2025ನೇ ಇಸವಿಯಲ್ಲಿ ಹಲವು ಬಾಲಿವುಡ್ ಚಿತ್ರಗಳು ತೆರೆಕಂಡವು. ಆದರೆ, ಇವುಗಳಲ್ಲಿ ಕೆಲವು ನಿರ್ಮಾಪಕರ ಹಣವನ್ನು ಸಂಪೂರ್ಣವಾಗಿ ಮುಳುಗಿಸಿದವು. ಹಾಗಿದ್ರೆ ಆ ಸಿನಿಮಾಗಳು ಯಾವುವು ಅಂತ ನೋಡೋಣ ಬನ್ನಿ
ಕಂಗನಾ ರಣಾವತ್ ಅವರ 'ಎಮರ್ಜೆನ್ಸಿ' ಚಿತ್ರ 2025ರ ಮಹಾ ಫ್ಲಾಪ್ ಚಿತ್ರವಾಗಿತ್ತು. ಇದು ಕೇವಲ 16.52 ಕೋಟಿ ರೂಪಾಯಿ ಗಳಿಸಿತ್ತು.
28
ಮಸ್ತಿ
'ಮಸ್ತಿ' ಚಿತ್ರದ ನಾಲ್ಕನೇ ಭಾಗ ಫ್ಲಾಪ್ ಆಗಿತ್ತು. ರಿತೇಶ್ ದೇಶಮುಖ್, ವಿವೇಕ್ ಒಬೆರಾಯ್ ಮತ್ತು ಅಫ್ತಾಬ್ ಶಿವದಾಸಾನಿ ನಟಿಸಿದ್ದ ಈ ಚಿತ್ರ ಕೇವಲ 11.52 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
38
ದೇವಾ
ಶಾಹಿದ್ ಕಪೂರ್ ನಟನೆಯ 'ದೇವಾ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗಿತ್ತು. ಇದು 32.07 ಕೋಟಿ ರೂಪಾಯಿ ಗಳಿಸಿತ್ತು. ದೊಡ್ಡಮಟ್ಟದಲ್ಲಿ ನಿರೀಕ್ಷೆಯನ್ನು ಹುಟ್ಟಿಸಿತ್ತು,.
ಅಜಯ್ ದೇವಗನ್ ಅವರ 'ಸನ್ ಆಫ್ ಸರ್ದಾರ್ 2' ಚಿತ್ರ ಕೇವಲ 43.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಹೀಗಾಗಿ ಈ ಸಿನಿಮಾ ಫ್ಲಾಪ್ ಎಂದು ಸಾಬೀತಾಗಿತ್ತು. ಚಿತ್ರದ ಮೊದಲ ಭಾಗ ಮ್ಯೂಸಿಕಲ್ ಹಿಟ್ ಆಗಿತ್ತು. ಮುಂದುವರಿದ ಭಾಗ ಸೋಲಿನ ಸುಳಿಗೆ ಸಿಲುಕಿತು.
58
ದೇ ದೇ ಪ್ಯಾರ್ ದೇ 2
'ದೇ ದೇ ಪ್ಯಾರ್ ದೇ 2' ಚಿತ್ರದಲ್ಲಿ ಅಜಯ್ ದೇವಗನ್, ರಕುಲ್ ಪ್ರೀತ್ ಸಿಂಗ್ ಮತ್ತು ಆರ್ ಮಾಧವನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗಿತ್ತು. ಇದು 70.04 ಕೋಟಿ ರೂಪಾಯಿ ಗಳಿಸಿತ್ತು.
68
ಕೇಸರಿ ಚಾಪ್ಟರ್ 2
ಅಕ್ಷಯ್ ಕುಮಾರ್ ಅವರ 'ಕೇಸರಿ ಚಾಪ್ಟರ್ 2' ಚಿತ್ರ 93.28 ಕೋಟಿ ರೂಪಾಯಿ ಗಳಿಸಿತ್ತು. ಆದರೂ, ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.
78
ಸಿಕಂದರ್
'ಸಿಕಂದರ್' ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಸೇರಿದಂತೆ ಸ್ಟಾರ್ ಕಲಾವಿದರು ಪ್ರಮುಖ ಪಾತ್ರದಲ್ಲಿದ್ದರು. ಈ ಚಿತ್ರ ಒಟ್ಟು 103.45 ಕೋಟಿ ರೂಪಾಯಿ ಗಳಿಸಿತ್ತು.
88
ಬಾಘಿ 4
'ಬಾಘಿ 4' ಚಿತ್ರದಲ್ಲಿ ಟೈಗರ್ ಶ್ರಾಫ್ ಪ್ರಮುಖ ಪಾತ್ರದಲ್ಲಿದ್ದರು. ಆದರೂ, ಈ ಬಿಗ್ ಬಜೆಟ್ ಸಿನಿಮಾ ಅಷ್ಟೇನೂ ಕಲೆಕ್ಷನ್ ಮಾಡಲಿಲ್ಲ. ಇದು ಕೇವಲ 47.70 ಕೋಟಿ ರೂಪಾಯಿ ಗಳಿಸಿತ್ತು.