ಸ್ಟಾರ್ ಹಿರೋ ಜೊತೆ ಲವ್ ಬ್ರೇಕಪ್.. ಟೀಮ್ ಇಂಡಿಯಾ ಕ್ರಿಕೆಟರ್ ಜೊತೆ ವಿಚ್ಛೇದನ, ಈಗ ಟಾಪ್ ಹಿರೋಯಿನ್!

Published : Apr 24, 2026, 03:07 PM IST

Celebrities who faced divorce and breakups Kannada: ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್ ಜೊತೆ ವಿಚ್ಛೇದನ, ಸ್ಟಾರ್ ನಟನ ಜೊತೆ ಬ್ರೇಕಪ್! ಈ ಸುಂದರಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ; ಆದರೂ ಫಿಟ್‌ನೆಸ್‌ನಲ್ಲಿ ಈಕೆಯೇ ಈಗ ಟಾಪ್. ಬ್ಲಾಕ್‌ ಬಸ್ಟರ್‌ ಮೂವಿಗಳಲ್ಲಿ ನಟಿಸಿರುವ ಇವರು ಯಾರು ಗೊತ್ತಾ?.

PREV
16
ಏರಿಳಿತಗಳಿಂದ ಕೂಡಿದ ಜೀವನ

ಸಾಮಾನ್ಯವಾಗಿ ಬೆಳ್ಳಿತೆರೆಯ ಮೇಲೆ ರಂಜಿಸುವ ತಾರೆಯರ ಜೀವನವೆಲ್ಲವೂ ಸುಗಮವಾಗಿ ಸಾಗುವುದಿಲ್ಲ ಅಥವಾ ಸಾಗಿರುವುದಿಲ್ಲ. ಗ್ಲಾಮರ್ ಪ್ರಪಂಚದಲ್ಲಿ ತಮ್ಮ ನಟನೆಯಿಂದ ಕಟ್ಟಿಹಾಕುವ ಸುಂದರಿಯರ ಜೀವನವು ಎಷ್ಟೋ ಏರಿಳಿತಗಳಿಂದ ತುಂಬಿರುತ್ತದೆ. ಎಷ್ಟೋ ಹೋರಾಟಗಳ ನಂತರ ಈ ಮಟ್ಟಕ್ಕೆ ತಲುಪಿರುತ್ತಾರೆ. ಈಗ ನಾವು ಮಾತನಾಡುತ್ತಿರುವ ನಟಿಯೊಬ್ಬರು ಈ ಸಿನಿ ಪಯಣದಲ್ಲಿ ಬ್ರೇಕಪ್, ಮದುವೆ, ವಿಚ್ಛೇದನ ಹೀಗೆ ಎಲ್ಲವನ್ನೂ ಅನುಭವಿಸಿದ್ದಾರೆ.

26
ಅಷ್ಟಕ್ಕೂ ಆಕೆ ಯಾರು?

ಹೌದು. ಆಕೆ ಇಂಡಸ್ಟ್ರಿಯಲ್ಲಿ ಹಿರೋಯಿನ್. ಓರ್ವ ಸ್ಟಾರ್ ನಟನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಅವರೊಂದಿಗೆ ಬ್ರೇಕಪ್ ಆಯಿತು. ಆನಂತರ ಟೀಮ್ ಇಂಡಿಯಾ ಕ್ರಿಕೆಟರ್ ಒಬ್ಬರನ್ನು ಪ್ರೀತಿಸಿ ಮದುವೆಯಾದರು. ಆದರೆ ಆ ಸಂಬಂಧವೂ ಕೂಡ ಹೆಚ್ಚು ದಿನ ಸಾಗಲಿಲ್ಲ. ಕೊನೆಗೆ ಪತಿಯಿಂದ ವಿಚ್ಛೇದನ ಪಡೆದು ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಅಷ್ಟಕ್ಕೂ ಆಕೆ ಯಾರು ಎಂದು ತಿಳಿದುಕೊಳ್ಳೋಣವೇ?.

