ತೆರೆ ಮೇಲಿನ ಕೃಷ್ಣನನ್ನು ನೋಡಿ ಕಾಲಿಗೆ ಬಿದ್ದ ಯುವತಿ, ಪೂಜೆ ಮಾಡಿ ರಾಖಿ ಕಟ್ಟಿ ನಮನ

Published : May 07, 2026, 08:54 AM IST

'ಮಹಾಭಾರತ' ಧಾರಾವಾಹಿಯಲ್ಲಿ ಶ್ರೀಕೃಷ್ಣನ ಪಾತ್ರ ನಿರ್ವಹಿಸಿದ್ದ ನಟ ಸೌರಭ್ ರಾಜ್ ಜೈನ್ ಅವರನ್ನು ಕಂಡು ಯುವತಿಯೊಬ್ಬಳು ಭಾವುಕಳಾಗಿದ್ದಾಳೆ. ನಟನ ಕಾಲಿಗೆ ಬಿದ್ದು, ಪೂಜೆ ಸಲ್ಲಿಸಿ ರಾಖಿ ಕಟ್ಟುವ ಮೂಲಕ ತನ್ನ ಭಕ್ತಿಯನ್ನು ವ್ಯಕ್ತಪಡಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

PREV
15
ಶ್ರೀಕೃಷ್ಣ ಪಾತ್ರಧಾರಿ

ತೆರೆಯ ಮೇಲೆ ಕಾಣಿಸಿಕೊಳ್ಳುವ ನಟ-ನಟಿಯರನ್ನು ಪ್ರೇಕ್ಷಕರು ತುಂಬಾ ಇಷ್ಟಪಡುತ್ತಾರೆ. ಅವರು ಮಾಡುವ ನೆಗೆಟಿವ್ ಅಥವಾ ಪಾಸಿಟಿವ್ ಪಾತ್ರ ಯಾವುದೇ ಇರಲಿ, ಜನ ಅದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಪೌರಾಣಿಕ ಧಾರಾವಾಹಿಗಳ ವಿಷಯವೇ ಬೇರೆ. ದೇವರ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಟರ ಮೇಲೆ ಜನರಿಗೆ ವಿಶೇಷ ಗೌರವ, ಭಕ್ತಿ ಇರುತ್ತದೆ.

25
ವೀಕ್ಷಕರು ಕಣ್ಣಿಗೆ ದೇವರು

ತೆರೆ ಮೇಲೆ ಕಾಣಿಸಿಕೊಳ್ಳೋರು ನಟರು ಎಂಬ ವಿಷಯ ತಿಳಿದಿದ್ರೂ ಅವರನ್ನು ನಿಜವಾದ ದೇವರು ಎಂಬಂತೆ ಕಾಣುತ್ತಾರೆ. ಇಂತಹ ಅನೇಕ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಈಗ ಅದೇ ಸಾಲಿಗೆ ಮತ್ತೊಂದು ವಿಡಿಯೋ ಸೇರಿದೆ. ಶ್ರೀಕೃಷ್ಣ ಪಾತ್ರಧಾರಿಯನ್ನು ಕಂಡು ಯುವತಿ ನಮಸ್ಕರಿಸಿದ್ದಾರೆ.

35
ನಟ ಸೌರಭ್ ರಾಜ್ ಜೈನ್

'ಮಹಾಭಾರತ' ಧಾರಾವಾಹಿಯಲ್ಲಿ ಶ್ರೀಕೃಷ್ಣನಾಗಿ ನಟಿಸಿ ಜನರ ಮನಗೆದ್ದಿದ್ದ ಸೌರಭ್ ರಾಜ್ ಜೈನ್ ಅವರ ವಿಡಿಯೋ ವೈರಲ್ ಆಗುತ್ತಿದೆ. ಸೌರಭ್ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಇಲ್ಲಿಗೆ ಬಂದ ಶುಭ್ರಾ ಎಂಬ ಯುವತಿ, ಅವರನ್ನು ನೋಡಿದ್ದಾರೆ.

45
ಪೂಜೆ ಸಲ್ಲಿಸಿದ ಯುವತಿ

ತೆರೆಯ ಮೇಲೆ ತಮ್ಮನ್ನು ಭಕ್ತಿ ಲೋಕಕ್ಕೆ ಕೊಂಡೊಯ್ದ ನಟನನ್ನು ಕಣ್ಣೆದುರು ನೋಡಿದಾಗ ಆ ಯುವತಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಅವರು ಅಳುತ್ತಾ ಸೌರಭ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಅಷ್ಟೇ ಅಲ್ಲ, ಪೂಜಾ ಸಾಮಾಗ್ರಿಗಳೊಂದಿಗೆ ಸೌರಭ್ ಅವರಿಗೆ ಪೂಜೆ ಮಾಡಿ, ರಾಖಿ ಕೂಡ ಕಟ್ಟಿದ್ದಾರೆ. ಶುಭ್ರಾ ಅವರೇ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

55
ಭಕ್ತಿಯ ಕ್ಷಣ

"ಮಾಧವನನ್ನು ನೋಡಿದಾಗ, ನಾನು ಅವನೊಂದಿಗೆ ವೃಂದಾವನದಲ್ಲಿ ನನ್ನದೇ ಆದ ಲೋಕದಲ್ಲಿದ್ದೆ. ಅದು ಅಮೂಲ್ಯವಾದ ಕ್ಷಣ. ಅವರ ಜೊತೆ ಒಂದು ಫೋಟೋ ತೆಗೆದುಕೊಳ್ಳುವುದನ್ನು ಕೂಡ ನಾನು ಮರೆತುಬಿಟ್ಟೆ. ನನ್ನ ಕೈಗಳು ಮತ್ತು ಹೃದಯ ಜೋರಾಗಿ ನಡುಗುತ್ತಿತ್ತು. ರಾಖಿ ಕಟ್ಟಲು ಅನುಮತಿ ಕೇಳಿದಾಗ ಅವರು ಒಪ್ಪಿಕೊಂಡರು. ನಾನು ನಡುಗುತ್ತಲೇ ಇದ್ದೆ. ಅವರು ನನ್ನ ಕೈ ಹಿಡಿದಾಗ ಎಲ್ಲವೂ ಸಮಾಧಾನವಾಯಿತು" ಎಂದು ಶುಭ್ರಾ ವಿಡಿಯೋ ಜೊತೆಗೆ ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಲಕ್ಷಾಂತರ ವೀವ್ಸ್ ಬಂದಿದ್ದು, ಅನೇಕರು ಕಾಮೆಂಟ್ ಮಾಡಿ ಇದೊಂದು ಭಕ್ತಿಪೂರ್ವಕ ಕ್ಷಣ ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories