ಬಿಗ್‌ಬಾಸ್ ಮನೆಯಲ್ಲಿ ಲವ್, ರೊಮಾನ್ಸ್ ಅಲ್ಲಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕಿತ್ತಾಟ, ನಾನ್ಯಾರೋ ನೀನ್ಯಾರೋ ಎಂದುಕೊಳ್ಳುವುದೆಲ್ಲ ಸರ್ವೇ ಸಾಮಾನ್ಯ. ಇದು ಎಲ್ಲಾ ಭಾಷೆಗಳ ಬಿಗ್‌ಬಾಸ್‌ನಲ್ಲಿ ಕೇಳಿ ಬರುವುದೇ. ಆದರೆ ಹಾಗೆ ಮಾಡದೇ ʼಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಹೊರಕ್ಕೆ ಬಂದ ಮೇಲೂ ಅದೇ ರೀತಿ ಫ್ರೆಂಡ್‌ಷಿಪ್ ಉಳಿಸಿಕೊಂಡವರು ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ (Shishir Shastry)
27
ಸಾಕಷ್ಟು ಬಾರಿ ಜೊತೆ
ಈ ಜೋಡಿ ಹೊರಗಡೆ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದರಿಂದ, ಜೊತೆಗೆ ಒಟ್ಟಾಗಿ ಧರ್ಮಸ್ಥಳಕ್ಕೂ ಹೋಗಿ ಬಂದಿದ್ದರಿಂದ ಇವರಿಬ್ಬರ ಬಾಂಡಿಂಗ್ ಬೇರೆಯದ್ದೇ ಹೇಳುತ್ತಿದೆ ಎಂದು ಸಕತ್ ಚರ್ಚೆಯಾಗಿತ್ತು. ಇವರಿಬ್ಬರೂ ನಿಜ ಜೀವನದಲ್ಲಿ ಒಂದಾಗಲಿ, ಮದುವೆಯಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದರು. ಅದೇ ರೀತಿ, ಇವರಿಬ್ಬರ ಸ್ನೇಹ ಗಟ್ಟಿಯಾಗುತ್ತಲೇ ಸಾಗಿದೆ.
37
ಮದುವೆಯ ಬಗ್ಗೆ ಮಾತನಾಡದ ಜೋಡಿ
ಆದರೆ ಇದುವರೆಗೂ ಅವರು ತಮ್ಮ ಮದುವೆಯ ಬಗ್ಗೆ ಮಾತನಾಡಿರಲಿಲ್ಲ. ಮದುವೆಯ ಬಗ್ಗೆ ಪ್ರಶ್ನೆ ಕೇಳಿದ್ದ ಸಂದರ್ಭದಲ್ಲಿ, ಅವರು, ನಮಗಿಬ್ಬರಿಗೂ ಸಾಕಷ್ಟು ಮದುವೆ ಪ್ರಪೋಸಲ್ ಬಂದಿವೆ. ನಾವಿಬ್ಬರೂ ಬ್ಯುಸಿನೆಸ್ ಪಾರ್ಟನರ್ ಆಗಬಹುದು ಅಷ್ಟೇ, ಆದರೆ ಸಂಗಾತಿಗಳಾಗಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಹೀಗಾಗಿ ಈ ಮೂಲಕ ನಾವು ಪ್ರೇಮಿಗಳಲ್ಲ, ಮದುವೆ ಆಗಲ್ಲ ಎಂದಿದ್ದರು.
47
ಮದುವೆಯ ಹಿಂಟ್ ಕೊಟ್ಟರು!
ಆದರೆ, ಇದೀಗ ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು ಬೇರೆಯ ರೀತಿಯ ಹಿಂಟ್ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿಶಿರ್ ಅವರು, ನಮ್ಮ ಅಭಿಮಾನಿಗಳೂ ಇದನ್ನೇ ಕೇಳುತ್ತಿರುತ್ತಾರೆ. ನಿಮ್ಮನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ. ಯಾವಾಗ ಗುಡ್‌ನ್ಯೂಸ್ ಕೊಡುತ್ತೀರಿ ಎಂದು ಪ್ರಶ್ನಿಸುತ್ತಿರುತ್ತಾರೆ ಎಂದಿದ್ದಾರೆ.
57
ಕಾಲವೇ ಉತ್ತರಿಸತ್ತೆ ಎಂದ ಶಿಶಿರ್
ಇದಕ್ಕೆ ಉತ್ತರ ಕೊಡುವುದು ತುಂಬಾ ಬೇಗ ಆಯ್ತು ಅನಿಸತ್ತೆ ಎನ್ನುವ ಮೂಲಕ ಮದುವೆ ಆಗುವ ಛಾನ್ಸ್ ಇರುವ ಬಗ್ಗೆ ಪರೋಕ್ಷವಾಗಿ ನುಡಿದಿದ್ದಾರೆ. ಶಿಶಿರ್ ಹೇಳಿದ್ದು ಏನೆಂದರೆ, ಕಾಲಾವೇ ಇದಕ್ಕೆ ಉತ್ತರಿಸುತ್ತದೆ. ಯಾವಾಗ ಏನು ಆಗಬೇಕು ಅದು ಖಂಡಿತ ಆಗುತ್ತದೆ. ಈಗಲೇ ಏನೂ ಆ ಬಗ್ಗೆ ನಾವು ಯೋಚನೆ ಮಾಡಲಿಲ್ಲ. ಹೇಳಿಕೊಳ್ಳುವಂಥ ಕ್ಲಾರಿಟಿಗೆ ನಾವೂ ಬಂದಿಲ್ಲ ಎಂದಿದ್ದಾರೆ.
67
ಸದ್ಯ ಇಬ್ಬರೂ ಫುಲ್ ಬಿಜಿ
ಸದ್ಯ ನಮ್ಮಿಬ್ಬರ ಕಾನ್‌ಸಂಟ್ರೇಷನ್ ಇರುವುದು ನಮ್ಮ ಕೆಲಸದ ಮೇಲೆ ಇಬ್ಬರೂ ನಮ್ಮ ನಮ್ಮ ಫೀಲ್ಡ್‌ನಲ್ಲಿ ಬಿಜಿ ಆಗಿದ್ದೇವೆ. ನಾವಿಬ್ಬರೂ ಸೇರಿ ಹಲವು ಬ್ರಾಂಡ್‌ಗಳಿಗೆ ಪ್ರಮೋಟ್ ಮಾಡುತ್ತಿದ್ದೇವೆ. ಒಟ್ಟಿಗೇ ಬಿಜಿನೆಸ್ ಶುರು ಮಾಡಿದ್ದೇವೆ. ಆದರೆ ಈಗಲೇ ಮದುವೆಯ ಬಗ್ಗೆ ಏನೂ ಯೋಚಿಸಿಲ್ಲ. ಮುಂದೆ ನೋಡೋಣ ಎನ್ನುವ ಮೂಲಕ ಇಬ್ಬರೂ ಮದುವೆಯಾಗುವುದು ನಿಜ ಎಂದು ಪರೋಕ್ಷವಾಗಿ ನುಡಿದಿದ್ದಾರೆ.
77
ಟೀಕೆ ಮಾಡುವವರಿಗೆ ಉತ್ತರ
ಇದೇ ವೇಳೆ, ತಮ್ಮನ್ನು ಟ್ರೋಲ್ ಮಾಡುವವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಿಶಿರ್, ನನಗೆ ಇಂಥವರನ್ನು ನೋಡಿದ್ರೆ ಆಶ್ಚರ್ಯ ಆಗುತ್ತದೆ. ಯಾರೂ ಚೆನ್ನಾಗಿ ಇರೋದನ್ನು ಯಾಕೆ ನೋಡಲು ಆಗಲ್ಲ ಅವರಿಗೆ. ಹೋಗಲಿ ಬಿಡಿ, ಹೊಟ್ಟೆ ಉರಿದುಕೊಳ್ಳುವವರು ಉರಿದುಕೊಳ್ಳಲಿ, ಕೆಲಸ ಇಲ್ಲದಿದ್ದವರು ಹೀಗೆ ಮಾಡ್ತಾರೆ. ಮೊದಲಿಗೆ ಇಂಥ ಕಮೆಂಟ್ಸ್ ನೋಡಿದಾಗ ಬೇಸರ ಆಗ್ತಿತ್ತು. ಈಗ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.