Mrunal Thakur Relationship Fear: ಪ್ರೀತಿ ಮತ್ತು ತಮ್ಮ ಭಾವಿ ಸಂಗಾತಿಯ ಬಗ್ಗೆ ನಟಿ ಮೃಣಾಲ್ ತಾಕೂರ್ ಒಂದು ಸಂದರ್ಶನದಲ್ಲಿ ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಧನುಷ್ ಜೊತೆಗಿನ ಡೇಟಿಂಗ್ ನ್ಯೂಸ್ ಬೆನ್ನಲ್ಲೇ ನಟಿಯ ಈ ಮಾತುಗಳು ಮತ್ತಷ್ಟು ಚರ್ಚೆಗೆ ಗ್ರಾಸವಾಗಿವೆ.
ನಟಿ ಮೃಣಾಲ್ ತಾಕೂರ್ ಬಗ್ಗೆ ಪ್ರೀತಿಯ ವದಂತಿಗಳು ಇತ್ತೀಚೆಗೆ ಹೆಚ್ಚಾಗಿ ಸೋಶಿಯಲ್ ಮೀಡಿಯಾವನ್ನು ಆಕ್ರಮಿಸಿಕೊಂಡಿವೆ. ನಟಿ ಧನುಷ್ ಜೊತೆಯಲ್ಲಿ ಪ್ರೀತಿಯಲ್ಲಿದ್ದು, ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೀಗ ಮದುವೆ ಮತ್ತು ರಿಲೇಶನ್ ಶಿಪ್ ಕುರಿತು ತಮಗಿರೋ ಭಯಗಳ ಬಗ್ಗೆ ಮೃಣಾಲ್ ಮಾತನಾಡಿದ್ದಾರೆ.
24
ಭಯ ಆಗುತ್ತೆ ಎಂದ ನಟಿ
ಪ್ರೀತಿಯಲ್ಲಿ ತನಗೆ ದ್ರೋಹವಾಗುತ್ತದೆ ಎಂಬ ಭಯ ಇದೆ ಎಂದು ಯೂಟ್ಯೂಬರ್ ಮತ್ತು ಪಾಡ್‌ಕ್ಯಾಸ್ಟರ್ ರಣ್‌ವೀರ್ ಅಲ್ಲಾಬಾದಿಗೆ ನೀಡಿದ ಸಂದರ್ಶನದಲ್ಲಿ ಮೃಣಾಲ್ ಠಾಕೂರ್ ಹೇಳಿಕೊಂಡಿದ್ದಾರೆ. ನಿಜವಾದ ಪ್ರೀತಿಯೇ ತನಗೆ ಮುಖ್ಯ ಎಂದು ಹೇಳಿರುವ ನಟಿ ಮೃಣಾಲ್, ಶಾಲಾ-ಕಾಲೇಜು ಸ್ನೇಹಿತರ ಜೊತೆ ಇನ್ನೂ ಸಂಪರ್ಕದಲ್ಲಿದ್ದೇನೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
34
ಸಂಗಾತಿ ಬಗ್ಗೆ ಮಾತು
ಎಲ್ಲವೂ ಸರಿಯಾಗಿರುವ ವ್ಯಕ್ತಿಯ ಜೊತೆ ಜೀವನ ನಡೆಸುವ ಆಸೆ ಇಲ್ಲ ಎಂದು ಮೃಣಾಲ್ ಹೇಳಿದ್ದಾರೆ. ಪ್ರೀತಿಯಲ್ಲಿ ನಿರಾಸೆಯಾದರೂ ಅದನ್ನು ಜೀವನದ ಒಂದು ಭಾಗ ಎಂದು ಒಪ್ಪಿಕೊಂಡಿದ್ದೇನೆ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ. ಧನುಜ್ ಡಿವೋರ್ಸ್ ಪಡೆದುಕೊಂಡು ಪತ್ನಿಯಿಂದ ದೂರವಾಗಿ ಒಂಟಿಯಾಗಿ ವಾಸಿಸುತ್ತಿದ್ದಾರೆ.
ಆನಂದ್ ಎಲ್. ರೈ ನಿರ್ದೇಶನದ ಧನುಷ್ ಅವರ ಹೊಸ ಚಿತ್ರ 'ತೇರೆ ಇಷ್ಕ್ ಮೇ' ಚಿತ್ರದ ಬರಹಗಾರ್ತಿ ಮತ್ತು ನಿರ್ಮಾಪಕಿ ಕನಿಕಾ ಧಿಲ್ಲೋನ್ ಏರ್ಪಡಿಸಿದ್ದ ಪಾರ್ಟಿಯಲ್ಲಿ ಧನುಷ್ ಮತ್ತು ಮೃಣಾಲ್ ಭಾಗವಹಿಸಿದ್ದರು. ಪ್ರೀತಿ ಬಗ್ಗೆ ಇಬ್ಬರು ಯಾವುದೇ ಅಧಿಕೃತ ಹೇಳಿಕೆಯನ್ನು ಹೇಳಿಕೊಂಡಿಲ್ಲ. ಅಭಿಮಾನಿಗಳು ಮಾತ್ರ ಇಬ್ಬರ ಫೋಟೋ ಸೇರಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಲು ಆರಂಭಿಸಿದ್ದಾರೆ.