ಸಲ್ಮಾನ್ ಖಾನ್ ಬ್ಯಾಟಲ್ ಆಫ್ ಗಾಲ್ವಾನ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಾರಣ ಬಿಗ್ಬಾಸ್ನಿಂದ ವಾರಾಂತ್ಯದಲ್ಲಿ ಗೈರಾಗಿದ್ದರು. ಇದೇ ವೇಳೆ, ಕನ್ನಡದ Bigg Boss 12ಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಕಿಚ್ಚ ಸುದೀಪ್ ಮುಂದಿನ ನಾಲ್ಕು ಸೀಸನ್ಗಳಿಗೆ ನಿರೂಪಕರಾಗಿ ಮುಂದುವರಿಯಲಿದ್ದಾರೆ.
ಇತ್ತ ಕಿಚ್ಚ ಸುದೀಪ್ ಸಾರಥ್ಯದ ಬಿಗ್ಬಾಸ್-12ಕ್ಕೆ (Bigg Boss-12) ಕನ್ನಡದ ಬಿಗ್ಬಾಸ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಅದೇ ಇನ್ನೊಂದೆಡೆ, ಬೇರೆ ಬೇರೆ ಭಾಷೆಗಳ ಬಿಗ್ಬಾಸ್ ಕೂಡ ನಡೆಯುತ್ತಿದೆ, ಇನ್ನು ಕೆಲವು ಆರಂಭವಾಗಲಿವೆ. ಇದರ ನಡುವೆಯೇ ಸಲ್ಮಾನ್ ಖಾನ್ (Salman Khan) ನಡೆಸಿಕೊಡುವ ಬಿಗ್ಬಾಸ್ಗೆ ಬಹುದೊಡ್ಡ ಪ್ರೇಕ್ಷಕ ವರ್ಗವೇ ಇದೆ. ಇದಾಗಲೇ 18 ಸೀಸನ್ ಮುಗಿಸಿ 19ನೇ ಸೀಸನ್ ನಡೆಯುತ್ತಿದೆ.
27
ಸಲ್ಮಾನ್ ಖಾನ್ಗೆ ಜೀವ ಭಯ
ಕೃಷ್ಣಮೃಗ ಬೇಟೆಗೆ ಸಂಬಂಧಿಸಿದಂತೆ ಕ್ಷಮ ಕೋರದ ಸಲ್ಮಾನ್ ಖಾನ್ಗೆ ಇನ್ನೂ ಜೀವ ಭಯ ಕಾಡುತ್ತಿದೆ. ಇದೇ ಕಾರಣಕ್ಕೆ ಬಿಗಿ ಬಂದೋಬಸ್ತ್ ನಡುವೆ ಬಿಗ್ಬಾಸ್ ನಡೆಸಲಾಗುತ್ತಿದೆ. ಜೀವಭಯ ಇದ್ದರೂ ಬಿಗ್ಬಾಸ್ ನಡೆಸಿಕೊಡುತ್ತಿದ್ದಾರೆ ಸಲ್ಮಾನ್ ಖಾನ್. ಕೋಟಿ ಕೋಟಿ ಸಂಪಾದನೆ ಮಾಡುವ ಬಿಗ್ಬಾಸ್ ರಿಯಾಲಿಟಿ ಷೋ ಅನ್ನು ಬಿಟ್ಟುಕೊಡಲು ಸುಲಭದಲ್ಲಿ ಯಾರೂ ಒಪ್ಪದ ಕಾರಣ, ಜೀವ ಭಯದ ನಡುವೆಯೇ ಈ ಷೋ ನಡೆಸಿಕೊಡ್ತಿದ್ದಾರೆ ಸಲ್ಲು ಭಾಯಿ.
37
ವೀಕೆಂಡ್ನಲ್ಲಿ ಶಾಕ್
ಇದೀಗ ವೀಕೆಂಡ್ ವೀಕ್ಷಕರಿಗೆ ಶಾಕ್ ಒಂದು ಕಾದಿದೆ. ಅದೇನೆಂದರೆ ಸಲ್ಮಾನ್ ಖಾನ್ ಷೋಗೆ ಬರಲಿಲ್ಲ. ಅದರ ಬದಲು ಸ್ಟಾರ್ ನಟಿ ಫರ್ಹಾ ಖಾನ್ (Farah Khan) ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಜೀವಭಯವಿದ್ದ ಹಿನ್ನೆಲೆಯಲ್ಲಿ ಇದನ್ನು ನೋಡಿದ ಬಿಗ್ಬಾಸ್ ಪ್ರೇಮಿಗಳು ಸಲ್ಮಾನ್ ಖಾನ್ ಷೋ ಬಿಟ್ಟರಾ ಎಂದುಕೊಂಡಿದ್ದು ಇದೆ.
ಆದರೆ ಅಸಲಿಗೆ ಮೊದಲೇ ಹೇಳಿದ ಹಾಗೆ ಅಷ್ಟು ಸುಲಭದಲ್ಲಿ ಈ ಷೋ ಬಿಟ್ಟುಕೊಡುವುದಿಲ್ಲ ಸ್ಟಾರ್ ನಟರು. ಆದರೆ ವಾರಾಂತ್ಯದಲ್ಲಿ ಅವರು ಗೈರಾಗಿದ್ದ ಕಾರಣ ಸೆಕ್ಯುರಿಟಿಯೂ ಅಲ್ಲ. ಬದಲಿಗೆ ಸಲ್ಮಾನ್ ಖಾನ್ ಬ್ಯಾಟಲ್ ಆಫ್ ಗಾಲ್ವಾನ್ (Battle of Galwan) ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.
57
ಬಿಗ್ಬಾಸ್ನಲ್ಲಿ ವಿವಿಧ ಸೆಲೆಬ್ರಿಟಿಗಳು
ಇದಕ್ಕೆ ಪೂರಕವಾಗಿ, ಸಲ್ಮಾನ್ ಅವರ ಆಪ್ತ ಸ್ನೇಹಿತರಾದ ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ, ಚಲನಚಿತ್ರ ನಿರ್ಮಾಪಕಿ ಫರ್ಹಾ ಖಾನ್ ಅವರೊಂದಿಗೆ ವೀಕೆಂಡ್ ಕಾ ವಾರ್ ಅನ್ನು ಆಯೋಜಿಸಲು ಮುಂದಾಗಿದ್ದು, ಇದೀಗ ನಟಿ ಕಾಣಿಸಿಕೊಂಡಿದ್ದಾರೆ ಅಷ್ಟೆ. ಅಷ್ಟಕ್ಕೂ ಫರ್ಹಾ ಖಾನ್ ಅವರು ಹಾಸ್ಯಕ್ಕೆ ಫೇಮಸ್. ಆದ್ದರಿಂದ ಸ್ಪರ್ಧಿಗಳನ್ನು ರಂಜಿಸಿದ್ದಾರೆ. ಇದೇ ವೇಳೆ ಅಕ್ಷಯ್ ಮತ್ತು ಅರ್ಷದ್ ತಮ್ಮ ಮುಂಬರುವ ಚಿತ್ರ ಜಾಲಿ ಎಲ್‌ಎಲ್‌ಬಿ 3 ಅನ್ನು ಸಹ ಪ್ರಚಾರ ಮಾಡಿದರು.
67
ಕನ್ನಡದ ಬಿಗ್ಬಾಸ್
ಇನ್ನು ಕನ್ನಡದ ಬಿಗ್ಬಾಸ್ (Bigg Boss 12) ಕುರಿತು ಹೇಳುವುದಾದರೆ, ಇದೇ 28ರಿಂದ ಷೋ ಆರಂಭವಾಗಲಿದೆ. ಕೊನೆಯ ಬಿಗ್ಬಾಸ್ ಸೀಸನ್ನೇ ತಮ್ಮ ಅಂತಿಮ ಸೀಸನ್. ಯಾವುದೇ ಕಾರಣಕ್ಕೂ ಮುಂದಿನ ಬಿಗ್ಬಾಸ್ನಿಂದ ಕಾಣಿಸಿಕೊಳ್ಳಲ್ಲ ಎಂದು ಹೇಳಿದ್ದ ಕಿಚ್ಚ ಸುದೀಪ್ (Kicha Sudeep) ಕೊನೆಗೂ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದು, ಮುಂದಿನ ನಾಲ್ಕು ಸೀಸನ್ಗಳಲ್ಲಿಯೂ ಕಾಣಿಸಿಕೊಳ್ಳಲಿದ್ದೇನೆ ಎಂದಿದ್ದಾರೆ.
77
ಭರದ ಸಿದ್ಧತೆ
ಇದಾಗಲೇ ಕನ್ನಡದ ಬಿಗ್ಬಾಸ್ಗೆ ಭರದ ಸಿದ್ಧತೆ ನಡೆದಿದೆ. ಸ್ಪರ್ಧಿಗಳು ಅವರಾ, ಇವರಾ ಎಂದು ಒಂದಿಷ್ಟು ಹೆಸರು ಹರಿದಾಡುತ್ತಿದ್ದರೂ ಅಂತಿಮ ಪಟ್ಟಿ ಇನ್ನಷ್ಟೇ ರಿವೀಲ್ ಆಗಬೇಕಿದೆ. ಇದಾಗಲೇ ಈ ಕುರಿತು ಸಾಕಷ್ಟು ಪ್ರೊಮೋಗಳನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.