ್ಲೂ ಈಗ ಪ್ರಮುಖ ತಾರೆ. ತಮಿಳಿನಲ್ಲಿ ವಿಜಯ್‌, ಅಜಿತ್‌, ಸೂರ್ಯ, ವಿಕ್ರಮ್‌, ಧನುಶ್‌ ಹಾಗೂ ಸಿಂಬು ಜೊತೆಯಲ್ಲಿ ನಟಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ತಮಿಳಿನಲ್ಲಿ ಅವಕಾಶಗಳು ಕಡಿಮೆ ಆದಂತೆ ಬಾಲಿವುಡ್‌ನತ್ತ ಮುಖ ಮಾಡಿದ್ದ ತಮನ್ನಾ ಅಲ್ಲಿಯೂ ಕೂಡ ದೊಡ್ಡ ಅವಕಾಶಗಳನ್ನು ಪಡೆದುಕೊಂಡಿದ್ದರು.

ಬಾಲಿವುಡ್‌ ನಟ ವಿಜಯ್‌ ವರ್ಮ ಜೊತೆಗೆ ಕಳೆದ ಕೆಲ ವರ್ಷಗಳಿಂದ ರಿಲೇಷನ್‌ಷಿಪ್‌ನಲ್ಲಿರುವ ತಮನ್ನಾ, ಇದನ್ನು ಕೆಲವು ಸಂದರ್ಶನಗಳಲ್ಲಿ ಮುಕ್ತವಾಗಿಯೂ ಹೇಳಿಕೊಂಡಿದ್ದಾರೆ.

ಸೀಕ್ರೆಟ್‌ ಆಗಿಯೇ ತಮ್ಮ ರಿಲೇಷನ್‌ಷಿಪ್‌ಅನ್ನು ಕಾಯ್ದುಕೊಂಡಿದ್ದ ಈ ಜೋಡಿ ತೀರಾ ಇತ್ತೀಚಿನ ದಿನಗಳಲ್ಲಿ ತಾವು ಪ್ರೇಮದಲ್ಲಿರುವುದುನ್ನು ಖಚಿತಪಡಿಸಿದ್ದರು,

ಅದರ ಬೆನ್ನಲ್ಲಿಯೇ ಲಸ್ಟ್‌ ಸ್ಟೋರೀಸ್‌ ವೆಬ್‌ ಸಿರೀಸ್‌ನಲ್ಲಿ ತಮನ್ನ ಹಾಗೂ ವಿಜಯ್‌ ವರ್ಮ ಅವರ ಲಿಪ್‌ಲಾಕ್‌ ಸೀನ್‌ಗಳು ವೈರಲ್‌ ಆಗಿದ್ದವು. ಜೀ ಕರ್ದಾ ಚಿತ್ರದಲ್ಲಿ ಬೆಡ್‌ ರೂಮ್‌ ಸೀನ್‌ಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದರು

ಆ ಬಳಿಕ ಜೈಲರ್‌ ಚಿತ್ರದ ಕಾವಾಲಯ್ಯ ಹಾಡಿನಲ್ಲಿ ಮಾದಕವಾಗಿ ಅವರು ಡಾನ್ಸ್‌ ಮಾಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡಿತ್ತು. ಈ ವಿಚಾರದ ಬಗ್ಗೆ ಬೈಲ್ವಾನ್ ರಂಗನಾಥನ್ (bayilvan ranganathan) ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

ಲಸ್ಟ್‌ ಸ್ಟೋರಿಸ್‌ ವೆಬ್‌ ಸಿರೀಸ್‌ನಲ್ಲಿ ನಟಿ ತಮನ್ನಾ, ಚರ್ಮ ಸುಲಿದ ಚಿಕನ್‌ ರೀತಿ ಕಾಣತ್ತಿದ್ದರು. ಅವರ ನಟನೆ ಕೂಡ ಅಷ್ಟೇನೂ ಉತ್ತಮವಾಗಿರಲಿಲ್ಲ ಎಂದಿದ್ದಾರೆ.