36
'ಫಿಟ್‌ನೆಸ್ ಕ್ವೀನ್'

ನಾವು ಮಾತನಾಡುತ್ತಿರುವ ನಟಿಯ ಹೆಸರು ನತಾಶಾ ಸ್ಟಾಂಕೋವಿಕ್ (Natasa Stankovic). ಅವರ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವರು ಬಹಳ ಸಕ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 47 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ. ಹಾರ್ದಿಕ್ ಪಾಂಡ್ಯ ಅವರೊಂದಿಗಿನ ವಿವಾಹ ಸಂಬಂಧ ಮುರಿದುಬಿದ್ದ ಮೇಲೆ ಈಗ ತಮ್ಮ ಮಗ ಅಗಸ್ತ್ಯನೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ನತಾಶಾರನ್ನು 'ಫಿಟ್‌ನೆಸ್ ಕ್ವೀನ್' ಎಂದೂ ಕರೆಯುತ್ತಾರೆ.

46
ಅಲಿ ಗೋನಿ ಜೊತೆ ಕೇಳಿಬಂದಿತ್ತು ಹೆಸರು

ನತಾಶಾ ಕಳೆದ ಮಂಗಳವಾರ ಸಂಜೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಫೋಟೋಗಳಲ್ಲಿ ಅವರ ಫಿಟ್‌ನೆಸ್ ಸ್ಪಷ್ಟವಾಗಿ ಕಾಣಿಸುತ್ತಿದೆ. ಫೋಟೋ ಹಂಚಿಕೊಳ್ಳುತ್ತಾ, ಅವರು ಕ್ಯಾಪ್ಷನ್‌ನಲ್ಲಿ ‘ಶಿಸ್ತೇ ನನ್ನ ಹೆಮ್ಮೆ’ ಎಂದು ಬರೆದುಕೊಂಡಿದ್ದಾರೆ. ನತಾಶಾ ಮೂಲತಃ ಭಾರತದವರಲ್ಲ. ಅವರು ಸರ್ಬಿಯಾದಿಂದ ಭಾರತಕ್ಕೆ ಬಂದವರು. ಎಷ್ಟೋ ಕಷ್ಟಪಟ್ಟು ಅವರು ಈ ಮಟ್ಟಕ್ಕೆ ತಲುಪಿದ್ದಾರೆ. ಭಾರತಕ್ಕೆ ಬಂದ ನಂತರ, ಅವರ ಹೆಸರು ಅಲಿ ಗೋನಿ ಜೊತೆ ಕೇಳಿಬಂದಿತ್ತು. ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಅಲಿ ಮತ್ತು ನತಾಶಾ ‘ನಾಚ್ ಬಲಿಯೆ 9’ ಶೋನಲ್ಲಿ ಭಾಗವಹಿಸಿದ್ದರು.

56
ಹಾರ್ದಿಕ್ ಪಾಂಡ್ಯಗೆ ಹತ್ತಿರವಾದ ನತಾಶಾ

ಅಲಿ ಅವರಿಂದ ಬೇರ್ಪಟ್ಟ ನಂತರ, ನತಾಶಾ ಹಿರಿಯ ಕ್ರಿಕೆಟರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ಹತ್ತಿರವಾದರು. ಅವರಿಬ್ಬರೂ ಮೊದಲು ಪ್ರೀತಿಸಿ, ಆನಂತರ ಮದುವೆಯಾದರು. ಅವರಿಗೊಬ್ಬ ಮಗನಿದ್ದಾನೆ. ಆದರೆ ಇವರಿಬ್ಬರ ಬಂಧ ಹೆಚ್ಚು ದಿನ ಸಾಗಲಿಲ್ಲ. ಇತ್ತೀಚೆಗಷ್ಟೇ ಹಾರ್ದಿಕ್ ಮತ್ತು ನತಾಶಾ ಬೇರ್ಪಟ್ಟರು. ಅವರ ವೈವಾಹಿಕ ಜೀವನ ಅಂತ್ಯವಾಯಿತು.

66
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್

ಈಗ ಅಗಸ್ತ್ಯ ನತಾಶಾ ಜೊತೆಗಿದ್ದಾನೆ. ನತಾಶಾ ಈಗ ಮಾಡೆಲಿಂಗ್ ಜೊತೆಗೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಅವರು ಫಿಟ್‌ನೆಸ್ ಮೇಲೆ ಹೆಚ್ಚಿನ ಗಮನ ಹರಿಸುತ್ತಿದ್ದು, ಜಿಮ್‌ನಿಂದ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories