ಹಿಂದುವಾದರೂ ಕ್ರಿಶ್ಚಿಯನ್‌ ಧರ್ಮ ಫಾಲೋ ಮಾಡ್ತಿರೋ ನಟ ಗೋವಿಂದನ ಪತ್ನಿಯ ಶಾಕಿಂಗ್ ಹೇಳಿಕೆ

Published : Sep 20, 2024, 09:48 AM ISTUpdated : Sep 20, 2024, 02:35 PM IST

ಬಾಲಿವುಡ್‌ನ 90  ದಶಕದ ಖ್ಯಾತ ನಟ ಗೋವಿಂದ್ ಅವರ ಪತ್ನಿ ತಮ್ಮ ಧರ್ಮ ಹಾಗೂ ನಂಬಿಕೆಯ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದು, ಸುನೀತಾ ಅಹುಜಾ ಮಾತು ಕೇಳಿ ಅನೇಕರು ಅಚ್ಚರಿಗೊಳಗಾಗಿದ್ದಾರೆ ಹಾಗಿದ್ರೆ ಸುನೀತಾ ಅಹುಜಾ ಹೇಳಿದ್ದೇನು? ಇಲ್ಲಿದೆ ಡಿಟೇಲ್,

PREV
112
ಹಿಂದುವಾದರೂ ಕ್ರಿಶ್ಚಿಯನ್‌ ಧರ್ಮ ಫಾಲೋ ಮಾಡ್ತಿರೋ ನಟ ಗೋವಿಂದನ ಪತ್ನಿಯ ಶಾಕಿಂಗ್ ಹೇಳಿಕೆ

ಸುನೀತಾ ಅಹುಜಾ ಬಾಲಿವುಡ್‌ ಖ್ಯಾತ ನಟ ಗೋವಿಂದ ಅವರ ಪತ್ನಿ ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ತಮ್ಮ ಬದುಕು ಗೋವಿಂದ ಅವರಿಗಿದ್ದ ಕ್ರೇಜಿ ಲೇಡಿ ಫ್ಯಾನ್ ಬೇಸ್ ಬಗ್ಗೆ ಮಾತನಾಡಿದ್ದರು. ಈ ವೇಳೆ ಅವರು ತಾನು ಅರ್ಧ ಪಂಜಾಬಿ ಇನ್ನರ್ಧ ನೇಪಾಳಿ ಆದರೆ ಶಾಲಾ ದಿನಗಳಲ್ಲಿ ನಾನು ರಹಸ್ಯವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡೆ ಎಂದು ಹೇಳಿಕೊಂಡಿದ್ದಾರೆ.

212

ಅಂಕಿತ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನಲ್ಲಿ ಸುನೀತಾ ಆಹುಜಾ ಅವರು ಈ ಸಿಕ್ರೇಟ್ ರಿವೀಲ್ ಮಾಡಿದ್ದಾರೆ.  ನಾನು ಮುಂಬೈನ ಬಾಂದ್ರಾದಲ್ಲಿ ಜನಿಸಿದೆ ಹಾಗೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡೆ (baptised) ಹಾಗೂ ನನ್ನ ಎಲ್ಲಾ ಸ್ನೇಹಿತರು ಕ್ರಿಶ್ಚಿಯನ್‌ಗಳಾಗಿದ್ದರು ಎಂದು ಸುನೀತಾ ಹೇಳಿದ್ದಾರೆ.

312
sunita Ahuja

ಬಾಲ್ಯದಲ್ಲಿದ್ದಾಗ ನಾನು ಜೀಸಸ್‌ ರಕ್ತವೇ ವೈನ್ ಎಂದು ಕೇಳಲ್ಪಟ್ಟಿದ್ದೆ.  ಹಾಗೂ ವೈನ್‌ ಎಂದರೆ ಅಲ್ಕೋಹಾಲ್ ಎಂದು ನಾನು ಯೋಚಿಸಿದ್ದೆ, ಹಾಗೂ ಬಾಲ್ಯದಲ್ಲಿಯೇ ನಾನು ತುಂಬಾ ಖತರ್ನಾಕ್ ಆಗಿದ್ದೆ. ವೈನ್‌ ಕುಡಿಯುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ಯೋಚಿಸಿದ್ದೆ.

412

ನಾನು, ಕೇವಲ ಸ್ವಲ್ಪ ವೈನ್ ಕುಡಿಯುವುದಕ್ಕಾಗಿ ನನಗೆ ನಾನೇ ಬ್ಯಾಪಿಟೈಸ್ಡ್‌ (ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ) ಆದೆ. ನಾನು ಕ್ರಿಶ್ಚಿಯಾನಿಟಿಯನ್ನು ಫಾಲೋ ಮಾಡುತ್ತೇನೆ ಹಾಗೂ ನಾನು ಪ್ರತಿ ಶನಿವಾರ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಸುನೀತಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

512

ಬರೀ ಚರ್ಚ್‌ಗೆ ಮಾತ್ರವಲ್ಲ, ದರ್ಗಾ, ಗುರುದ್ವಾರ ಹಾಗೂ ದೇಗುಲಗಳಿಗೂ ಭೇಟಿ ನೀಡುತ್ತೇನೆ ಎಂದು ಸಂದರ್ಶನದಲ್ಲಿ ಸುನೀತಾ ಹೇಳಿದ್ದಾರೆ. ನಿಮ್ಮ ಈ ಮತಾಂತರದಿಂದ ಪೋಷಕರು ಬೇಸರಗೊಂಡಿದ್ದರೋ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುನೀತಾ ಅವರಿಗೆ ಈ ವಿಚಾರ ಯಾವತ್ತೂ ತಿಳಿದಿಲ್ಲ ಎಂದು ಹೇಳಿದ್ದಾರೆ.

612

ವಾರದ ಕೆಲ ದಿನಗಳಲ್ಲಿ ಉಪವಾಸ ಮಾಡುತ್ತೇನೆ  ಮತ್ತು ಆ ದಿನಗಳಲ್ಲಿ ಮಾಂಸವನ್ನು ತಿನ್ನುವುದಿಲ್ಲ ಎಂದು ಅವರು ಹೇಳಿದರು. ಅದೇ ಸಂದರ್ಶನದಲ್ಲಿ, ಅವರು ತನ್ನ ಮತ್ತು ನಟ ಗೋವಿಂದನ ನಡುವೆ ಇರುವ ಸಾಂಸ್ಕೃತಿಕ ಭಿನ್ನತೆಗಳನ್ನು ಪ್ರಸ್ತಾಪಿಸಿದರು. 

712
sunita Ahuja

ನಾನು ಮಿನಿಸ್ಕರ್ಟ್ ಧರಿಸುವುದನ್ನು ಅವರು ಇಷ್ಟಪಡುತ್ತಿರಲಿಲ್ಲ, ಅದಕ್ಕಾಗಿಯೇ ಅವರು ನನ್ನನ್ನು ದ್ವೇಷಿಸುತ್ತಿದ್ದನು. ಅದಕ್ಕೆ ನಾನು ಅವನಿಗೆ ಹೇಳಿದ್ದೆ, ನಾನು ಬಾಂದ್ರಾದವಳು, ನೀನು ವಿರಾರ್‌ನವರು ಬಾಸ್' ಎಂದು ಹೇಳಿದ್ದೆ. ಅದಕ್ಕೆ ಅವರು ಇಲ್ಲ ನನ್ನ ತಾಯಿ ಅದನ್ನು ಇಷ್ಟಪಡುವುದಿಲ್ಲ ಎಂದು ಹೇಳಿದ್ದರು ಎಂದು ಸುನೀತಾ ಹೇಳಿದ್ದಾರೆ.

812

ಇದೇ ಸಂದರ್ಶನದಲ್ಲಿ ನೀವು ಹಿಂದಿಬಿಗ್‌ಬಾಸ್‌ನಲ್ಲಿ ಭಾಗವಹಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುನೀತಾ, ನನಗೆ ಹಲವು ವರ್ಷಗಳ ಹಿಂದೆ ಬಿಗ್‌ಬಾಸ್ ಆಫರ್ ಬಂದಿತ್ತು. ಒಟಿಟಿ ವರ್ಷನ್‌ಗೂ ಆಫರ್ ಮಾಡಿದ್ದರು. ಇದನ್ನು ಅನಿಲ್ ಕಪೂರ್ ಹೋಸ್ಟ್ ಮಾಡುತ್ತಿದ್ದರು.  ಎರಡು ಬಾರಿ ಇದಕ್ಕಾಗಿ ನನ್ನ ಬಳಿ ಬಂದಿದ್ದರು.

912
sunita Ahuja

ಆದರೆ ನಿಮಗೇನಾದರು ಹುಚ್ಚು ಹಿಡಿದಿದೆಯೇ  ನಾನು ಟಾಯ್ಲೆಟ್ ಕ್ಲೀನ್ ಮಾಡುವೆ ಎಂದು ನಿಮಗನಿಸುತ್ತಾ? ನೀವು ನನಗೆ ಕೇಳಿದ ಇದೇ ಪ್ರಶ್ನೆಯನ್ನು ನಟ ಶಾರುಖ್ ಖಾನ್ ಪತ್ನಿಗೆ ಕೇಳುವಿರಾ?

1012

ನಾನು ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದೇನೆ ಎಂದು ನಿಮಗನಿಸುತ್ತಿದೆಯಾ? ಎಂದು ಪ್ರಶ್ನಿಸಿದ್ದೆ. ನಾನು ಬಿಗ್ಬಾಸ್ ಶೋವನ್ನು ನೋಡುವುದು ಇಲ್ಲ ಎಂದು ಸುನೀತಾ ಆಹುಜಾ ಹೇಳಿದ್ದಾರೆ.

 

1112

ಪ್ರೀತಿಸಿ ಮದುವೆಯಾದ ಸುನೀತಾ ಆಹುಜಾ ಅವರಿಗೆ ಯಶವರ್ಧನ್‌ ಹಾಗೂ ಟೀನಾ ಎಂಬ ಇಬ್ಬರು ಮಕ್ಕಳಿದ್ದಾರೆ, ಮಗ ಯಶ್‌ಗೆ ನೀಡುತ್ತಿರುವ ತುಂಬಾ ಕೇರಿಂಗ್ ಬಗ್ಗೆ ಮಾತನಾಡಿದ ಅವರು ಆಕೆ ತನ್ನ ಮಗಳು ಟೀನಾಗಿಂತ  8 ವರ್ಷ ಸಣ್ಣವನು.

ಇದನ್ನೂ ಓದಿ: ಜುಹುನಲ್ಲಿ ಮತ್ತೊಂದು ಐಷಾರಾಮಿ ಮನೆ ಖರೀದಿಸಿದ ಅಭಿಷೇಕ್ ಬಚ್ಚನ್

1212

ಯಶ್‌ ಹುಟ್ಟುವುದಕ್ಕೂ ಮೊದಲು ಹಾಗೂ ಟೀನಾ ನಂತರ ನಮಗೊಂದು ಹೆಣ್ಣು ಮಗು ಜನಿಸಿತ್ತು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ಮಗು ಮೂರು ತಿಂಗಳಲ್ಲಿ ನಮ್ಮನಗಲಿತ್ತು. ಹೀಗಾಗಿ ಯಶ್‌ ಮೇಲೆ ಇನ್ನು ಹೆಚ್ಚು ಕಾಳಜಿ ಬಂತು ಎಂದು ಸುನೀತಾ ಅಹುಜಾ ಭಾವುಕರಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಮನೆ ಕೆಲಸದವಳಾಗಿ ಬಂದು 20 ದಿನ ಮನೆಯಲ್ಲಿದ್ದ ನಟ ಗೋವಿಂದನ ಕ್ರೇಜಿ ಫಿಮೇಲ್‌ ಫ್ಯಾನ್‌

click me!

Recommended Stories