ನನ್ನ ಆಗಸ
ನನ್ನ ಪ್ರಪಂಚ
ನನ್ನತಪ್ಪಿಗೆ ಅಪ್ಪ ಡಂಡಿಸಿ ಮಂಡಿಯೂರಿಸಿ ಶಿಕ್ಷಿಸಿದಾಗ
ಸಂತೈಸುವ ಅಮ್ಮ ದೇವರಂತೆ ಕಂಡಳು!
ಕಾಲ ಉರುಳಿ ತಂದೆಯಾಗಿ ತಾತನಾಗಿ ನಿರ್ಗಮಿಸಿದ ಅಪ್ಪನ
ನೆನೆದಾಗ, ನನ್ನಯಶಸ್ಸಿನ ಬದುಕಿಗೆ ಅಧ್ಯಾಪಕ ಆಗಿದ್ದ ಅಪ್ಪ.
ತಂದೆಯ ತ್ಯಾಗ ತಂದೆಯಾದಾಗ ಅರಿವು
ತನ್ನನ್ನೇ ನೀಡಿ ಪ್ರೀತಿಮಾತ್ರ ಬೇಡುವ ಅನಾಥ ಅಪ್ಪ