Tamannaah Bhatia

ಲಸ್ಟ್‌ ಸ್ಟೋರಿಸ್‌ನಲ್ಲಿ ಅವರ ನಟನೆ ಏನೆಂದರೆ, 6 ನಿಮಿಷಗಳ ಕಾಲ ಇರುವ ಕಿಸ್ಸಿಂಗ್ ಬೆಡ್‌ರೂಮ್‌ ಸೀನ್‌ಗಳು ಮಾತ್ರ. ಅದರಲ್ಲಿ ಮಾತ್ರವೇ ಅವರ ನಟನೆ ಕಾಣುತ್ತದೆ ಎಂದು ಟೀಕಿಸಿದ್ದಾರೆ.

ಸಾಮಾನ್ಯವಾಗಿ ನಟಿ ತಮನ್ನಾ ಒಂದು ಚಿತ್ರಕ್ಕಾಗಿ 6 ಕೋಟಿ ರೂಪಾಯಿ ಸಂಭಾವನೆಯನ್ನು ಚಾರ್ಜ್‌ ಮಾಡುತ್ತಾರೆ. ಆದರೆ, ವೆಬ್‌ ಸಿರೀಸ್‌ಗೆ ಹೆಚ್ಚಿನ ಸಂಭಾವನೆ ತೆಗೆದುಕೊಂಡಿದ್ದಾರೆ ಎಂದು ರಂಗನಾಥನ್‌ ಹೇಳಿದ್ದಾರೆ.

ಲಸ್ಟ್‌ ಸ್ಟೋರೀಸ್‌ನಲ್ಲಿನ ಪಾತ್ರಕ್ಕಾಗಿ ಅವರು 7 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. 1 ಕೋಟಿ ರೂಪಾಯಿ ಹೆಚ್ಚು ಪಡೆದುಕೊಂಡಿದ್ದಕ್ಕೆ ಕಾರಣವೂ ಇದೆ ಎಂದು ರಂಗನಾಥನ್‌ ವಿವರಿಸಿದ್ದಾರೆ.

ಲಸ್ಟ್‌ ಸ್ಟೋರೀಸ್‌ನಲ್ಲಿ ಕಿಸ್ಸಿಂಗ್‌ ಹಾಗೂ ಬೆಡ್‌ ರೂಮ್‌ ಸೀನ್‌ಗಳಿದ್ದವು. ಆ ಕಾರಣಕ್ಕಾಗಿ ತಮನ್ನಾ ಒಂದು ಕೋಟಿ ರೂಪಾಯಿ ಹೆಚ್ಚಿನ ಚಾರ್ಜ್‌ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

'ಒಂದ್‌ ಗ್ಲಾಸ್‌ ಕೋಲಾ ಕುಡಿಯೋಕೆ ಅಲ್ಲಿಗೆ ಹೋಗಿದ್ಯಲ್ಲ..' ಸೋನು ಗೌಡ ಫಾರಿನ್‌ ಟ್ರಿಪ್‌ಗೆ ಭಯಂಕರ ಕಾಮೆಂಟ್ಸ್‌!

ಹಾಗೇನಾದರೂ ಯಾರಾದರೂ 2 ಕೋಟಿ ರೂಪಾಯಿ ಹೆಚ್ಚು ಕೊಡುತ್ತೇನೆ ಎಂದಾದಲ್ಲಿ, ತಮನ್ನಾ ಸಾರ್ವಜನಿಕವಾಗಿ ಯಾವುದನ್ನು ತೋರಿಸಬಾರದೋ, ಅದೆಲ್ಲವನ್ನೂ ತೋರಿಸುತ್ತಾರೆ ಎಂದು ರಂಗನಾಥನ್‌ ಹೇಳಿದ್ದಾರೆ.

ಪಿಂಕ್‌ ಸೀರೆಯಲ್ಲಿ ಅಪ್ಸರೆಯಂತೆ ಕಂಡ ಕಾಜೋಲ್‌, 'ನಿಮಗೆ ವಯಸ್ಸೇ ಆಗಿಲ್ಲ' ಅಂದ್ರು ಫ್ಯಾನ್ಸ್‌!

Latest Videos

click me!