ಇಂಟರ್‌ನ್ಯಾಷನಲ್ ಸ್ಟಾರ್ ಕಲಾವಿದರು ನಟಿಸಿರುವ ಸಿನಿಮಾ 1400 ಕೋಟಿ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಹಾಲಿವುಡ್‌ನ ಖ್ಯಾತನಾಮರ ದಂಡೇ ಇದ್ದರೂ, ಈ ಚಿತ್ರವು ವಿಶ್ವಾದ್ಯಂತ ಕೇವಲ 6 ಕೋಟಿ ಗಳಿಸಿ, ಜಗತ್ತಿನ ಅತಿದೊಡ್ಡ ಫ್ಲಾಪ್‌ಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.
ಕಳೆದ ಒಂದು ದಶಕದಿಂದ ಸಿನಿಮಾಗಳ ಬಜೆಟ್ ಪ್ರಮಾಣ ಏರಿಕೆಯಾಗುತ್ತಿದೆ. 1000 ಕೋಟಿಯ ವಾರಾಣಸಿ, 4 ಸಾವಿರ ಕೋಟಿ ಬಜೆಟ್‌ನಲ್ಲಿ ರಾಮಾಯಣ ಸಿನಿಮಾ ನಿರ್ಮಾಣವಾಗುತ್ತಿದೆ. ಇದೇ ರೀತಿ ಬಿಗ್ ಬಿಜೆಟ್ ಹೊಂದಿರುವ ಎರಡು ಸಿನಿಮಾಗಳು ಚೀನಾದಲ್ಲಿ ಸಕ್ಸಸ್ ಆಗಿವೆ. ಹಾಗೆಯೇ ಕೆಲವೊಂದು ಸಿನಿಮಾಗಳು ಬಾಕ್ಸ್ ಆಫಿಸ್‌ನಲ್ಲಿ ಮುಗ್ಗರಿಸಿದ ಉದಾಹರಣೆಗಳಿವೆ
26
1400 ಕೋಟಿ ಹೂಡಿಕೆ
ಸೌದಿ ಅರೇಬಿಯಾದ ಸಿನಿಮಮಾವೊಂದರ ನಿರ್ಮಾಣಕ್ಕಾಗಿ 1400 ಕೋಟಿ ಹೂಡಿಕೆ ಮಾಡಿತ್ತು. ಈ ಸಿನಿಮಾದಲ್ಲಿ ಹಾಲಿವುಡ್ ಅಂಗಳದ ಸ್ಟಾರ್ ಕಲಾವಿದರು ನಟಿಸಿದ್ರೂ, ವೀಕ್ಷಕರನ್ನು ಸೆಳೆಯಲು ಸಂಪೂರ್ಣ ವಿಫಲವಾಯ್ತು. ಈ ಚಿತ್ರದ ನಿರ್ಮಾಣ ಸಂಸ್ಥೆ ಶೇ.99.6ರಷ್ಟು ನಷ್ಟವನ್ನು ಅನುಭವಿಸಿದೆ. ಈ ಸಿನಿಮಾ ಜಗತ್ತಿನ ಅತಿದೊಡ್ಡ ಫ್ಲಾಪ್ ಚಿತ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ.
36
ಡಿಸರ್ಟ್ ವಾರಿಯರ್
ನವೆಂಬರ್ 2021ರಂದು ಸೌದಿ ಮೀಡಿಯಾ ಗ್ರೂಪ್ MBC Group ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು. "ಡಿಸರ್ಟ್ ವಾರಿಯರ್" ಹೆಸರಿನ ನಿರ್ಮಾಣದ ಘೋಷಣೆ ಮಾಡಿದ್ದ MBC Studios, ಈ ಸಿನಿಮಾದಿಂದ ಸೌದಿ ಅರೇಬಿಯಾದ ಚಿತ್ರೋದ್ಯಮದ ಬೆಳವಣಿಗೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. JB Pictures, AGC Studios ಮತ್ತು Studio Mechanica ಮೂವರು ಸೇರಿಕೊಂಡು ಸಿನಿಮಾ ನಿರ್ಮಾಣ ಮಾಡಿದ್ದರು.
ಈ ಚಿತ್ರಕ್ಕೆ ರೈಸ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಖ್ಯಾತಿಯ ರೂಪರ್ಟ್ ವ್ಯಾಟ್ ಆಕ್ಷನ್ ಕಟ್ ಹೇಳಿದ್ದರು. ಮಾರ್ವೆಲ್‌ನ ಹೊಸ ಕ್ಯಾಪ್ಟನ್ ಅಮೇರಿಕಾ, ಆಂಟನಿ ಮ್ಯಾಕಿ, ಹಂಜಾಲಾ ಪಾತ್ರದಲ್ಲಿ ಮತ್ತು ಆಸ್ಕರ್ ವಿಜೇತ ಬೆನ್ ಕಿಂಗ್ಸ್ಲಿ, ಚಕ್ರವರ್ತಿ ಕಿಸ್ರಾ, ದಕ್ಷಿಣ ಆಫ್ರಿಕಾದ ನಟ ಶಾರ್ಲ್ಟೊ ಕೊಪ್ಲಿ, ಬ್ರಿಟಿಷ್-ಸೌದಿ ನಟಿ ಆಯೇಷಾ ಹಾರ್ಟ್ ಪ್ರಿನ್ಸೆಸ್ ಸೇರಿದಂತೆ ವಿಶ್ವದ ಸ್ಟಾರ್ ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರಿಂದ, ಬಿಡುಗಡೆಗೂ ಮುನ್ನವೇ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು.
56
ಎಷ್ಟು ಕಲೆಕ್ಷನ್?
ಸೌದಿ ಅರೇಬಿಯಾ, ಅಮೆರಿಕಾ ಸೇರಿದಂತೆ ಯಾವುದೇ ದೇಶದಲ್ಲಿಯೂ ಈ ಸಿನಿಮಾಗೆ ಒತ್ತಮ ಓಪನಿಂಗ್ ಸಿಗಲಿಲ್ಲ. ಉತ್ತರ ಅಮೆರಿಕಾದ 1010 ಸ್ಕ್ರೀನ್‌ಗಳಲ್ಲಿ ತೆರೆಕಂಡರೂ ಕೇವಲ $472K ಕಲೆಕ್ಷನ್ ಮಾಡಿತ್ತು. ಸೌದಿ ಅರೇಬಿಯಾದಲ್ಲಿ $87K, ಮಧ್ಯಪ್ರಾಚ್ಯದಲ್ಲಿ $140K ನೀರಸ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ ಕೇವಲ 6 ಕೋಟಿ ಕಲೆಕ್ಷನ್ ಮಾಡುವಲ್ಲಿ ಮಾತ್ರ ಡಿಸರ್ಟ್ ವಾರಿಯರ್ ಸಕ್ಸಸ್ ಆಗಿದೆ ಎಂದು ವರದಿಗಳು ಪ್ರಕಟವಾಗಿವೆ.
ಇಂಟರ್‌ನ್ಯಾಷನಲ್ ಸ್ಟಾರ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಸಿನಿಮಾ ಬಜೆಟ್ 1400 ಕೋಟಿಗೆ ಏರಿಕೆಯಾಗಿತ್ತು. 2025ರಲ್ಲಿ Zurich ಫಿಲಂ ಫೆಸ್ಟಿವಲ್‌ನಲ್ಲಿ ರಿಲೀಸ್ ಆಗುವ ಮುನ್ನ ಎರಡು ವರ್ಷ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿತ್ತು. ಅಂತಿಮವಾಗಿ 2026 ಏಪ್ರಿಲ್‌ನಲ್ಲಿ ಅಂತರಾಷ್ಟ್ರೀಯಮಟ್ಟದಲ್ಲಿ ಬಿಡುಗಡೆಯಾದ್ರೂ, ಥಿಯೇಟರ್‌ಗೆ ಪ್ರೇಕ್ಷಕರನ್ನು ಸೆಳೆಯಲು ಸಂಪೂರ್ಣವಾಗಿ ವಿಫಲವಾಯ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.